Breaking News
Home / ಕ್ರೈಮ್ ಸುದ್ದಿ / ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು

ಬೆಳಗಾವಿ- ಪ್ರೇಮಲೋಕದ ಇಬ್ಬರು ಪ್ರೇಮಿಗಳು ಪರಸ್ಪರ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದಾಗ ಅದಕ್ಕೆ ಮನೆಯವರ ಸಮ್ಮತಿ ಸಿಗದ ಕಾರಣ ಇಬ್ಬರು ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ‌

ಈ ಘಟನೆಯಲ್ಲಿ ಲಕ್ಷ್ಮೀ (೧೯) ಸಾವನ್ನೊಪ್ಪಿದ್ದು ಮಹಾಂತೇ ಘೋರ್ಪಡೆ (೧೯) ತೀವ್ರ ಅಸ್ವಸ್ಥನಾಗಿ ಮಹಾಂತೇಶನಿಗೆ ಘಟಪ್ರಭಾದಲ್ಲಿರುವ ಕರ್ನಾಟಕ ಹೆಲ್ತ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ದಾಖಲು.ಮಾಡಲಾಗಿದೆ

ನಿನ್ನೆ ತಡರಾತ್ರಿ ಹುಕ್ಕೇರಿಯಲ್ಲಿ‌ ವಿಷ ಸೇವಿಸಿದ ಪ್ರೇಮಿಗಳನ್ನ ಘಟಪ್ರಭಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮದ್ಯ ಲಕ್ಷ್ಮೀ ಸಾವನ್ನೊಪ್ಪಿದ್ದಾಳೆ ಇಬ್ಬರೂ ಹುಕ್ಕೇರಿ ತಾಲೂಕಿನ ಕಡಕಲಾಟ ಗ್ರಾಮದವರು ಎಂದು ತಿಳಿದು ಬಂದಿದೆ
ಹುಕ್ಕೇರಿಯ ಎಸ್ ಕೆ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು.ಲಕ್ಷ್ಮೀಗೆ ಪೋಷಕರು ಬೇರೆ ಕಡೆ ಗಂಡು ಹುಡುಕುತ್ತಿರುವುದರಿಂದ ಮನನೊಂದು ಕೃತ್ಯ ಮಾಡಿದ್ದಾರೆ ಎಂದು ಶಂಕಿಸಲಾಗಿದೆ
ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ.ದಾಖಲಾಗಿದೆ

About admin

Check Also

ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಓರ್ವನ ಸಾವು

ಬೆಳಗಾವಿ- ಹಲಗಾ ಸಮೀಪ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕಿತ್ತೂರ ತಾಲ್ಲೂಕಿನ ಬೈಲೂರ ಗ್ರಾಮದ ಯುವಕನೊಬ್ಬ ಸಾವನ್ನಪ್ಪಿದ್ದು …

Leave a Reply

Your email address will not be published. Required fields are marked *

Facebook Auto Publish Powered By : XYZScripts.com