Breaking News
Home / Breaking News / ಜಿಲ್ಲಾ ಆಸ್ಪತ್ರೆಯ ಯಡವಟ್ಟು ಮಹಿಳಾ ರೋಗಿ ಮಿಸ್ಸಿಂಗ್

ಜಿಲ್ಲಾ ಆಸ್ಪತ್ರೆಯ ಯಡವಟ್ಟು ಮಹಿಳಾ ರೋಗಿ ಮಿಸ್ಸಿಂಗ್

ಬೆಳಗಾವಿ-

ಮತ್ತೆ ಬೆಳಗಾವಿ ಜಿಲ್ಲಾಸ್ಪತ್ರೆ ಸಿಬ್ಬಂದಿ ಯಡವಟ್ಟಿನಿಂದ ವಯೋವೃದ್ಧಿ ಮಹಿಳಾ ರೋಗಿಯೊಬ್ಬಳು ಮಿಸ್ಸಿಂಗ್ ಆಗಿದ್ದಾಳೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಸುಮೀತ್ರಾ ಸುರೇಶ ಜೋಶಿ 60 ವಯಸ್ಸು ಕಾಣೆಯಾದ ರೋಗಿ. ಕಳೆದ ಫೆಬ್ರುವರಿ 5ರಂದು ರೋಗಿ ಸುಮೀತ್ರಾಳನ್ನ ಜಿಲ್ಲಾಸ್ಪತ್ರೆಯ ಸೈಕ್ಯಾಟ್ರಿಕ್ ವಾರ್ಡನಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ರು. ನಿನ್ನೆ ಬೆಳಗ್ಗೆ 10.30ಕ್ಕೆ ಸೈಕ್ಯಾಟ್ರಿಕ್ ವಾರ್ಡನಿಂದ ರೋಗಿ ಸುಮೀತ್ರಾ ನಾಪತ್ತೆಯಾಗಿದ್ದಾಳೆ. ನಿನ್ನೆ ಸುಮೀತ್ರಾ ಪುತ್ರ ಶಶಿಧರ ಆಸ್ಪತ್ರೆಗೆ ಆಗಮಿಸಿ ಪರಿಶೀಲಿಸಿದಾಗ ಕಾಣೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣೇ ಶಶಿಧರ ಆಸ್ಪತ್ರೆ ಸಿಬ್ಬಂದಿಗೆ ನನ್ನ ತಾಯಿ ಎಲ್ಲಿ ಎಂದು ಪ್ರಶ್ನೆ ಮಾಡಿದ್ರು ಸೂಕ್ತ ಮಾಹಿತಿ ನೀಡಿಲಿಲ್ಲ. ಆಸ್ಪತ್ರೆ ಸಿಬ್ಬಂದಿ ಯಡವಟ್ಟಿನಿಂದ ನನ್ನ ತಾಯಿ ಕಾಣೆಯಾಗಿದ್ದಾಳೆಂದು ಆರೋಪಿಸಿದ್ದಾಳೆ

ಅತ್ತ ಆಸ್ಪತ್ರೆ ಸಿಬ್ಬಂದಿಗಳ ಹೇಳುವ ಕಥೆಯೇ ಬೇರೆ. ಸುಮೀತ್ರಾಳನ್ನ ಯಾರೋ ಅಪರಿಚಿತರ ತುರ್ತು ಚಿಕಿತ್ಸಾ ಘಟಕದಲ್ಲಿ ಬಿಟ್ಟು ಹೋಗಿದ್ರು. ಅವಳು ಮಾನಸಿಕ ಅಸ್ವಸ್ಥೆಯಾಗಿರುವುದರಿಂದ ಸೈಕ್ಯಾಟ್ರಿಕ್ ವಾರ್ಡಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಯಾರ ಗಮನಕ್ಕೂ ಬಾರದೆ ಅವಳು ಹೋಗಿದ್ದಾಳೆ. ಎಲ್ಲೆಡೆ ಅವಳನ್ನ ಹುಡುಕಾಟ ಮಾಡಿದ್ದೇವೆ. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ದೂರ ಸಹ ದಾಖಲಿಸುತ್ತಿದೇವೆ ಎಂದು ಹೇಳ್ತಾರೆ.

About BGAdmin

Check Also

ನಿವೇ ಮುಂದಿನ ಪ್ರಧಾನಿಯಾಗಿ ಎಂದ ಸಭಿಕ….ಸದ್ಯಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಪ್ಪ ಮುಂದೆ ನೋಡೋಣ ಎಂದ ಸಿದ್ರಾಮಯ್ಯ

ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದುದ್ದಕ್ಕೂ ಪದೇ ಪದೆ ಮಿಸ್ಟರ್ ಮೋದಿ, ಮಿಸ್ಟರ್ ಯಡಿಯೂರಪ್ಪ… ಎಂದು ಸಂಭೋದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ …

Leave a Reply

Your email address will not be published. Required fields are marked *

Facebook Auto Publish Powered By : XYZScripts.com