Breaking News
Home / Breaking News / ಬೆಳಗಾವಿ ಉತ್ತರ. ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ .ಗುಪ್ತ..ಗುಪ್ತ…!!!

ಬೆಳಗಾವಿ ಉತ್ತರ. ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ .ಗುಪ್ತ..ಗುಪ್ತ…!!!

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವ ಪ್ರಶ್ನೆ ಬೆಳಗಾವಿ ನಗರ ನಿವಾಸಿಗಳ ಪ್ರಮುಖ ಚರ್ಚೆಯ ವಿಷಯವಾಗಿದೆ

ಈ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ .ಅನೀಲ ಬೆನಕೆ ,ಕಿರಣ ಜಾಧವ, ಡಾ ರವಿ ಪಾಟೀಲ ,ರಾಜೀವ ಟೋಪಣ್ಣವರ ಅವರು ರೇಸ್ ನಲ್ಲಿದ್ದು ಈ ನಾಲ್ಕು ಜನ ಈಗ ಬಿ ಫಾರ್ಮ ದಾರಿ ಕಾಯದೇ ಕ್ಷೇತ್ರದಲ್ಲಿ ಹಲವಾರು ಜನ ಪರ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಉತ್ತರದಲ್ಲಿ ಪ್ರಚಾರ ಶುರು ಮಾಡಿದ್ದಾರೆ

ನಾಲ್ವರೂ ಜನ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಈ ಬಾರಿ ಟಿಕೆಟ್ ನನಗೇ ಸಿಗುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರದಲ್ಲಿ ಸುತ್ತಾಡಿ ಪ್ರಚಾರ ಮಾಡುತ್ತಿದ್ದಾರೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ ಷಾ ಎಪ್ರಿಲ್ ಎರಡರಂದು ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದು ಅವರು ಪ್ರವಾಸದಿಂದ ದೆಹಲಿಗೆ ಮರಳಿದ ಬಳಿಕ ಎಪ್ರೀಲ್ ಮೂರರಂದು ಬಿಜೆಪಿಯ ಮೊದಲ ಪಟ್ಟಿ ಹೊರಬೀಳಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ

ಬಿಜೆಪಿಯ ಮೊದಲ ಪಟ್ಟಿಯಲ್ಲಿ ಬೆಳಗಾವಿ ಉತ್ತರದ ಅಭ್ಯರ್ಥಿಯ ಹೆಸರು ಘೋಷಣೆ ಯಾಗುವದಿಲ್ಲ ಎಪ್ರೀಲ್ ಹದಿನೈದರ ನಂತರ ಉತ್ತರದ ಅಭ್ತರ್ಥಿ ಘೋಷಣೆಯಾಗಬಹುದು ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ

ಬೆಳಗಾವಿ ಉತ್ತರದಿಂದ ಯಾವ ಸಮಾಜಕ್ಕೆ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಹಲವಾರು ಸಮೀಕರಣಗಳು ರಾಜ್ಯ ಬಿಜೆಪಿ ನಾಯಕರ ಮುಂದಿವೆ .ಕೆಲವರು ಲಿಂಗಾಯತ ಸಮಾಜಕ್ಕೆ ಟಿಕೆಟ್ ಕೊಟ್ಟರೆ ಬಿಜೆಪಿ ಗೆಲುವು ಸಾಧ್ಯ ಎನ್ನುವ ಸಮೀಕರಣವನ್ನು ರಾಜ್ಯ ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ ಇನ್ನು ಕೆಲವರು ಮರಾಠಾ ಸಮಾಜಕ್ಕೆ ಟಿಕೆಟ್ ಕೊಟ್ಟರೆ ಉತ್ತರದಲ್ಲಿ ಗೆಲುವು ಸಾಧ್ಯ ಎಂಬ ಸಮೀಕರಣವನ್ನು ಮುಂದಿಟ್ಟಿದ್ದಾರೆ

ಆದಷ್ಟು ಬೇಗನೆ ಬೆಳಗಾವಿ ಉತ್ತರದಲ್ಲಿ ಟಿಕೆಟ್ ಘೋಷಿಸಿದರೆ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಬಹುದು ಇದನ್ನು ತಪ್ಪಿಸಲು ರಾಜ್ಯ ಬಿಜೆಪಿ ನಾಯಕರು ಕೊನೆ ಘಳಿಗೆಯಲ್ಲಿ ಉತ್ತರದ ಆಕಾಂಕ್ಷಿಗಳಿಗೆ ಸ್ಪಷ್ಠ ಉತ್ತರ ನೀಡಲಿದ್ದಾರೆ .

About BGAdmin

Check Also

ರಮೇಶ ಜಾರಕಿಹೊಳಿಗೆ ಬೆಳಗಾವಿ,ಜೊತೆಗೆ ಹುಬ್ಬಳ್ಳಿ ಧಾರವಾಡ ಉಸ್ತುವಾರಿ ….!!!!

ಬೆಳಗಾವಿ- ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್ ಸರ್ಕಸ್ ಸಕ್ಸೆಸ್ ಆದ ಮೇಲೆ ಈಗ ಜಿಲ್ಲಾ ಉಸ್ತುವಾರಿ ಸಚಿವರ ಸಂಭಾವ್ಯ ಪಟ್ಟಿ …

Leave a Reply

Your email address will not be published. Required fields are marked *

WP Facebook Auto Publish Powered By : XYZScripts.com