Home / Breaking News / ತಂದೆಯ ಅಂತ್ಯಕ್ರಿಯೆಗೂ ಕರಗದ ಮಗನ ಮನಸ್ಸು….ಮಾನವೀಯತೆ ಸತ್ತಿದೆ..!!!

ತಂದೆಯ ಅಂತ್ಯಕ್ರಿಯೆಗೂ ಕರಗದ ಮಗನ ಮನಸ್ಸು….ಮಾನವೀಯತೆ ಸತ್ತಿದೆ..!!!

ಬೆಳಗಾವಿ-ಎಂಥ ಪಾಪಿ ಸತ್ತರೂ ಮನುಷ್ಯತ್ವ ಮನಸ್ಸು ಮರಗುತ್ತದೆ. ವೈರಿ ಸತ್ತರೂ ಅಂತಿಮ ದರ್ಶನ ಪಡೆದುಕೊಳ್ಳುವ ಅಂತಃಕರಣದ ಪರಂಪರೆ ಈ ನೆಲದಲ್ಲಿದೆ. ಒಂದು ಕಾಗೆ ಸತ್ತರೆ ಸುತ್ತಲಿನ ಎಲ್ಲ ಕಾಗೆಗಳು ಸೇರಿ ದುಃಖಿಸುತ್ತವೆ. ಮಂಗಸತ್ತರೆ ಜೊತೆಯಿರುವ ಮರಗುವ ಸನ್ನಿವೇಶಗಳನ್ನು ನಾವು ಈಗಲೂ ನೋಡುತ್ತೇವೆ. ಪ್ರೀತಿಸುವ ಮನುಷ್ಯ ಸತ್ತಾಗ ಅವನ ಹೆಣದ ಮೇಲೆಯೋ ಇಲ್ಲಾ ಗೋರಿಯ ಮೇಲೆ ಗೋನುಚಲ್ಲಿ ಕಣ್ಣೀರಿಟ್ಟ ನಾಯಿಗಳ ಮನ ಮಿಡಿಯು ಸನ್ನಿವೇಶಗಳು ಇನ್ನೂ ನೋಡಲು ಸಿಗುತ್ತವೆ.ಎಂಥ ಅಮಾನವೀಯತೆ ಇದೆ ಎಂದರೂ ಒಬ್ಬ ವ್ಯಕ್ತಿ ಸತ್ತಾಗ ಅಯ್ಯೋ ಪಾಪ ಎನ್ನುವ ಮನಸ್ಸುಗಳು ಇವೆ.

ಆದರೆ, ಇಂತಹ ಕರುಣೆಯ ಮನಸ್ಸುಗಳು ಕರುಗುತ್ತವೆ, ಮಂಗ, ನಾಯಿ, ಕಾಗೆಯಂತ ಪ್ರಾಣಿ ಪಕ್ಷಗಳು ನಾಚುವಂತೆ ಮನುಷ್ಯತ್ವ ಕಳೆದುಕೊಂಡು ಮನುಷ್ಯ ಸ್ವಾರ್ಥದ ತುದಿಗೆ ಧಾವಿಸುತ್ತಿದ್ದಾನೆ ಎನ್ನುವುದಕ್ಕೆ ಮಾನವೀತೆಗೆ ಸವಾಲು ಎನ್ನುವ ವರ್ತನೆಗಳು ಇತ್ತೀಚೆಗೆ ಬುದ್ದಿವಂತ ಮನುಷ್ಯನಿಂದ ಜಾಸ್ತಿಯಾಗುತ್ತಿವೆ. ಸ್ವಾರ್ಥದ ಮಿಂದು ಎದ್ದಂತೆ ವರ್ತಿಸುತ್ತಿರುವ ಮನುಷ್ಯನಿಗೆ ರಕ್ತ ಸಂಬಂಧಗಳನ್ನೂ ಲೆಖಕ್ಕೆ ತೆಗೆದುಕೊಳ್ಳುತ್ತಿಲ್ಲ. ಇಂತಹ ಒಂದು ಸಂದರ್ಭ ಬೈಲಹೊಂಗಲ ತಾಲೂಕಿನ ಗ್ರಾಮವೊಂದರ ನೆಲದಲ್ಲಿ ನಡೆದುಹೋಗಿದೆ.

ಜೀವಂತವಿದ್ದಾಗ ಮಕ್ಕಳ ತಂದೆ ತಾಯಿಯನ್ನ ಸರಿಯಾಗಿ ನೋಡದಿದ್ದರೂ ಚಿಂತೆಯಿಲ್ಲ, ಸತ್ತಾಗ ಶವಕ್ಕೆ ಚಿತೆಯಾದರೂ ಇಟ್ಟಾರು ಎಂದು ಮಕ್ಕಳ ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ. ಆದರೆ, ಜನ್ಮದಾತರು ಮಕ್ಕಳ ಮೇಲಿನ ಈ ಆಶೆಯನ್ನೂ ಇಂದು ಕೈಬಿಡಬೇಕಾಗುತ್ತದೆ ಎಂಬ ನಿದರ್ಶನವೊಂದು ಇಂದು ಬೆಳಗಾವಿಯ ಸದಾಶಿವ ನಗರದ ರುದ್ರಭೂಮಿಯಲ್ಲಿ ಇಂದು ಅಂತ್ಯಕ್ರಿಯೆ ನಡೆದಾಗ ದಕ್ಕಿದೆ.

ಬೈಲಹೊಂಗಲ ತಾಲೂಕಿನ ಎಂ.ಕೆ. ಹುಬ್ಬಳ್ಳಿ ಗ್ರಾಮದ ದುಂಡಪ್ಪ ಪಾಟೀಲ್ ವೃದ್ಧನ ಶವವನ್ನು ಲಿಂಗಾಯತ ಸಮುದಾಯದ ಸಂಪ್ರದಾಯದ ಪ್ರಕಾರ ದಪನ್ ಮಾಡಬೇಕಾಗಿತ್ತು. ಆದರೆ, ಶವ ಸಂಸ್ಕಾರ ಮಾಡುವ ಬುದ್ದಿವಂತ ಅನುಕೂಲಸ್ಥ ಮಗನೊಬ್ಬ ಎದರಿಗಿದ್ದರೂ ಅನಿರ್ಯವಾಗಿ ಸುಡುವುದರ ಮೂಲಕ ಸಂಸ್ಕಾರವನ್ನು ಸಾರ್ವಜನಿಕರು ನೆರವೇರಿಸಿದರು. ಲಿಂಗಾಯತ ಈ ವೃದ್ಧನ ಅಂತಿಮ ಸಂಸ್ಕಾರವನ್ನು ಮುಸ್ಲಿಮ ಸಮುದಾಯದವರು ಮುಂದಾಗ ನೆರವೇರಿಸಿದ್ದು ಇನ್ನೊಂದು ವಿಶೇಷತೆಯಾಗಿದೆ.

ಮೂಲತಃ ನಾವಲಗಟ್ಟಿ ಗ್ರಾಮದವನಾಗಿದ್ದು, ಮೃತ ದುಂಡಪ್ಪ ಪಾರ್ಶ್ವವಾಯು ಕಾರಣದಿಂದಾಗಿ ಕಳೆದ ಕೆಲ ದಿನಗಳಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೆ ಇಂದು ಅಸುನೀಗಿದ್ದಾರೆ. ವೃದ್ಧನಿಗೆ ಮೂವರು ಮಕ್ಕಳಿದ್ದು ಓರ್ವ ಮಗನಿರುವುದು ತಿಳಿದ ಕಾರಣ ತಂದೆ ಮರಣ ಹೊಂದಿರುವ ಬಗ್ಗೆ ಸುದ್ದಿ ತಿಳಿಸಿದಾಗ ತಂದೆಯ ಅಂತಿವ ಸಂಸ್ಕಾರಕ್ಕೆ ಆತ ಬರಲು ಸಿದ್ದನಿರಲಿಲ್ಲ. ಸಾರ್ವಜನಿಕರ ಇತ್ತಾಸೆಯ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ಆತ ಆಗಮಿಸಿದಾಗ ತಂದೆ ಶವ ಸ್ವಗ್ರಾಮಕ್ಕೆ ತೆಗೆದುಕೊಂಡ್ಯೋಗಿ ಸಂಸ್ಕರ ನೆರೆವೇರಿಸಲು ಸೂಚಿಸಿದಾಗ ತಂದೆಯ ಶವ ಊರಿಗೆ ತೆಗೆದುಕೊಂಡು ಹೋಗಲು ನಿರಾಕರಿಸಿದ್ದಾನೆ. ನಿಮ್ಮ ಸಂಪ್ರದಾಯದ ಪ್ರಕಾರ ಶವ ಹುಗಿಯಬೇಕಾಗುತ್ತದೆ ಊರಲ್ಲಿ ಸಂಸ್ಕಾರ ನೆರವೇರಿಸಲು ಸೂಚಿಸಿದರೂ ಒಪ್ಪದ ಮಗ *ಹುಗಿಯಬೇಕಾದ ಅವಶ್ಯಕತೆಯಿಲ್ಲ ಬೇಕಾದರೆ ಇಲ್ಲೇ ಆತನ ಶವ ಸುಟ್ಟುಹಾಕಿ* ಎಂದು ಸಲಹೆ ನೀಡಿದ್ದಾನೆ. ಮಗನಿಗೆ ಬೇಡವಾದ ತಂದೆಯ ಶವವನ್ನು ಎಲ್ಲರೂ ಸೇರಿ ಸದಾಶಿವ ನಗರದ ಶವಗಾರದಲ್ಲಿ ಅಂಗ್ನಿಸ್ಪರ್ಶದೊಂದಿಗೆ ಅಂತಿಮ ಕಾರ್ಯ ಮುಗಿಸಿದ್ದಾರೆ. ತಂದೆಯ ಈ ಕಾರ್ಯದಲ್ಲಿ ಭಾಗವಹಿಸಿದ ರಕ್ತ ಹಂಚಿಕೊಂಡ ಮಗ ತಲೆ ಮೇಲೆ ನೀರು ಸಿಂಪಡಿಸಿಕೊಂಡು ತನ್ನ ಕೆಲಸ ಮುಗಿಯಿತು ಎಂದು ತನ್ನೂರಿಗೆ ತೆರಳಿದ್ದಾನೆ.

ಈ ಮಗ ಮೃತ ದುಂಡಪ್ಪನನ್ನು ಸರಿಯಾಗಿ ಪಾಲನೆ ಮಾಡಲಿ. ಕ್ಷಲ್ಲಕ ಕಾರಣಕ್ಕೆ ಮನೆ ಊರು ಬಿಟ್ಟು ಹೊರ ಬಂದ ತಂದೆ ಹೇಗಿದ್ದಾನೆ, ಏನೂ ಮಾಡುತ್ತಿದ್ದಾನೆ. ಹೇಗೆ ಜೀವಿಸುತ್ತಿದ್ದಾನೆ ಎಂದು ಒಂದಿಷ್ಡು ಯೋಚಿಸಿದ ಬಹದ್ದೂರ.

ಹಾಗೆ ಊರು ಬಿಟ್ಟು ಹೊರ ಬಂದ ಊರೂರು ಅಲೆದಾಡಿ ಕಳೆದ ಹತ್ತು ವರ್ಷಗಳಿಂದ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ. ನೆಲೆ ಹುಡುಕಿಕೊಂಡು ಬಂದ ದುಂಡಪ್ಪಗೆ ಎಂ.ಕೆ. ಹುಬ್ಬಳ್ಳಿಯ  ಮುಸ್ಲಿಮ ಸಮುದಾಯ ಅಂತಃಕರಣ ವ್ಯಕ್ತಿ ತಮ್ಮ ಮನೆಯಲ್ಲಿ ಒಂದು ಕೊಣೆಯನ್ನು ನೀಡಿ ಉಳಿದುಕೊಳ್ಳು ಆಶ್ರಯ ಕಲ್ಪಿಸಿಕೊಡುತ್ತಾನೆ.  ಈ ಆಶ್ರಯದ ಕಾರಣ ಕಳೆದ ಅನೇಕ ವರ್ಷದಿಂದ ದುಂಡಪ್ಪ ಇದೇ ಗ್ರಾಮದಲ್ಲಿ ಸಣ್ಣಪುಟ್ಟ ಕೆಲ ಮಾಡಿಕೊಂಡಿ ಕಾಲ ದೂಡುತ್ತಿದ್ದ. ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಪಾರ್ಶ್ವವಾಯು ಆಗಿ ಚಿಕಿತ್ಸೆಗೆಂದು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಂದೆಗೆ ಆದ ಈ ಅನಾರೋಗ್ಯ ಪರಿಸ್ಥಿತಿಯನ್ನು ಜೀವಂತ ಇರುವ ಮಗನಿಗೆ ಉಳಿದ ಮಕ್ಕಳಿಗೆ ವಿಷಯ ತಿಳಿಸಿದರೂ ಯಾವ ಒಬ್ಬ ಮಕ್ಕಳೂ ತಂದೆಯ ಕಡೆ ಸುಳಿಯಲಿಲ್ಲ. ಜನ್ಮ ನೀಡಿದ ತಂದೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯ ಹೋರಾಡುತ್ತಿರುವುದೂ ಈ ಮಕ್ಕಳ ಕರುಳಿಗೆ ತಾಗದೇ ಇರುವುದ ಕಂಡು ಸಾರ್ವಜನಿಕರು ಮರಗಿದರು.

ಮಕ್ಕಳಿಗೆ ಬೇಡವಾದ ತಂದೆ ಮಕ್ಕಳ ಮುಖ ನೋಡದೆ ಇಂದು ಬೆಳಗ್ಗೆ ದುಂಡಪ್ಪ ಪಾಟೀಲ್ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

ಮೃತಪಟ್ಟ ವಿಷಯ‌ ತಿಳಿದ ನಂತರ ತಡವಾಗಿ ಮಗ ಒಬ್ಬನೇ ಆಸ್ಪತ್ರೆಗೆ ಆಗಮಿಸಿದ್ದಾನೆ. ಸ್ವತಃ ಗ್ರಾಮಕ್ಕೆ ತಂದೆಯ ಶವ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲು ನಿರಕಾರಿಸಿದ್ದಾನೆ. ಇನ್ನೂ ದುಂಡಪ್ಪ ಅಲ್ಪಸ್ವಲ್ಪ ಕೂಡಿಟ್ಟ ಹಣನ್ನು ಸಹ ಸ್ಥಳೀಯರು ಆತನ ಮಗನಿಗೆ ನೀಡಿದ್ದಾರೆ. ಈ ಹಣದಲ್ಲಿಯೆ ತಂದೆಯ ಅಂತ್ಯಕ್ರಿಯೆ ನಡೆದದ್ದು, ವೃದ್ಧಜೀವ ಮಕ್ಕಳ ಋಣವಿಲ್ಲದೆ ಬಾರದ ಲೋಕಕ್ಕೆ ತೆರಳಿದ್ದಾರೆ.

ಇದಕ್ಕೆ ಅನ್ನೊದು *ಮಾನವೀಯತೆ ಸತ್ತಿದೆ* ಎಂದು

Check Also

28 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ರಂಗೇರಿದೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಚುನಾವಣಾ ಪ್ರಚಾರದ ಅವಧಿ ಮುಕ್ತಾಯವಾಗುವ ಹಂತದಲ್ಲಿ ವಿವಿಧ ರಾಜಕೀಯ …

Leave a Reply

Your email address will not be published. Required fields are marked *