Breaking News
Home / Breaking News / ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು

ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು

ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ್ ಯೋಜನೆಯ ಅನುಷ್ಠಾನಕ್ಕಾಗಿ ಎರಡು ಕೋಟಿ ರೂ ಅನುದಾನ ಮಂಜೂರು ಮಾಡಿರುವದಾಗಿ ರಾಜ್ಯ ಗೃಹ ಸಚಿವಾಲಯ ದಿಂದ ನಗರ ಪೋಲೀಸ್ ಆಯುಕ್ತರಿಗೆ ಪತ್ರ ಬರೆದಿದೆ

ನಗರ ಪೋಲಿಸ್ ಇಲಾಖೆ ಈ ಎರಡು ಕೋಟಿ ಅನುದಾನದಲ್ಲಿ ನಗರದ RPD ವೃತ್ತ ರೇಲ್ವೆ ಥರ್ಡ ಗೇಟ್ ,ಆಝಂ ನಗರ ಸರ್ಕಲ್ ,ಗ್ಲೋಬ್ ಥೇಟರ್ ಸರ್ಕಲ್,ಮತ್ತು ಬಸವೇಶ್ವರ ಸರ್ಕಲ್ ( ಗೋವಾವೇಸ್ ಸರ್ಕಲ್)ಗಳಲ್ಲಿ ಹೊಸದಾಗಿ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸಲು ನಿರ್ಧರಿಸಿದೆ

ನಗರದಲ್ಲಿ ಟ್ರಾಫಿಕ್ ಮ್ಯಾನೇಜ್ ಮೆಂಟ್ ರೂಂ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದ್ದು ಇದೇ ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಟ್ರಾಫಿಕ್ ಮ್ಯಾನೇಜ್ ಮೆಂಟ್ ರೂಂ ಗೆ ನಗರದ ವಿವಿಧ ಸರ್ಕಲ್ ಗಳಿಂದ ಸಂಪರ್ಕ ಕಲ್ಪಿಸಲು ನಗರದಲ್ಲಿ 13 ಟಾವರ್ ಗಳನ್ನು ಅಳವಡಿಸಲಾಗಿದೆ

ಬೆಳಗಾವಿ ನಗರದ ಟ್ರಾಫಿಕ್ ನಿಯಂತ್ರಿಸುವ ಪೋಲೀಸರಿಗೆ ಸ್ಮಾರ್ಟ ಫೋನ್ ಗಳನ್ನು ನೀಡಿ ಈ ಸಾರ್ಟ ಫೋನ್ ಗಳ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಪೋಟೋಗಳನ್ನು ಕ್ಲಿಕ್ ಮಾಡಲಾಗುತ್ತದೆ ಈ ಫೋಟೋಗಳು ನೇರವಾಗಿ ಟ್ರಾಫಿಕ್ ಮ್ಯಾನೆಜ್ ಮೆಂಟ್ ರೂಮ್ ಗೆ ರವಾನೆ ಆಗುತ್ತವೆ ನಿಯಮ ಉಲ್ಲಂಘಿಸಿ ಪೋಲೀಸರ ಕಣ್ಣು ತಪ್ಪುಸಿ ಪರಾರಿಯಾದರೂ ದಂಡದ ಪಾವತಿ ಮನೆಗೆ ಬರುತ್ತದೆ

ನಗರದ ಆರು ಸರ್ಕಲ್ ಗಳಲ್ಲಿ ಹೊಸದಾಗಿ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸಿ ಈಗಾಗಲೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಅಡವಾನ್ಸ ಟೆಕ್ನಾಲಾಜಿಯ ಸಿಗ್ನಲ್ ಅಳವಡಿಸಲಾಗುವದು ಎಂದು ಡಿಸಿಪಿ(crime) ಅಮರನಾಥ ರೆಡ್ಡಿ ತಿಳಿಸಿದ್ದಾರೆ

ಅಂತೂ ಇಂತೂ ನಗರದ ಸಂಚಾರ ವ್ಯೆವಸ್ಥೆ ಸುಧಾರಿಸಲು ಬೆಳಗಾವಿ ಪೋಲೀಸರು ಹೈಟೆಕ ಹೆಜ್ಜೆ ಇಡುತ್ತಿರುವದು ಸಂತಸದ ಸಂಗತಿಯಾಗಿದೆ

Check Also

ಸ್ಥಳೀಯ ನಾಯಕರ ಒಗ್ಗಟ್ಟು,ಶೆಟ್ಟರ್ ಗೆ ಬಿಕ್ಕಟ್ಟು,ಬಿಜೆಪಿಯಲ್ಲಿ ಯಡವಟ್ಟು….!!!

ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರ್ರದ ಬಿಜೆಪಿ ಟಿಕೆಟ್ ಇನ್ನುವರೆಗೆ ಅಧಿಕೃತವಾಗಿ ಘೋಷಣೆ ಆಗಿಲ್ಲ ಆದ್ರೆ ಈ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ …

Leave a Reply

Your email address will not be published. Required fields are marked *