Breaking News
Home / Breaking News / ಬೆಳಗಾವಿ ಜಿಲ್ಲೆಯ ಮೊಟ್ಟಮೊದಲ ಕೊಳಚೆ ನೀರು ಸಂಸ್ಕರಣಾ ಘಟಕ.

ಬೆಳಗಾವಿ ಜಿಲ್ಲೆಯ ಮೊಟ್ಟಮೊದಲ ಕೊಳಚೆ ನೀರು ಸಂಸ್ಕರಣಾ ಘಟಕ.

ಬೆಳಗಾವಿ- ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮೊಟ್ಟಮೊದಲ ಕೊಳಚೆ ಸಂಸ್ಕರಣಾ ಘಟಕ ನಿರ್ಮಾಣಗೊಂಡು ಕಾರ್ಯಾರಂಭ ಮಾಡಿದ್ದು ಬರಗಾಲದ ಸಂಕಷ್ಟದಲ್ಲಿ ಇಲ್ಲಿಯ ರೈತರು ಈ ಘಟಕದ ನೀರಿನಿಂದ ತಮ್ಮ ಬೆಳೆಗಳಿಗೆ ಜೀವ ನೀಡುತ್ತಿದ್ದಾರೆ

ಬೈಲಹೊಂಗಲದ ಧಾರವಾಡ ರಸ್ತೆಯ ಸ್ಮಶಾನದ ಪಕ್ಕ ಕೊಳಚೆ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ 57 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಘಟಕದಲ್ಲಿ ಪ್ರತಿದಿನ 8.8 MLD ನೀರು ಸಂಸ್ಕರಣೆಗೊಂಡು ಪಕ್ಕದ ಗದ್ದೆಗಳಿಗೆ ಹರಿಯುತ್ತಿದೆ

ಬೈಲಹೊಂಗಲ ನಗರದಲ್ಲಿ 106 km ಉದ್ದದ ಕೊಳವೆ ಮಾರ್ಗ ನಿರ್ಮಿಸಿ ಬೈಲಹೊಂಗಲದ ಕೊಳಚೆ ನೀರನ್ನು ಘಟಕಕ್ಕೆ ತರಲಾಗುತ್ತಿದೆ ಘಟಕದಲ್ಲಿ ಬೃಹದಾಕಾರದ ಎರಡು ವೆಟ್ ವೆಲ್ ಗಳನ್ನು (ಬಾವಿಗಳನ್ನು) ನಿರ್ಮಿಸಿ ಆರು ಪಂಪ್ ಸೆಟ್ ಗಳ ಮೂಲಕ ಕೊಳಚೆ ನೀರನ್ನು ಪಂಪ್ ಮಾಡಿ ಸಂಸ್ಕರಣೆ ಮಾಡಲಾಗುತ್ತಿದೆ

ಸಂಸ್ಕರಣೆಗೊಂಡ ನೀರನ್ನು ಪೈಪ್ ಲೈನ್ ಮೂಲಕ ಸುತ್ತಮುತ್ತಲಿನ ಗದ್ದೆಗಳಿಗೆ ಹರಿದು ಬಿಡಲಾಗುತ್ತಿದೆ ಬೆಳಗಾವಿ ಜಿಲ್ಲೆಯಲ್ಲಿ ಮೊಟ್ಟಮೊದಲ ಕೊಳಚೆ ಸಂಸ್ಕರಣಾ ಘಟಕ ಇದಾಗಿದ್ದು ಗೋಕಾಕ ಪಟ್ಟಣದಲ್ಲಿಯೂ ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತಿದೆ ಈ ಘಟಕ ಮುಕ್ತಾಯದ ಹಂತದಲ್ಲಿದೆ

ಭೀಕರ ಬರಗಾಲದ ಸಂಕಷ್ಟದ ಸಮಯದಲ್ಲಿ ಕೊಳಚೆ ನೀರು ಸಂಸ್ಜರಣಾ ಘಟಕ ಈ ಭಾಗದ ಕೃಷಿ ಚಟುವಟಿಕೆಗಳಿಗೆ ಆಸರೆಯಾಗಿದೆ ಬೆಳಗಾವಿ ನೀರು ಸರಬರಾಜು ಮಂಡಳಿ ಬೈಲಹೊಂಗಲದ STP ರೆಡಿ ಮಾಡಿ ಬೆಳಗಾವಿ ನಗರದ ಹಲಗಾ ಗ್ರಾಮದಲ್ಲಿ STP ಘಟಕ ನಿರ್ಮಿಸಲು ಸಜ್ಜಾಗಿದೆ

ನೀರು ಸರಬರಾಜು ಮಂಡಳಿಯ ಅಧಿಕಾರಿ ಪ್ರಸನ್ನ ಮೂರ್ತಿ ಬೈಲಹೊಂಗಲದ ಕೊಳಚೆ ನೀರು ಸಂಸ್ಕರಣಾ ಘಟಕವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಈ ಭಾಗದ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

Check Also

ಲಕ್ಷ್ಮಣ ಸವದಿ ಕ್ಷೇತ್ರದಿಂದಲೇ ಪ್ರಿಯಾಂಕಾ ಪ್ರಚಾರ ಆರಂಭ…

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕರೆ ಅಥಣಿ: ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆಗಳನ್ನು ನೀಡಿದೆ. …

Leave a Reply

Your email address will not be published. Required fields are marked *