Breaking News
Home / Breaking News / ದುಭೈಗೆ ಬೆಳಗಾವಿಯ ಮಹಿಳೆ ಮಾರಾಟ.ಜಾಲ ಪತ್ತೆ…!

ದುಭೈಗೆ ಬೆಳಗಾವಿಯ ಮಹಿಳೆ ಮಾರಾಟ.ಜಾಲ ಪತ್ತೆ…!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮಾರಾಟ ಅವ್ಯಾಹತವಾಗಿ ನಡೆದಿದೆ ಅನೇಕ ಜನ ಹೆಣ್ಣು ಮಕ್ಕಳಿಗೆ ನೌಕರಿ ಕೊಡಿಸುವ ನೆಪದಲ್ಲಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ ದಂಧೆ ಬೆಳಗಾವಿಯಲ್ಲಿ ನಡೆಯುತ್ತಿದೆ ಬೆಳಗಾವಿಯ ಮಹಿಳೆಯೊಬ್ಬಳನ್ನು ದುಬೈಗೆ ಮಾರಾಟ ಮಾಡಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ

ವಿದೇಶದಲ್ಲಿ ಕೆಲಸ ಕೊಡಿಸುವ ಆಮೀಷ ಒಡ್ಡಿ ವಿಧವೇ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆತಂಕಕಾರಿ ಸತ್ಯ ಬೆಳಕಿಗೆ ಬಂದಿದೆ. ಬೆಳಗಾವಿಯ ಏಜೆಂಟ್ ದಂಪತಿಗಳು ಈ ಆಪರೇಷನ್ನಿನ ಕೇಂದ್ರ ಬಿಂದುಗಳಾಗಿದ್ದು,ಬೆಳಗಾವಿಯಲ್ಲಿ ಮಹಿಳೆಯನ್ನ ಹತ್ತು ಲಕ್ಷಕ್ಕೆ ಮಾರಾಟ ಮಾಡಿರೋ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಹೀಗೆ ದುಬೈಗೆ ಮಾರಾಟವಾದ ಈಗ ನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಈ ಕುರಿತ ಒಂದು ವರದಿ ಇಲ್ಲಿದೆ.

ಇತ್ತಿಚಿನ ದಿನಗಳಲ್ಲಿ ಕೆಲಸ ಅರಸಿ ದೂರ ದೂರುಗಳಿಗೆ ವಲಸೆ ಹೋಗೊದನ್ನ ನಾವ್ ನೋಡಿದಿವಿ. ಅದರಲ್ಲೂ ಹೆಚ್ಚಿನ ಸಂಬಳದಾಸೆಗೆ ವಿದೇಶಗಳಿಗೂ ಹಾರುವ ಜನರು ನಮ್ಮಲ್ಲಿದ್ದಾರೆ. ಇಂತದ್ರಲ್ಲಿ ದುಬೈನಲ್ಲಿ ಕೆಲಸ ಕೊಡಿಸುವ ಆಮೀಷ ಒಡ್ಡಿ ಬೆಳಗಾವಿಯ ಅನಗೋಳದ ಜರಿನಾ ಸಂಗೊಳ್ಳಿ ಎಂಬ 40 ವರ್ಷದ ಮಹಿಳೆಯನ್ನ ಹತ್ತು ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಖುದ್ದು ಮಾರಾಟವಾದ ಮಹಿಳೆಯ ಮಗಳೆ ಬೆಳಗಾವಿ ಪೊಲೀಸ್ ಕಮೀಷನರ್ ಗೆ ದೂರು ನೀಡಿದ್ದಾಳೆ. ಇಂಥದೊಂದು ವ್ಯವಸ್ಥಿತವಾದ ಜಾಲ ಬೆಳಗಾವಿಯಲ್ಲಿ ಕೆಲಸ ಮಾಡುತ್ತಿದ್ದು, ವಿಧವೆ ಮಹಿಳೆಯರೇ ಇವರ ಟಾರ್ಗೇಟ್. ಕಳೆದ 10 ತಿಂಗಳ ಹಿಂದೆ ಜರಿನಾ ಸಂಗೋಳ್ಳಿಗೆ ದುಬೈನಲ್ಲಿ ಮನೆಗೆಲಸ ಕೊಡಿಸುವುದಾಗಿ ಹೇಳಿ, ಪ್ರತಿ ತಿಂಗಳು 20 ಸಾವಿರ ರೂಪಾಯಿ ಸಂಬಳವೂ ಕೊಡಿಸುವುದಾಗಿ ಹೇಳಿ ಪುಸಲಾಯಿಸಿದ್ದಾರೆ.

ಈ ಕೃತ್ಯದ ಕೇಂದ್ರ ಬಿಂದು ಬೆಳಗಾವಿ ಕ್ಯಾಂಪ್ ನಿವಾಸಿಗಳಾದ ವಹಿದಾ ಎಂಬ ಮಹಿಳೆ ಹಾಗೂ ಆಕೆಯ ಗಂಡ ಶಮಶುದ್ದಿನ್ ಮತ್ತು ಮುಂಬೈನ ಓರ್ವ ಏಜೆಂಟ್ ಸೇರಿ ಈ ಜಾಲವನ್ನ ವ್ಯವಸ್ಥಿತವಾಗಿ ನಡೆಸುತ್ತಿದ್ದು,ಜರಿನಾಳನ್ನ 10 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಮೊದ ಮೊದಲು ಚೆನ್ನಾಗಿದ್ದ ಜರಿನಾ ಇತ್ತಿಚೆಗೆ ದುಬೈನಲ್ಲಿ ಸಾಕಷ್ಟು ಚಿತ್ರಹಿಂಸೆ ಅನುಭವಿಸುತ್ತಿದ್ದಾಳಂತೆ. ಹಿಗಂತ ಖುದ್ದು ಜರಿನಾ ಬೆಳಗಾವಿಯ ತನ್ನ ಮಗಳಿಗೆ ಫೋನ್ ಮಾಡಿ ತಿಳಿಸಿದ್ದು, ಇಂಡಿಯಾಗೆ ಹೋಗ್ತಿನಿ ಅಂದ್ರೆ ಚಿತ್ರಹಿಂಸೆ ನೀಡಿ, ಹೊಡಿತಿದಾರೆ. ಒಂದು ಕೋಣೆಯಲ್ಲಿ ಕೂಡಿ ಹಾಕಿ ಊಟ ಕೂಡ ನೀಡುತ್ತಿಲ್ಲ. ಆದಷ್ಟು ಬೇಗ ನನ್ನನ್ನ ಈ ಕೂಪದಿಂದ ಪಾರು ಮಾಡಿ ಎಂದು ಬೇಡಿಕೊಂಡಿದ್ದಾಳೆ.

ಬೆಳಗಾವಿಯಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲ ಬೆಳಗಾವಿಯಲ್ಲೂ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಈಗ ಅನುಮಾನಗಳು ಹೆಚ್ಚಾಗಿದ್ದು, ಪೊಲೀಸರು ಪ್ರಕರಣದ ಆರೋಪಿಗಳನ್ನ ಕೂಡಲೇ ಬಂಧಿಸಿ ಜಾಲವನ್ನ ಬೇಧಿಸೋ ಮೂಲಕ ಮುಂದಾಗುವ ಹೆಚ್ಚಿನ ಅನಾಹುತವನ್ನ ತಪ್ಪಿಸಬೇಕಾಗಿದೆ.

About BGAdmin

Check Also

ಸಂಸದ ಸುರೇಶ ಅಂಗಡಿ ಮನೆಗೆ ಲಿಂಗಾಯತ ಮಹಾಸಭಾ ಮುತ್ತಿಗೆ

ಬೆಳಗಾವಿ- ಲಿಂಗಾಯತ ಧರ್ಮಕ್ಜೆ ಸ್ವತಂತ್ರ ಹಾಗೂ ಅಲ್ಪಸಂಖ್ಯಾತ ವರ್ಗದ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ …

Leave a Reply

Your email address will not be published. Required fields are marked *

WP Facebook Auto Publish Powered By : XYZScripts.com