Breaking News
Home / ಬೆಳಗಾವಿ ನಗರ / ರುಬೆಲ್ಲಾ, ದಡಾರ್ ಗೆ ನಾಳೆಯಿಂದ ಲಸಿಕೆ ಹಾಕಿಸಿ: ಡಿಸಿ ಮನವಿ

ರುಬೆಲ್ಲಾ, ದಡಾರ್ ಗೆ ನಾಳೆಯಿಂದ ಲಸಿಕೆ ಹಾಕಿಸಿ: ಡಿಸಿ ಮನವಿ

 

ಬೆಳಗಾವಿ:ದಡಾರ್, ರುಬೆಲ್ಲಾ ಭಯಾನಕ ಕಾಯಿಲೆಗಳಲ್ಲಿ ಪ್ರಮುಖ ರೋಗಗಳು ಫೆ. ೭ ನಾಳೆಯಿಂದ ಫೆ. ೨೮ ರವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಮ ತಿಳಿಸಿದರು.
ಇಂದು ಸುದ್ದಿಗೋಷ್ಠಿ ನಡೆಸಿದ ಅವರು ದಡಾರ್ ರುಬೆಲ್ಲಾ ನಿರ್ಮೂಲನೆಗೆ ಸರಕಾರ ಸಾಕಷ್ಟು ಲಸಿಕಾ ಹಾಗೂ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸುತ್ತಿದೆ. ಅದರಂತೆ ಬೆಳಗಾವಿ ಜಿಲ್ಲಾಡಳಿತ ಫೆ. ೭ ರಿಂದ ೨೮ ರವರೆಗೆ ಜಿಲ್ಲೆಯಾದ್ಯಂತ ಲಸಿಕಾ ಕಾರ್ಯಕ್ರಮ ಆರೋಗ್ಯ, ಶಿಕ್ಷಣ, ಪೊಲೀಸ್, ಕಾರ್ಮಿಕ ಇಲಾಖೆಗಳು ಸೇರಿದಂತೆ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಇಡೀ ಜಿಲ್ಲಾಡಳಿತವೇ ಸಜ್ಜುಗೊಂಡಿದೆ. ಜಿಲ್ಲೆಯ ಎಲ್ಲ ಜನತೆ ನಾಳೆಯಿಂದ ತಮ್ಮೂರಿನಲ್ಲೇ ಇಲ್ಲವೇ ಹತ್ತಿರದ ಲಸಿಕಾ ಕೇಂದ್ರಗಳಿಗೆ ತೆರಳಿ ತಮ್ಮ ೯ ತಿಂಗಳ ಹಸುಗೂಸಿನಿಂದ ೧೫ ವರ್ಷದ ಕಿಶೋರ ಮಕ್ಕಳಿಗೆ ಲಸಿಕೆ ಕೊಡಿಸುವುದು ಅತ್ಯಗತ್ಯ. ತಾವೆಲ್ಲ ಮಕ್ಕಳಿಗೆ ಯಾವುದೇ ಕಾರಣಕ್ಕೂ ಲಸಿಕೆ ಕೊಡಿಸಬೇಕು ಎಂದು ಜನತೆಗೆ ಕೋರಿದರು.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *