Home / Breaking News / ಬೆಳಗಾವಿ ಟ್ರಾಫಿಕ್ ಸಿಸಿ ಟಿವ್ಹಿ ವ್ಯೆವಸ್ಥೆ ಕುರಿತು ಎಡಿಜಿಪಿ ಪ್ರಶಂಸೆ

ಬೆಳಗಾವಿ ಟ್ರಾಫಿಕ್ ಸಿಸಿ ಟಿವ್ಹಿ ವ್ಯೆವಸ್ಥೆ ಕುರಿತು ಎಡಿಜಿಪಿ ಪ್ರಶಂಸೆ

 

ಬೆಳಗಾವಿ- ಬೆಳಗಾವಿಯಲ್ಲಿ ನಡೆಯುತ್ತಿರುವ ಗಣೇಶ ಉತ್ಸವದ ಬಂದೋಬಸ್ತಿಯ ಪರಶೀಲನೆಗೆ ಬೆಳಗಾವಿ ಗೆ ಬಂದಿರುವ ಕಾನೂನು ಸುವ್ಯೆವಸ್ಥೆ ವಿಭಾಗದ ಎಡಿಜಿಪಿ ಕಮಲ ಪಂಥ ಗುರುವಾರ ಬೆಳಗಾವಿಯ ಟ್ರಾಫಿಕ್ ಮ್ಯನೇಜ್ ಮೆಂಟ್ ಕೇಂದ್ರಕ್ಕೆ ಭೇಟಿ ನೀಡಿದರು
ಬೆಳಗಾವಿಯಲ್ಲಿ ಅಳವಡಿಸಲಾಗಿರುವ ಸಿಸಿ ಟಿವ್ಹಿ ಕ್ಯಾಮರಾಗಳು ಯಾವ ರೀತಿ ಕಾರ್ಯನಿರ್ವಹಣೆ ಮಾಡುತ್ತಿವೆ ಇದರಿಂದ ಕಾನೂನು ಸುವ್ಯೆವಸ್ಥೆ ಕಾಪಾಡಲು ಎಷ್ಟು ಅನಕೂಲ ಆಗಿದೆ ಎನ್ನುವದರ ಬಗ್ಗೆ ಕಮಲ ಪಂಥ ಅವರು ಪರಶೀಲನೆ ಮಾಡಿದರು
ಈ ಸಂಧರ್ಭದಲ್ಲಿ ಅವರನ್ನು ಭೇಟಿಯಾದ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ಬೆಳಗಾವಿಯ ಗಣೇಶ ಉತ್ಸವಕ್ಕಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವದರ ಜೊತೆಗೆ ಬಿಗಿ ಪೋಲೀಸ್ ಬಂದೋಬಸ್ತಿ ಮಾಡಲಾಗಿದೆ ಈ ಸಂಧರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದ್ದು ಬೆಳಗಾವಿಯ ಸಿಸಿ ಟಿವ್ಹಿ ಕ್ಯಾಮರಾ ವ್ಯೆವಸ್ಥೆ ಉತ್ತಮವಾಗಿದೆ ಎಂದರು
ಎಡಿಜಿಪಿ ಕಮಲಪಂಥ ಅವರು ಬೆಳಗಾವಿ ಗಣೇಶ ಉತ್ಸವದ ಬಂದೋಬಸ್ತಿಯ ಕುರಿತು ನಗರ ಪೋಲೀಸ್ ಘಟಕದ ಅಧಿಲಾರಿಗಳು ಹಾಗು ಗ್ರಾಮೀಣ ಭಾಗದ ಅಧಿಕಾರಿಗಳ ಜೊತೆ ಸಭೆ ನಡೆಸಿ ಗಣೇಶ ಉತ್ಸವದ ಸಂಧರ್ಭದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವ ಕುರಿತು ಸಭೆ ನಡೆಸಲಿದ್ದಾರೆ

Check Also

28 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ರಂಗೇರಿದೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಚುನಾವಣಾ ಪ್ರಚಾರದ ಅವಧಿ ಮುಕ್ತಾಯವಾಗುವ ಹಂತದಲ್ಲಿ ವಿವಿಧ ರಾಜಕೀಯ …

Leave a Reply

Your email address will not be published. Required fields are marked *