Breaking News
Home / Breaking News / ಹೂವಿನಿಂದ ಮಾಡ್ಯಾರ ಎತ್ತಿನ ಗಾಡಿ…ನೋಡಾಕ ಬರ್ರೀ ಓಡೋಡಿ…!!!!

ಹೂವಿನಿಂದ ಮಾಡ್ಯಾರ ಎತ್ತಿನ ಗಾಡಿ…ನೋಡಾಕ ಬರ್ರೀ ಓಡೋಡಿ…!!!!

ಬೆಳಗಾವಿ- ಹೂವು ಚೆಲುವೆಲ್ಲಾ ನಂದೆಂದಿತು ತನ್ನ ಅಂದ ನೋಡಲು ಬಾ..ಎಂದಿತು ಬೆಳಗಾವಿಯ ಕ್ಲಬ್ ರಸ್ತೆಯ ಹ್ಯೂಂ ಪಾರ್ಕ ನಲ್ಲಿ ತೋಟಗಾರಿಕೆ ಇಲಾಖೆ ಮಾಡಿರುವ ಹೂವಿನ ಅಲಂಕಾರ ಫಲಫುಷ್ಪಗಳ ಸೌಂಧರ್ಯ ನೋಡಲು ಎರಡು ಕಣ್ಣುಗಳು ಸಾಲೋದಿಲ್ಲ

ಇಂದು ಸಂಜೆ ಆರಂಭವಾಗುವ ತೋಟಗಾರಿಕೆ ಇಲಾಖೆಯ ಫಲ ಪುಷ್ಪ ಪ್ರದರ್ಶನ ಮೂರು ದಿನಗಳ ಕಾಲ ನಡೆಲಿದೆ ಫಲ ಫುಷ್ಪ ಪ್ರದರ್ಶನದಲ್ಲಿ ಏನೇನು ಇದೆ ಅಂತ ಹೇಳಿದರೆ ಸಾಲದು ಪ್ರತಿಯೊಬ್ಬರೂ ಬಂದು ನೋಡವ ಹಾಗೆ ಕ್ಲಬ್ ರಸ್ತೆಯ ಹ್ಯೂಂ ಪಾರ್ಕನ್ನು ಶೃಂಗಾರ ಮಾಡಲಾಗಿದೆ

ಸರ್ಕಾರದ ಲಾಂಛನದಲ್ಲಿರುವ ಗಂಡುಬೇರುಂಡ ಥರ್ಮಾಕಾಲ್ ನಲ್ಲಿ ಮಾಡಿರುವ ಹಂಪಿ ಕಲ್ಲಿನ ರಥ, ಹೂವಿನಲ್ಲಿಯೇ ಅರಳಿದ ಎತ್ತಿನ ಗಾಡಿ ಫಲ ಫುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ

ತರತರಹದ ತರಕಾರಿ,ಬಗೆಬಗೆಯ ಹೂವುಗಳು ವಿವಿಧ ಜಾತಿಯ ಬಾಳೆ ತಳಿ,ಒಂದೂ ಕೆಜಿ ಹೆಚ್ಚಿನ ತೂಕದ ಬದನೇಕಾಯಿ ಶುಂಠಿ ಹಣ್ಣುಗಳು ಫಲ ಪುಷ್ಪ ಪ್ರದರ್ಶನದಲ್ಲಿ ಇವೆ

ಥರ್ಮಾಕಾಲ್ ನಲ್ಲಿ ಮಾಡಿರುವ ಹಂಪಿ ಕಲ್ಲಿನ ರಥ ಅತ್ಯಂತ ಆಕರ್ಷಕ,ಹೂವಿನಲ್ಲಿ ಅರಳಿದ ಎತ್ತಿನ ಗಾಡಿ ಅತ್ಯದ್ಭುತ ತರ ಹೂವಿನಲ್ಲಿಯೇ ತೆಲೆ ಎತ್ತಿದ ಗಂಡುಬೇರುಂಡ ಪ್ರತಿಯೊಬ್ಬರು ನೋಡಲೇ ಬೇಕು
ಇಂದು ಸಂಜೆ ಐದು ಘಂಟೆಗೆ ಫಲಪುಷ್ಪ ಪ್ರದರ್ಶನವನ್ನು ಗಣ್ಯರು ಉದ್ಘಾಟಿಸುತ್ತಾರೆ ಸಂಜೆ ಸಮಯ ಸಿಕ್ಕರೆ ಕ್ಲಬ್ ರಸ್ತೆಯಲ್ಲಿರುವ ಹ್ಯೂಂ ಪಾರ್ಕೆಗೆ ತಪ್ಪದೇ ಭೇಟಿ ಕೊಡಿ ಕುಟುಂಬ ಸಮೇತ ಎಂಜಾಯ್ ಮಾಡಿ

About BGAdmin

Check Also

ಲಕ್ಷ್ಮೀ ಹೆಬ್ಬಾಳಕರ ನಾಮಿನೇಶನ್….ಗ್ರಾಮೀಣದಲ್ಲಿ ಕೈ ಪಾರ್ಟಿಗೆ ಫುಲ್ ಪ್ರಮೋಶನ್…..!!!!

ಬೆಳಗಾವಿ:- ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಲಕ್ಷ್ಮೀ ಆರ್. ಹೆಬ್ಬಾಳಕರ ರವರು ಇಂದು ಶುಕ್ರವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ …

Leave a Reply

Your email address will not be published. Required fields are marked *

Facebook Auto Publish Powered By : XYZScripts.com