Breaking News
Home / Breaking News / ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪರ್ವ ಆರಂಭ

ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪರ್ವ ಆರಂಭ

ಬೆಳಗಾವಿ- ಬೆಳಗಾವಿಯ ಕಣಬರ್ಗಿ ರಸ್ತೆಯಲ್ಲಿರುವ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಾಳೆ ಮಂಗಳವಾರದಂದು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪರ್ವ ಆರಂಭವಾಗಲಿದೆ

ಬಾಂಗ್ಲಾ ದೇಶದ ಮಹಿಳಾ ಕ್ರಿಕೆಟ್ ತಂಡ ಮತ್ರು ಭಾರತದ ಮಹಿಳಾ ಕ್ರಿಕೆಟ್ ತಂಡ ಬೆಳಗಾವಿ ನಗರದ ಮೈದಾನಕ್ಕೆ ಬಂದಿದ್ದು ಬೆಳಗಾವಿಯಲ್ಲಿ ಅಭ್ಯಾಸ ನಡೆಸಿವೆ ಇಂದು ಮೈದಾನದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಉಭಯ ತಂಡಗಳ ನಾಯಕರು ಬೆಳಗಾವಿಯ ವಾತಾವರಣ ಚನ್ನಾಗಿದೆ ಕರ್ನಾಟಕ ಕ್ರಿಕೆಟ್ ಅಸೋಸೇಶಿಯನ್ ಎಲ್ಲ ರೀತಿಯ ಅನಕೂಲತೆಗಳನ್ನು ಕಲ್ಪಿಸಿ ಕೊಟ್ಟಿದೆ ನಾಳೆ ಮಂಗಳವಾರದಿಂದ ಮೂರು ದಿನಗಳ ವರೆಗೆ ಮೂರು ಟ್ವೆಂಟಿ- ಟ್ವೆಂಟಿ ಮ್ಯಾಚ್ ಗಳು ನಡೆಯುತ್ತವೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಂಗ್ಲಾ ತಂಡದ ನಾಯಕಿ ಸಲ್ಮಾ ಖಾತೂನ್ ತಮ್ಮ ತಂಡದಲ್ಲಿ ಏಳು ಜನ ಆಲ್ ರೌಂಡರ್ ಆಟಗಾರರಿದ್ದಾರೆ ಗೆಲ್ಲುವ ವಿಶ್ವಾಸ ಇದೆ ಎಂದರು

ಭಾರತ ತಂಡದ ನಾಯಕಿ ಅನುಜಾ ಪಾಟೀಲ ಮಾತನಾಡಿ ಬೆಳಗಾವಿಯ ಕ್ರಿಕೆಟ್ ಮೈದಾನ ಮತ್ತು ಇಲ್ಲಿಯ ಹವಾಗುಣ ಚನ್ನಾಗಿದ್ದು ಆಯೋಜಕರು ಒಳ್ಳೆಯ ವ್ಯೆವಸ್ಥೆ ಮಾಡಿದ್ದಾರೆ ಎಂದರು

About BGAdmin

Check Also

ಲಕ್ಷ್ಮೀ ಹೆಬ್ಬಾಳಕರ ನಾಮಿನೇಶನ್….ಗ್ರಾಮೀಣದಲ್ಲಿ ಕೈ ಪಾರ್ಟಿಗೆ ಫುಲ್ ಪ್ರಮೋಶನ್…..!!!!

ಬೆಳಗಾವಿ:- ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಲಕ್ಷ್ಮೀ ಆರ್. ಹೆಬ್ಬಾಳಕರ ರವರು ಇಂದು ಶುಕ್ರವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ …

Leave a Reply

Your email address will not be published. Required fields are marked *

Facebook Auto Publish Powered By : XYZScripts.com