Breaking News
Home / Breaking News / ನಗರದಲ್ಲಿ ನಂಗಾ ನಾಚ್ ಅಡ್ಡೆಯ ಮೇಲೆ ಪೋಲೀಸರ ದಾಳಿ

ನಗರದಲ್ಲಿ ನಂಗಾ ನಾಚ್ ಅಡ್ಡೆಯ ಮೇಲೆ ಪೋಲೀಸರ ದಾಳಿ

ಬೆಳಗಾವಿ ನಗರದ ಪಬ್ ಮೇಲೆ ಪೋಲೀಸರ ದಾಳಿ

ಬೆಳಗಾವಿ- ಬೆಳಗಾವಿ ನಗರದಲ್ಲಿ ಕಿರ್ಲೋಸ್ಕರ್ ರಸ್ತೆಯಲ್ಲಿರುವ ಹೊಟೇಲ್ ನಲ್ಲಿ ಅಟ್ಟದ ಮೇಲೆ ಗುಟ್ಟಾಗಿ ನಡೆಯುತ್ತಿದ್ದ ಪಬ್ ಮೇಲೆ ಪೋಲೀಸರು ತಡರಾತ್ರಿ ದಾಳಿ ಮಾಡಿದ್ದಾರೆ

ವೀಕೆಂಡನಲ್ಲಿ ಅನಧಿಕೃತವಾಗಿ ಪಬ್ ನಡೆಸಿ ಡಿಜೆ ಡ್ಯಾನ್ಸ ಜೊತೆಗೆ ರಾತ್ರಿ ಹೊತ್ತು ಡ್ರಗ್ಸ ಸೇವನೆ ಮಾಡುತ್ತಿದ್ದ ಯುವಕರು ರಾತ್ರಿ ಹೊತ್ತು ಡ್ರಗ್ಸ ಅಮಲಿನಲ್ಲಿ ನಂಗಾ ನಾಚ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ
ಪ್ರತಿ ಶನಿವಾರ ವಿಕೆಂಡ್ ನೈಟ್ ಪಾರ್ಟಿ ಮಾಡಲು ನೂರಾರು ಜನ ಯುವಕರು ತಮ್ಮ ಗರ್ಲಪ್ರೆಂಡ್ ಜೊತೆ ಮಜಾ ಮಾಡುತ್ತಿದ್ದರು ಎಂದು ಹೇಳಲಾಗಿದ್ದು ವಿಕೆಂಡ್ ನೈಟ್ ನಲ್ಲಿ ಫ್ರೆಶ್ ಆಗಲು ಈ ಪಬ್ ನಲ್ಲಿ ರೂಮ್ ವ್ಯೆವಸ್ಥೆ ಕೂಡಾ ಇತ್ತೆಂದು ತಿಳಿದು ಬಂದಿದೆ

ಬೆಳಗಾವಿ ಖಡೇಬಜಾರದ ಕಿರ್ಲೋಸ್ಕರ್ ರಸ್ತೆಯಲ್ಲಿ ಇರುವ ಬಾರ್ ಆಂಡ್ ರೆಸ್ಟೋರೆಂಟ್ ಮೇಲೆ ನಿನ್ನೆ ತಡರಾತ್ರಿ ದಾಳಿ ಮಾಡಿದ ಪೋಲೀಸರು ಪಬ್ ನಡೆಸುತ್ತಿದ್ದ ಮಾಲೀಕನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ

ಡಿಸಿಪಿ ಸೀಮಾ ಲಾಟಕರ ನೇತ್ರತ್ವದಲ್ಲಿ ದಾಳಿ ನಡೆದಿದೆ
ದಾಳಿ ವೇಳೆ ಸಿಕ್ಕಿ ಬಿದ್ದ ಗುಂಡು ತುಂಡು ಪಾರ್ಟಿಗೆ ಬಂದಿದ್ದ ೨೦ಕ್ಕೂ ಅಧಿಕ ಜೋಡಿಗಳ ಹೆಸರನ್ನು ವಿಳಾಸ ಮತ್ತು ಅವರ ಅಡ್ರೆಸ್ ಪ್ರುಪ್ ಪಡೆದು ಅವರನ್ನು ಬಿಡುಗಡೆ ಮಾಡಿದ್ದಾರೆ

ಎಣ್ಣೆ ಪಾರ್ಟಿಗೆ ಬಂದಿದ್ದವರನ್ನ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ ಪೊಲೀಸರು. ಹೋಟೆಲ್ ವಿರುದ್ಧ ಎರಡು ಪ್ರತ್ಯೇಕ ಕೇಸ್ ದಾಖಲು ಮಾಡಿದ್ದಾರೆ

ಬೆಳಗಾವಿ ಖಡೇಬಜಾರ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಸಮಯ ಮೀರಿ ಮಧ್ಯರಾತ್ರಿ ವರೆಗೂ ಬಾರ್ ಆಂಡ್ ರೆಸ್ಟೋರೆಂಟ್ ನಡೆಸುತ್ತಿದ್ದಕ್ಕೆ ಹಾಗೂ ಲಾಡ್ಜ್ ನಲ್ಲಿ ವೇಶ್ಯಾವಾಟಿ ನಡೆಸುತ್ತಿರುವದಾಗಿ ಕೇಸ್ ದಾಖಲು. ಮಾಡಲಾಗಿದೆ ಎಂದು ತಿಳಿದು ಬಂದಿದೆ

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *