Breaking News
Home / Breaking News / ಬೆಳಗಾವಿಯಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಶಾಹು ಮಹಾರಾಜರ ಪ್ರತಿಮೆ ನಿರ್ಮಿಸಲು ಪಾಲಿಕೆ ನಿರ್ಧಾರ

ಬೆಳಗಾವಿಯಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಶಾಹು ಮಹಾರಾಜರ ಪ್ರತಿಮೆ ನಿರ್ಮಿಸಲು ಪಾಲಿಕೆ ನಿರ್ಧಾರ

ಬೆಳಗಾವಿ ಕೆಎಲ್‍ಇ ರಸ್ತೆಯ ವೃತ್ತದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಛತ್ರಪತಿ ಶಾಹು ಮಹಾರಾಜರ ಪುತ್ಥಳಿ ನಿರ್ಮಾಣ ಮಾಡಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಠರಾವ್ ಪಾಸ್ ಮಾಡಿದರು.

ಶುಕ್ರವಾರ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಶಾಹು ಮಹಾರಾಜರ ಪುತ್ಥಳಿ ನಿರ್ಮಾಣ ಮಾಡುವ ಮುನ್ನ ಪಾಲಿಕೆ ಅಧಿಕಾರಿಗಳು ಹಾಗೂ ನಗರ ಸೇವಕರ ಒಳಗೊಂಡ ಸಮಿತಿ ರಚನೆ ಮಾಡಿ ಶೀಘ್ರದಲ್ಲಿಯೇ ಅದನ್ನು ಅನಾವರಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ರಸ್ತೆಗಳ ಅಭಿವೃದ್ಧಿ ಪಡೆಸಲು ಜಿಲ್ಲಾಧಿಕಾರಿಗೆ 50 ಲಕ್ಷ ರು.ಗಳ ಅನುದಾನ ನೀಡುವಂತೆ ಪಾಲಿಕೆಯಿಂದ ಮನವಿ ಮಾಡಲಾಗುವುದು ಎಂದು ಮೇಯರ್ ಬಸಪ್ಪ ಚಿಕ್ಕಲದಿನ್ನಿ ಠರಾವ್ ಪಾಸ್ ಮಾಡಿದರು.

ನಗರದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಅದನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ಅನುದಾನ ನೀಡುವಂತೆ ಪಾಲಿಕೆಯಿಂದ ಮನವಿ ಮಾಡಲಾಗುವುದು ಎಂದರು.

ಮಾಜಿ ಮೇಯರ್ ಸರಿತಾ ಪಾಟೀಲ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯ ಮೇಲೆ ಸರಕಾರಿ ಅಧಿಕಾರಿಯಾಗಿ ದೌರ್ಜನ್ಯ ಮಾಡಿರುವುದು ಖಂಡನೀಯ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೇಯರ್ ಅವರಿಗೆ ವಿನಂತಿಸಿದರು. ಇದಕ್ಕೆ ಧ್ವನಿಗೂಡಿದ ಸರಳಾ ಹೇರೇಕರ್ ಮಹಿಳೆಯರು ಎಲ್ಲರೂ ಒಂದೇ ಮಹಿಳೆಯ ಮೇಲೆ ದರ್ಪ ತೋರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪಾಲಿಕೆ ಆಯುಕ್ತ ಶಶಿಧರ ಕುರೇರ್ ಮಾತನಾಡಿ, ಈಗಾಗಲೇ ಆ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಸರಕಾರದ ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೇಯರ್ ಬಸಪ್ಪ ಚಿಕ್ಕಲದಿನ್ನಿ ಮಾತನಾಡಿ, ಸರಕಾರದ ಆದೇಶ ಬರುವವರೆಗೂ ಆ ಅಧಿಕಾರಿಯನ್ನು ರಜೆಯ ಮೇಲೆ ಕಳುಹಿಸುವಂತೆ ಸೂಚನೆ ನೀಡಿದರು.

54ನೇ ವಾರ್ಡನ ಭರತ್‍ನಗರದ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಮೀನಾಮೇಷ ಹಾಕುತ್ತಿದ್ದಾರೆ ಎಂದು ಆರೋಪಿಸಿ ಪಾಲಿಕೆ ಸದಸ್ಯೆ ಶಾಂತಾ ಉಪ್ಪಾರ ಶುಕ್ರವಾರ ಕೌನ್ಸಿಲ್ ಸಭೆಯಲ್ಲಿ ಬಾವಿಗೆ ಇಳಿದು ಧರಣಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆಯ ನಾಲ್ಕು ಬಾರಿ ಚುನಾವಣೆಯಲ್ಲಿ ಆಯ್ಕೆಯಾದರೂ ಅಧಿಕಾರಿಗಳು ಮಾತ್ರ ನನಗೆ ಗೌರವ ನೀಡುತ್ತಿಲ್ಲ. ಭರತ್ ನಗರ ಉದ್ಯಾನವನ ಹಾಗೂ ರಸ್ತೆ ಬದಿಯ ದೀಪ ಸೇರಿದಂತೆ ಮೂಲಭೂತ ಸೌಕರ್ಯದಿಂದ ವಂಚಿತಗೊಂಡಿದೆ. ಇದಕ್ಕೆ ಅನುದಾನ ನೀಡುವಂತೆ ಅಧಿಕಾರಿಗಳಲ್ಲಿ ಅಂಗಲಾಚಿದರೂ ಕೇಳುತ್ತಿಲ್ಲ. ಮತ ನೀಡಿದ ವಾರ್ಡ್‍ನ ಜನರು ಮನೆಗೆ ಬಂದು ಕೇಳುತ್ತಿದ್ದಾರೆ ಅವರಿಗೆ ಏನು ಉತ್ತರ ನೀಡಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು.

ಆಯುಕ್ತ ಶಶಿಧರ ಕುರೇರ ಮಾತನಾಡಿ, ಅಧಿಕಾರಿಗಳ ಮೇಲೆ ಆರೋಪ ಮಾಡುವ ಮುನ್ನ ಜವಾಬ್ದಾರಿ ಇರುವ ಪಾಲಿಕೆ ಸದಸ್ಯರು ನೋಡಿಕೊಂಡು ಮಾಡಬೇಕು. ಉದ್ಯಾನವನ ಹಾಗೂ ಬೀದಿ ದೀಪದ ಸಮಸ್ಯೆಯ ಬಗ್ಗೆ 58 ವಾರ್ಡ್‍ಗಳ ಸದಸ್ಯರಿಂದ ದೂರುಗಳು ಬಂದಿವೆ. ಈ ವಿಷಯವನ್ನು ಅಧಿಕಾರಿಗಳು ತೀರ್ಮಾನ ಮಾಡುವುದಿಲ್ಲ. ಎಲ್ಲ ಪಾಲಿಕೆ ಸದಸ್ಯರ ಸೂಚನೆ ಮೇರೆಗೆ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತದೆ. ಅಧಿಕಾರಿಗಳು ಸದಸ್ಯರು ಮಾಡುವ ಆರೋಪವನ್ನು ಕೇಳಿಕೊಂಡು ಹೋಗಲು ಬಂದಿಲ್ಲ. ಎಲ್ಲ ಸದಸ್ಯರ ವಾರ್ಡ್‍ನಲ್ಲಿ ಅಭಿವೃದ್ದಿಯಾಗಬೇಕು. ಪಾಲಿಕೆಯ ಅಧಿಕಾರಿಗಳು ಕೌನ್ಸಿಲ್ ನಿರ್ಣಯದ ಮೇಲೆ ಕೆಲಸ ಮಾಡುತ್ತೇವೆ ಎಂದರು.

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *