Breaking News
Home / BGAdmin (page 10)

BGAdmin

ಬೆಳಗಾವಿ: ರಿಕ್ಷಾ ಪಲ್ಟಿ : ಮಹಿಳೆ ಸಾವು

  ಬೆಳಗಾವಿ-ನಿಪ್ಪಾಣಿ-ಜತ್ರಾಟ ರಸ್ತೆಯಲ್ಲಿ ರಿಕ್ಷಾ ಪಲ್ಟಿಗೊಂಡ ಪರಿಣಾಮ ಮಹಿಳೆ ಮೃತಪಟ್ಟು ಚಾಲಕ ಸೇರಿ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಇಂದುಬಾಯಿ ರಾಮಚಂದ್ರ ಮೋರೆ( 70) ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಪ್ಪಾ ಸೋ ಪಾಟೀಲ(45), ಅವರ ಪತ್ನಿ ಸುರೇಖಾ (40), ಸಿದ್ದು ನರಾಟೆ (65)ಇವರೆಲ್ಲ ಗಂಭೀರವಾಗಿ ಗಾಯಗೊಂಡಿದ್ದು ಇವರೆಲ್ಲ ಜತ್ರಾಟ ನಿವಾಸಿಗಳು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಪ್ಪಾಣಿಯ ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಬೆಳಗಾವಿ-ಗೋವಾ ಸಂಚಾರ ಇನ್ಮುಂದೆ ಸುಗಮ….!!!

ಬೆಳಗಾವಿ- ಬೆಳಗಾವಿ- ಚೋರ್ಲಾ -ಗೋವಾ ರಸ್ತೆ ಅದೆಷ್ಟು ಹದಗೆಟ್ಟಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಈ ರಸ್ತೆ ತಗ್ಗು ದಿಣ್ಣೆಗಳಿಂದ ರಸ್ತೆಯ ಸ್ವರೂಪವನ್ನೇ ಕಳೆದುಕೊಂಡಿದೆ. ಈ ರಸ್ತೆಯ ಪರಿಸ್ಥಿತಿಯನ್ನು ಖುದ್ದಾಗಿ ಪರಶೀಲಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಸ್ತೆ ದುರಸ್ಥಿಗೆ ತುರ್ತು ಕ್ರಮ ಕೈಗೊಂಡಿದ್ದಾರೆ. ನಾಳೆ ಶನಿವಾರ 1-00 ಗಂಟೆಗೆ ಕಣಕುಂಬಿ ಹತ್ತಿರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಚೋರ್ಲಾ ರಸ್ತೆಯ ದುರಸ್ಥಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಸಂಪೂರ್ಣವಾಗಿ …

Read More »

ಸಿಂಗಲ್ ಲವ್ ಡಬಲ್ ದೋಖಾ….ಕಿತ್ತೂರಿನಲ್ಲಿ ಕಿತ್ತಾಟ…!!

ಬೆಳಗಾವಿ- ಪಕ್ಕದ ಮನೆ ಹುಡುಗಿಯ ಜೊತೆ ಲವ್ ಮಾಡಿ, ಕಳೆದ ಆರು ವರ್ಷಗಳಿಂದ ಸಂಬಂಧ ಬೆಳೆಸಿಕೊಂಡಿದ್ದ ಆ ಯುವಕ ಲವ್ ಮಾಡಿದ ಯುವತಿಯ ಜೊತೆ ತಾನು ಮದುವೆ ಆಗದೇ, ಬೇರೆ ಯುವಕನ ಜೊತೆ ಮದುವೆ ಮಾಡಿಕೊಂಡಿದ್ದ ಲವರ್ ಮದುವೆಯನ್ನು ಮುರಿದ ಮೋಸಗಾರ ಪ್ರೇಮಿ ಈಗ ಮನೆ ಬಿಟ್ಟು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ. ಕಿತ್ತೂರಿನ ಮುತ್ತುರಾಜ್ ಎಂಬ ಯುವಕ ಪಕ್ಕದ ಮನೆ ಹುಡುಗಿ ಜೊತೆ ಲವ್ …

Read More »

ಬೀದಿ ನಾಯಿಗಳ ದಾಳಿ, ನಾಲ್ವರು ಮಕ್ಕಳಿಗೆ ಗಾಯ…!!

  ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ.ಬೀದಿ ನಾಯಿಗಳ ಖತರ್ನಾಕ್ ಗ್ಯಾಂಗ್ ದಾಳಿ ಮಾಡಿದ್ದು ನಾಲ್ವರು ಮಕ್ಕಳು ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗಾವಿಯ ಮಹಾಂತೇಶ್ ನಗರದ ದೇಸಾಯಿ ಲಾನ್ ಹಿಂಬದಿಯಲ್ಲಿ ಬೀದಿ ನಾಯಿಗಳ ಸಾಮ್ರಾಜ್ಯ ನಿರ್ಮಾಣವಾಗಿದ್ದು ಇಲ್ಲಿ ಬೀದಿ ನಾಯಿಗಳ ದೊಡ್ಡ ಗ್ಯಾಂಗ್ ಇದೆ,ಈ ಗ್ಯಾಂಗ್ ನಿನ್ನೆ ಸಂಜೆ ಮಕ್ಕಳ ಮೇಲೆ ದಾಳಿ ಮಾಡಿದ್ದು ನಾಲ್ವರು ಮಕ್ಕಳು ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗಾವಿ ಮಹಾನಗರದಲ್ಲಿ …

Read More »

ಬೆಳಗಾವಿ: ಕಾರು ಮರಕ್ಕೆ ಗುದ್ದಿ ಆರು ಜನರ ದುರ್ಮರಣ

ಖಾನಾಪುರ (ಬೆಳಗಾವಿ ಜಿಲ್ಲೆ): ಪ್ರಯಾಣಿಕರ ಕಾರು ರಸ್ತೆ ಪಕ್ಕದ ಮರಕ್ಕೆ ರಭಸವಾಗಿ ಗುದ್ದಿದ ಪರಿಣಾಮ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನ ಚಾಲಕ ಸೇರಿದಂತೆ ಆರು ಜನರು ಮೃತಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಮಂಗೇನಕೊಪ್ಪ ಗ್ರಾಮದ ಹೊರವಲಯದ ಬೀಡಿ-ಬೆಳವಣಕಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ. ಸ್ವಿಫ್ಟ್ ಡಿಸೈರ್ ಪ್ರಯಾಣಿಕರ ಕಾರಿನಲ್ಲಿ ಕಿತ್ತೂರಿನಿಂದ ಬೀಡಿ ಮಾರ್ಗವಾಗಿ ಖಾನಾಪುರ ತಾಲ್ಲೂಕಿನ ಗೋಲಿಹಳ್ಳಿ ಗ್ರಾಮದ ಕಡೆ ಒಟ್ಟು 10 ಪ್ರಯಾಣಿಕರು ಸ್ವಿಫ್ಟ್ …

Read More »

ನಿತಿನ್ ಗಡ್ಕರಿ ಬೆಳಗಾವಿಗೆ ಬರ್ತಾರೆ ಜಾರಕಿಹೊಳಿ ಇರ್ತಾರೆ…!!

ಬೆಳಗಾವಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬೆಳಗಾವಿ ರಿಂಗ್ ರಸ್ತೆ ಹಾಗೂ ಉತ್ತರ ಕರ್ನಾಟಕದ ೮ ಜಿಲ್ಲೆಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪೂಜಾ ಸಮಾರಂಭಕ್ಕೆ ನಾಳೆ ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದು ಗುರುವಾರ ಮಧ್ಯಾಹ್ನ 12-30 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ. ಸತೀಶ್ ಜಾರಕಿಹೊಳಿ ಅವರೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರೂ ಹಾಗು …

Read More »

ಮುಸ್ಲಿಂ ಮುಖಂಡ ಫೈಜುಲ್ಲಾ ಮಾಡಿವಾಲೆ ಇನ್ನಿಲ್ಲ…

ಬೆಳಗಾವಿ- ಬೆಳಗಾವಿಯ ಹಿರಿಯ ಮುಸ್ಲಿಂ ಮುಖಂಡ ಫೈಜುಲ್ಲಾ ಮಾಡಿವಾಲೆ ಇಂದು ಸಂಜೆ ತೀವ್ರ ಹೃದಯಾಘಾತದಿಂದ ನಿಧನ ರಾಗಿದ್ದಾರೆ. ಫೈಜುಲ್ಲಾ ಮಾಡಿವಾಲೆ ಇವರು ಜೆಡಿಸ್ ಮುಖಂಡರಾಗಿದ್ದು ಮುಸ್ಲಿಂ ಸಮಾಜದ ನಾಯಕರಾಗಿದ್ದರು. ಸಮಾಜದ ಏಳಿಗೆಗೆ ನಿರಂತರವಾಗಿ ಶ್ರಮಿಸಿರುವ ಅವರು ಇಂದು ಸಂಜೆ ನಿಧನರಾಗಿದ್ದಾರೆ. ನಾಳೆ ಗುರುವಾರ ಬೆಳಗ್ಗೆ 11 ಗಂಟೆಗೆ ಬೆಳಗಾವಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಫೈಜುಲ್ಲಾ ಮಾಡಿವಾಲೆ ಇತ್ತಿಚಿಗೆ ವಿದೇಶ ಪ್ರವಾಸ ಮುಗಿಸಿ ಬೆಳಗಾವಿಗೆ ಮರಳಿದ್ದರು.

Read More »

ಪ್ರಪಾತಕ್ಕೆ ಬಿದ್ದರೂ ಪ್ರಾಣಾಪಾಯದಿಂದ ಪಾರು….!!!

ಬೆಳಗಾವಿ- ಅದೃಷ್ಟ ಅಂದ್ರೆ ಏನು ? ಅದು ಹೇಗಿರುತ್ತೆ ಅನ್ನೋದಕ್ಕೆ ಈ ಘಟನೆಯೇ ಅದಕ್ಕೆ ಸಾಕ್ಷಿ.ಬೈಕ್ ಸಮೇತ 100ಅಡಿ ಪ್ರಪಾತಕ್ಕೆ ಬಿದ್ದಿದ್ದ ಯುವಕ ಕೊನೆಗೂ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಚಿಕಲೆ ಫಾಲ್ಸ್ ಬಳಿ ಈ ಘಟನೆ ನಡೆದಿದೆ.ಖಾನಾಪುರ ಗೋವಾ ಗಡಿ ಭಾಗದಲ್ಲಿರುವ ಪ್ರಸಿದ್ಧ ಚಿಕಲೆ ಫಾಲ್ಸ್ ನೋಡಲು ದಿನನಿತ್ಯ ಸಾವಿರಾರು ಪ್ರವಾಸಿಗರು ಹೋಗ್ತಾರೆ,ಸ್ನೇಹಿತರ ಜತೆಗೆ ಚಿಕಲೆ ಫಾಲ್ಸ್ ನೋಡಲು ಹೋದಾಗ,ಬೆಳಗಾವಿ …

Read More »

ನ್ಯಾಶನಲ್ ಹಾಯವೇ.. ಬೆಳಗಾವಿಗೆ ಬಂಪರ್ ಕೊಡುಗೆ….

ಉತ್ತರ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ನೂತನ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಮಹತ್ವದ ಕೊಡುಗೆ-ಸಂಸದ ಈರಣ್ಣ ಕಡಾಡಿ ಬೆಳಗಾವಿ: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರ, ಕಲಬುರಗಿ, ಬೀದರ ಈ ಎಲ್ಲ ಜಿಲ್ಲೆಗಳಿಗೆ ಸುಮಾರು 376 ಕಿ.ಮೀ ಉದ್ದದ ಮತ್ತು 6975 ಕೋಟಿ ರೂ.ಗಳ ವೆಚ್ಚದಲ್ಲಿ ರಾಷ್ಟ್ರೀಯಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ …

Read More »

ಬೆಳಗಾವಿ: ಇಲೆಕ್ಷನ್ ತಂತ್ರ ಬೆಂಗಳೂರಿನಲ್ಲಿ ಕೈ ಪಾರ್ಟಿ ತಂತ್ರ…!!

ಬೆಳಗಾವಿ- ಲೋಕಸಭೆ ಚುನಾವಣೆ ಘೋಷಣೆಯಾಗುವ ದಿನಗಣನೆ ಶುರುವಾದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲೆಯ ರಾಜಕಾರಣ ಚುರುಕಾಗಿದೆ.ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರ ತುರ್ತು ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದಾರೆ. ಬೆಂಗಳೂರಿನಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಇಂದು ರಾತ್ರಿ 8-00 ಗಂಟೆಗೆ ಈ ಸಭೆ ನಡೆಯಲಿದೆ.ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಹಾಲಿ,ಕಾಂಗ್ರೆಸ್ …

Read More »