Breaking News
Home / Breaking News / ಬೆಳಗಾವಿಯಲ್ಲಿ ಉಕ್ಕಿದ ಕನ್ನಡ ಅಭಿಮಾನದ ಸುನಾಮಿ…

ಬೆಳಗಾವಿಯಲ್ಲಿ ಉಕ್ಕಿದ ಕನ್ನಡ ಅಭಿಮಾನದ ಸುನಾಮಿ…

ಬೆಳಗಾವಿ- ನೆಲ ಕನ್ನಡ,ನುಡಿಕನ್ನಡ,ಜಲ ಕನ್ನಡ,ತನು ಕನ್ನಡ,ಮನ ಕನ್ನಡ ನಾವಿರೋ ಜಗವೇ ಕನ್ನಡ ಎನ್ನುವ ವಾತಾವರಣ ಬೆಳಗಾವಿಯಲ್ಲಿ ಮನೆ ಮಾಡಿತ್ತು ನಗರದ ನಾಲ್ಕು ದಿಕ್ಕುಗಳಿಂದ ಬೆಳಗಾವಿಗೆ ಆಗಮಿಸಿದ ಕನ್ನಡದ ಅಭಿಮಾನಿಗಳು ಕನ್ನಡಮ್ಮನ ತೇರು ಎಳೆದರು

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಸಿಪಿಎಡ್ ಮೈದಾನದಲ್ಲಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವದ ಮೆರವಣಿಗೆಗೆ ಚಾಲನೆ ನೀಡಿದರು
ರಾಜ್ಯೋತ್ಸವದ ಮೆರವಣಿಗೆಯಲ್ಲಿ ನಾಡಿನ ಇತಿಹಾಸ ಪರಂಪರೆ ಮತ್ತು ಕಲೆ ಸಂಸ್ಕೃತಿಯನ್ನು ಬಿಂಬಿಸುವ ರೂಪಕಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು
ಸದಾ ಗಡಿ ವಿಚಾರದಿಂದ ಸುದ್ದಿ ಮಾಡುತ್ತಿದ್ದ ಕುಂದಾನಗರಿ ಬೆಳಗಾವಿಯಲ್ಲಿ ಇಂದು ಕನ್ನಡ ಕಲರವ ಮೆಳೈಸಿತ್ತು. ಎಲ್ಲಿ ನೋಡಿದರಲ್ಲಿ ಕನ್ನಡ ಬಾವುಟಗಳ ಹಾರಾಟ. ಕನ್ನಡ ನುಡಿಯ ಝೆಂಕಾರ ಮೊಳಗಿತ್ತು. ಇದು ಬೆಳಗಾವಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ನೋಟವಾಗಿತ್ತು

ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡಮಯ ವಾತಾವರಣ ಅನಾವರಣ. ಕಣ್ಣು ಹಾಯಿಸದಲೆಲ್ಲ ಕನ್ನಡ ಬಾವುಟಗಳ ಹಾರಾಟ. ಹೌದು.. ಇದು ಕುಂದಾನಗರಿ ಬೆಳಗಾವಿಯಲ್ಲಿ ಕಂಡು ಬಂದ ದೃಷ್ಯ,ಎಂದೂ ಆಚರಿಸದಂತೆ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ ಪರಿ. ಸದಾ ಗಡಿ ವಿಚಾರದಿಂದ ಸುದ್ದಿಯಲ್ಲಿದ್ದ ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜೋತ್ಸವ ಆಚರಿಸಲಾಯಿತು.

ನಗರದ ವಿವಿಧ ಕನ್ನಡ ಸಂಘಟನೆಗಳು, ಸಂಘ ಸಂಸ್ಥೆಗಳ ಸ್ಥಬ್ದ ಚಿತ್ರಗಳು ಕನ್ನಡತನವನ್ನು ಅನಾವರಣ ಮಾಡಿದವು. ವೀರ ರಾಣಿ ಕಿತ್ತೂರು ಚೆನ್ನಮ್ಮ, ವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ನಾಡಿನ ವಿವಿಧ  ಕಲೆ ಸಂಸ್ಕೃತಿಯ ಸ್ಥಬ್ದ ಚಿತ್ರಗಳು ಗಮನ ಸೆಳೆದವು. ನಗರದ ಹೃದಯ ಭಾಗದಲ್ಲಿರುವ ಚೆನ್ನಮ್ಮ ವೃತ್ತದಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಿತ್ತು.

ಬೆಳಗಾವಿ ನಗರ ಕನ್ನಡಮಯವಾಗಿತ್ತು. ಕನ್ನಡಪರ ಸಂಘಟನೆಗಳು,ಸ್ವಾಮಿಜಿಗಳು ವಿಜಯೋತ್ಸವ ಆಚರಿಸಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಕನ್ನಡತನವನ್ನು ಮೆರೆದರು.

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *