Breaking News
Home / ಬೆಳಗಾವಿ ನಗರ / ಅಧಿಕಾರಿಗಳ ಜಟಾಪಟಿ ಹಳ್ಳ ಹಿಡಿಯುತ್ತಿರುವ ಸ್ಮಾರ್ಟ ಸಿಟಿ

ಅಧಿಕಾರಿಗಳ ಜಟಾಪಟಿ ಹಳ್ಳ ಹಿಡಿಯುತ್ತಿರುವ ಸ್ಮಾರ್ಟ ಸಿಟಿ

       ಬೆಳಗಾವಿ:ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾಟ೯ಸಿಟಿ ಯೋಜನೆಯಲ್ಲಿ ದೇಶದ ಮಹಾನಗರ ಪಾಲಿಕೆ ಕೈಗೊಂಡ ಕಾಮಗಾರಿಯ ಹಾಗೆ ಬೆಳಗಾವಿ ಮಹಾನಗರ ಪಾಲಿಕೆಯ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳ್ಳಿಸುವಲ್ಲಿ ಪಾಲಿಕೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು  ಆರೋಪಿಸಿ ರಾಜೀವ ಟೋಪಣ್ಣವರ ನೇತೃತ್ವದಲ್ಲಿ ಶನಿವಾರ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪಾಲಿಕೆ ಅಧಿಕಾರಿಗಳ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡುತ್ತಿಲ್ಲಿ ಪಾಲಿಕೆಯಲ್ಲಿ ನಡೆಯುತ್ತರುವ  ಅಧಿಕಾರಿಗಳ ತಿಕ್ಕಾಟ ಸ್ವ ಪ್ರತಿಷ್ಠೆ ಒಳಜಗಳದಿಂದಾಗಿ ಈ ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ರಾಜೀವ  ಆರೋಪಿಸಿದ್ದಾರೆ

ಪಾಲಿಕೆ ಅಧಿಕಾರಿಗಳು ಸ್ಮಾರ್ಟ ಸಿಟಿ ಯೋಜನೆಯ ಅನುಷ್ಠಾನದಲ್ಲಿ ಕಾಳಜಿ ವಹಿಸಿ ಕೆಲಸ ಮಾಡುತ್ತಿಲ್ಲ  ಸ್ಮಾರ್ಟ ಸಿಟಿ  ಯೋಜನೆಯ ಪಟ್ಟಿಯಲ್ಲಿ ಸೇರಿರುವ ಇತರ ನಗರಗಳಲ್ಲಿ ಕಾಮಗಾರಿಗಳು ಆರಂಭಗೊಂಡಿದ್ದು ಬೆಳಗಾವಿ ಪಾಲಿಕೆಯ  ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದಾಗಿ ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ಬಿಜೆಪಿ ಮುಖಂಡ ರಾಜೀವ ಟೋಪಣ್ಣವರ ಆರೋಪಿಸಿದ್ದಾರೆ
ಈ ಸಂದಭ೯ದಲ್ಲಿ ಬಿಜೆಪಿ ಯುವ ಧುರೀಣರಾದ ವಿನಾಯಕ ಪಾಟೀಲ, ಶಿವಾನಂದ ಕಾರಿ, ಸದಾನಂದ ಗುಂಟೆಪ್ಪನವರ ಸೇರಿದಂತೆ ಮೊದಲಾದವರು ಹಾಜರಿದ್ದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *