Breaking News
Home / Breaking News / ಬೆಳಗಾವಿ ಸಿಟಿ ಇರಬೇಕು ಕ್ಲೀನ್..ಗಪ್ ಚುಪ್ ತಂದಿಟ್ರು ಡಸ್ಟಬೀನ್…..!!!

ಬೆಳಗಾವಿ ಸಿಟಿ ಇರಬೇಕು ಕ್ಲೀನ್..ಗಪ್ ಚುಪ್ ತಂದಿಟ್ರು ಡಸ್ಟಬೀನ್…..!!!

ಬೆಳಗಾವಿ- ಬೆಳಗಾವಿ ನಗರದಲ್ಲಿ ದುಡ್ಡು ಇರೋವ್ರಿಗೆ ಕೊರತೆ ಇಲ್ಲ ಇಲ್ಲಿ ನೂರಾರು ಕೋಟಿ ಸಾವಿರಾರು ಕೋಟಿಯ ಕುಬೇರರು ಇದ್ದಾರೆ ದುಡ್ಡು ಇದ್ದೋರು ಹಿಗೂ ಸಮಾಜ ಸೇವೆ ಮಾಡಬಹುದೇ ಅನ್ನೋದಕ್ಕೆ ಬೆಳಗಾವಿಯ ಬಿಪಿನ್ ಪಾಟೀಲ್ ಅವರು ಮಾದರಿಯಾಗಿದ್ದಾರೆ

ಶನಿವಾರ ಬೆಳಗಾವಿಯ ಆಝಂ ನಗರದಲ್ಲಿ ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿದ್ರು ಒಂದು ರಿಕ್ಷಾದಲ್ಲಿ ದೊಡ್ಡ ದೊಡ್ಡ ಡಸ್ಟಬೀನ್ ಬಾಕ್ಸಗಳನ್ನು ಹಾಕಿಕೊಂಡು ಆಝಂ ನಗರ ಸರ್ಕಲ್ ನಲ್ಲಿ ಬಂದಿಳಿದ ಬಿಪಿನ್ ಪಾಟೀಲ್ ಎಲ್ಲೆಲ್ಲಿ ಕಸ ಕಾಣಿಸುತ್ತಿದೆಯೋ ಅಲ್ಲಲ್ಲಿ ಡಸ್ಟಬೀನ್ ಬಾಕ್ಸ ಇಟ್ಟು ಯಾರೂ ರಸ್ತೆಯ ಮೇಲೆ ಕಸ ಚೆಲ್ಲಬೇಡಿ ಕಸವನ್ನು ಈ ಡಬ್ಬಿಯಲ್ಲಿ ಹಾಕಿ ಎಂದು ಬಿಪಿನ್ ಪಾಟೀಲ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು

ಗಟ್ಟಿ ಮುಟ್ಟಾದ ಆರು ದೊಡ್ಡದಾದ ಡಸ್ಟಬೀನ್ ಗಳನ್ನು ಬಿಪಿನ್ ಪಾಟೀಲ ಆಝಂ ನಗರದ ವಿವಿಧ ಪ್ರದೇಶಗಳಲ್ಲಿ ಇಡುತ್ತಿರುವಾಗ ಕಸವನ್ನು ಡಬ್ಬಿಯಲ್ಲಿ ಹಾಕಿ ಎಂದು ಬಿಪಿನ್ ಪಾಟೀಲ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿರುವದನ್ನು ಗಮನಿಸಿದ ಜನ ಸ್ಥಳೀಯ ನಗರ ಸೇವಕ ಪಿಂಟೂ ಸಿದ್ದೀಕಿ ಅವರಿಗೆ ಮಾಹಿತಿ ನೀಡಿದ್ರು ಸ್ಥಳಕ್ಕೆ ಆಗಮಿಸಿದ ಪಿಂಟೂ ಸಿದ್ಧಿಕಿ ಪಿಪಿನ್ ಪಾಟೀಲರ ಸೇವೆಯನ್ನು ಮೆಚ್ವಿ ಕೂಡಲೇ ಹೂಮಾಲೆ ತರಿಸಿ ಬಿಪಿನ್ ಪಾಟೀಲರನ್ನು ಸತ್ಕರಿಸಿ ಬಿಳ್ಕೊಟ್ಟರು

ಬೆಳಗಾವಿ ನಗರ ಈಗ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರಿಕೊಂಡಿದೆ ಜನರ ಆಲೋಚನೆ ಮತ್ತು ನಡೆ ಕೂಡಾ ಸ್ಮಾರ್ಟ್ ಆಗಬೇಕು ಅದಕ್ಕೆ ಪೂರಕವಾದ ಅನಕೂಲತೆಗಳನ್ನು ಸ್ಥಳೀಯ ಆಡಳಿತ ಕಲ್ಪಿಸಬೇಕು ಬೆಳಗಾವಿ ಸುಂದರವಾಗಿದೆ ಜೊತೆಗೆ ನಿರ್ಮಲ ನಗರವಾಗಿ ಬೆಳೆಯಬೇಕು ಅನ್ನೋದೆ ನನ್ನ ಬಯಕೆ ಈ ದಿಸೆಯಲ್ಲಿ ನಾನೂ ಒಬ್ಬ ನಗರ ನಿವಾಸಿಯಾಗಿ ನನ್ನ ಪಾಲಿನ ಕರ್ತವ್ಯ ನಿಭಾಯಿಸಿದ್ದೇನೆ ನಗರವನ್ನು ಸ್ವಚ್ಛವಾಗಿಡುವಲ್ಲಿ ಕೇವಲ ಪೌರ ಕಾರ್ಮಿಕರು ಶ್ರಮಿಸಿದರೆ ಸಾಲದು ಬೆಳಗಾವಿ ನಗರದ ಪ್ರತಿಯೊಬ್ಬ ನಿವಾಸಿ ಸ್ವಚ್ಛತೆ ಕಾಪಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವದು ಅಗತ್ಯವಾಗಿದೆ ಎಂದು ಬಿಪಿನ್ ಪಾಟೀಲ್ ಹೇಳಿದ್ರು

ಬೆಳಗಾವಿ ನಗರದಲ್ಲಿ ಅದೆಷ್ಟೋ ಜನ ಸ್ವಚ್ಛತಾ ಅಭಿಯಾನ ಶುರು ಆದಾಗ ಕಸಬರ್ಗಿ ಹಿಡಿದುಕೊಂಡು ಪೋಟೋ ತೆಗೆಸಿಕೊಂಡು ಹೋದೋವ್ರು ಮರಳಿ ಕಸಬರ್ಗಿ ಹಿಡಿದ ಉಧಾಹರಣೆ ಇಲ್ಲ ಆದ್ರೆ ಬಿಪಿನ್ ಪಾಟೀಲ ಸದ್ದಿಲ್ಲದೇ ಈರೀತಿಯ ಸೇವೆ ಮಾಡುತ್ತಿರುವದು ಶ್ಲಾಘನೀನ ಬಿಪಿನ್ ಪಾಟೀಲರ ಸೇವೆಗೊಂದು ಬೆಳಗಾವಿ ಸುದ್ಧಿಯ ಸಲಾಂ

ದುಡ್ಡ ಇದ್ದೋವ್ರು ಹೀಗೂ ಸಮಾಜ ಸೇವೆ ಮಾಡಬಹುದು

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *