Home / LOCAL NEWS (page 108)

LOCAL NEWS

ಲಂಡನ್ ಗೆ ಮುಟ್ಟಲಿರುವ ಬೆಳಗಾವಿ ರಾಜ್ಯೋತ್ಸವ..!!

ಬೆಳಗಾವಿ-ಬೆಳಗಾವಿ ರಾಜ್ಯೋತ್ಸವ ಅಂದ್ರೆ ಸಾಕು ,ಕನ್ನಡದ ಹುಡುಗರು ತಾಯಿ ಭುವನೇಶ್ವರಿಯ ತೇರು ಎಳೆದು ಹುಚ್ಚೆದ್ದು ಕುಣೀತಾರೆ,ಲಕ್ಷಾಂತರ ಕನ್ನಡಿಗರು ಒಂದು ಕಡೆ ಸೇರಿ ಕನ್ನಡದ ಹಬ್ಬವನ್ನು ಆಚರಿಸುತ್ತಾರೆ. ಬೆಳಗಾವಿಯ ಕಣ,ಕಣವೂ ಕನ್ನಡ,ಕನ್ನಡ ಎನ್ನುವ ಹಾಗೆ ಇಲ್ಲಿ ರಾಜ್ಯೋತ್ಸವ ನಡೆಯುತ್ತದೆ. ಈಬಾರಿಯ ರಾಜ್ಯೋತ್ಸವದ ಸಂಬ್ರಮ ಲಂಡನ್ ವರೆಗೂ ಮುಟ್ಟಲಿದೆ. ಅದು ಹೇಗೆ ಅಂದ್ರೆ,ಬೆಳಗಾವಿಯ ರಾಜ್ಯೋತ್ಸವದಲ್ಲಿ ಈ ಬಾರಿ ಹೊಸ ಇತಿಹಾಸ‌ವೊಂದು ನಿರ್ಮಾಣವಾಗಲಿದೆ. ೧೦,೦೦೦ ಅಡಿಗಳ ಕರ್ನಾಟಕದ ಬಾವುಟದ ಮೆರವಣಿಗೆಯನ್ನು ನಗರದ ರಾಣಿ ಚೆನ್ನಮ್ಮ …

Read More »

ಬೆಳಗಾವಿಯಲ್ಲಿ, ಹಿರೇಮಠದ ಜೋಳಿಗೆಯಿಂದ ಕನ್ನಡಿಗರಿಗೆ ಹೋಳಿಗೆ….!!

ಬೆಳಗಾವಿ – ಬೆಳಗಾವಿಯಲ್ಲಿ ಅಕ್ಟೋಬರ್ ತಿಂಗಳಲ್ಲಿಯೇ ರಾಜ್ಯೋತ್ಸವದ ತಯಾರಿ ಶುರುವಾಗುತ್ತದೆ.ಕನ್ನಡದ ಹಬ್ಬ ಎಂದಾಗ ನೆನಪಾಗೋದು ಹಿರೇಮಠದ ಹೋಳಿಗೆ ಊಟ. ಹೌದು ರಾಜ್ಯೋತ್ಸವದ ದಿನ ತಾಯಿ ಭುವನೇಶ್ವರಿಯ ತೇರು ಎಳೆಯಲು ಲಕ್ಷಾಂತರ ಜನ ಸೇರ್ತಾರೆ, ಬೆಳಗಾವಿಯ ಹಿರೇಮಠದ ಜೋಳಿಗೆಯಿಂದ ಕನ್ನಡದ ಹಬ್ಬದಲ್ಲಿ ಪಾಲ್ಗೊಂಡ ಕನ್ನಡದ ಭಕ್ತರಿಗೆ ಹೋಳಿಗೆ ಊಟದ ವ್ಯವಸ್ಞೆ ಮಾಡ್ತಾರೆ. ಬೆಳಗಾವಿಯಲ್ಲಿ ನಡೆಯುವ ಅದ್ಧೂರಿಯ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಪ್ರತಿ ವರ್ಷ …

Read More »

ಖಾನಾಪುರ ಕೋರ್ಟ್‌ಗೆ ಹಾಜರಾದ ಮಹಾರಾಷ್ಟ್ರದ ಶಿವಸೇನೆ ಮುಖಂಡ

ಬೆಳಗಾವಿ-2006ರಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ MES ಪುಂಡರು ಮಾಡಿದ ಗಲಭೆ ಪ್ರಕರಣಕ್ಕೆ ಸಂಭಂದಿಸಿದಂತೆ,ಖಾನಾಪುರ ಕೋರ್ಟ್‌ಗೆ, ಮಹಾರಾಷ್ಟ್ರದ ಶಿವಸೇನೆ ಮುಖಂಡ ಹಾಜರಾಗಿದ್ದಾರೆ.ಶಿವಸೇನೆ ಏಕನಾಥ ಶಿಂಧೆ ಬಣದ ನಾಯಕ ರಾಮದಾಸ ಖದಂ ಖಾನಾಪುರ ಕೋರ್ಟ್‌ಗೆ ಇಂದು ಗುರುವಾರ ಹಾಜರಾಗಿದ್ದಾರೆ.ರಾಮದಾಸ ಕದಂ, ಕೇಂದ್ರದ ಮಾಜಿ ಸಚಿವರಾಗಿದ್ದಾರೆ. 2006ರ ಅಕ್ಟೋಬರ್ 26ರಂದು ಖಾನಾಪುರದಲ್ಲಿ ಎಂಇಎಸ್ ಯುವ ಮೇಳಾವ್ ನಡೆದಿತ್ತು,ಖಾನಾಪುರದ ತಾರಾರಾಣಿ ಹೈಸ್ಕೂಲ್ ಮೈದಾನದಲ್ಲಿ ನಡೆದಿದ್ದ MES ಸಮಾವೇಶದಲ್ಲಿ ರಾಮದಾಸ್ ಕದಂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ …

Read More »

ಹೆಂಡತಿಯನ್ನು ಹಾಸಿಗೆಯಲ್ಲೇ ಹೆಣವಾಗಿಸಿದ ಗಂಡ…

ಬೆಳಗಾವಿ-ಊಟ ಮಾಡಿ ಮಲಗಿದ್ದ ಹೆಂಡತಿಯನ್ನ ಪಾಪಿ ಪತಿ ಹಾಸಿಗೆಯಲ್ಲಿಯೇ ಹೆಣವಾಗಿಸಿದ ಘಟನೆ ನಡೆದಿದೆ.ಮದ್ಯಪಾನ ಮಾಡಿದ ಪತಿ ಹೆಂಡತಿಯನ್ನೇ ಹತ್ಯೆಮಾಡಿದ ಘಟನೆ,ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ.ಯಲ್ಲವ್ವ ಪಾಂಡುರಂಗ ಹಾರೂಗೇರಿ(೫೫) ಗಂಡನಿಂದ ಕೊಲೆಯಾದ ಪತ್ನಿ,ಪಾಂಡುರಂಗ ಹಾರೂಗೇರಿ ಹೆಂಡತಿಯನ್ನು ಕೊಲೆ ಮಾಡಿದ ಪತಿ. ಹೆಂಡತಿಯನ್ನು ಕೊಂದು ತಲೆ ಮರೆಸಿಕೊಂಡ ಪತಿ ಯನ್ನು ಪೋಲೀಸರು ಪತ್ತೆ ಮಾಡುತ್ತಿದ್ದುಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.ಮೂಡಲಗಿ ಪೊಲೀಸ್ …

Read More »

ಈ ರೀತಿಯ ಓಟ ನಡೆಯುವುದು,ಬೆಳಗಾವಿಯಲ್ಲಿ ಮಾತ್ರ…!!

ಬೆಳಗಾವಿಯಲ್ಲಿ ಗಮನ ಸೆಳೆದ ಎಮ್ಮೆಗಳ ಓಟ… ಬೆಳಗಾವಿ-ದೀಪಾವಳಿಯ ಪಾಡ್ಯದ ದಿನವೇ ಕುಂದಾನಗರಿಯಲ್ಲಿ ಎಮ್ಮೆಗಳ ಓಟ ಎಲ್ಲರ ಗಮನ ಸೆಳೆದಿದೆ. ಬೆಳಗಾವಿಯ ಚವಾಟ್ ಗಲ್ಲಿ, ಶೆಟ್ಟಿ, ಗವಳಿ ಗಲ್ಲಿಗಳಲ್ಲಿ ಎಮ್ಮೆಗಳ ಓಟ ಸ್ಪರ್ಧೆ ನಡೆಯಿತು.ಎಮ್ಮೆಗಳ ಓಟದ‌ ಸ್ಪರ್ಧೆಗೆ ಬಿಜೆಪಿ ಶಾಸಕ ಶಾಸಕ‌ ಅನಿಲ್ ಬೆನಕೆ ಚಾಲನೆ ನೀಡಿದ್ರು.ದೀಪಾವಳಿ ಹಬ್ಬದ ಪ್ರಯುಕ್ತ ಗವಳಿ ಸಮುದಾಯದಿಂದ ಎಮ್ಮೆಗಳ ಓಟದ ಸ್ಪರ್ಧೆ ಆಯೋಜನೆ ಮಾಡುವದು ಇಲ್ಲಿಯ ಸಂಪ್ರದಾಯವಾಗಿದೆ.ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ವಿಶೇಷ ಆಚರಣೆ ಮಾಡಲಾಗುತ್ತದೆ. ಎಮ್ಮೆಗಳನ್ನು …

Read More »

ಬೆಳಗಾವಿ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ವೃದ್ಧ ಸಾವು…

ಬೆಳಗಾವಿ-ಕುಡಿಯುವ ನೀರಿನ ಪೈಪ್ ಒಡೆದು ಅದರಲ್ಲಿ ಚರಂಡಿ ನೀರು ಮಿಕ್ಸ್ ಆಗಿ ಅವಘಡ ಸಂಭವಿಸಿದೆ.ಇದೇಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಓರ್ವ ವೃದ್ಧ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಒಟ್ಟು 94 ಜನರು ಅಸ್ವಸ್ಥಗೊಂಡಿದ್ದಾರೆ.ನಾಲ್ವರ ಸ್ಥಿತಿ ಗಂಭೀರಾಗಿದೆ.ಅವರನ್ನು ಬಾಗಲಕೋಟ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮುದೇನೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಯ ಪೈಪ್ ಒಡೆದು ಅವಘಡ ಸಂಭವಿಸಿದೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ …

Read More »

ಅದ್ಧೂರಿಯಾಗಿ ಕಿತ್ತೂರು ಉತ್ಸವ ಪಾರು..ಸ್ಥಳೀಯ ಜನಪ್ರತಿನಿಧಿಗಳೇ ಗೈರು…!!!

ಮೊದಲ ಬಾರಿ ಜಿಲ್ಲಾ ಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿತ್ತು. ಆದ್ರೆ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ನಿಧನ ಹಿನ್ನೆಲೆ ಮೂರು ದಿನಗಳ ಉತ್ಸವ ಎರಡು ದಿನಕ್ಕೆ ಸೀಮಿತಗೊಳಿಸಲಾಗಿತ್ತು. ಈ ಬಾರಿಯ ಕಿತ್ತೂರು ಉತ್ಸವವನ್ನು ಜನಪ್ರತಿನಿಧಿಗಳ ಗೈರಾಗಿದ್ದರೂ ರಾಣಿ ಚನ್ನಮ್ಮಾಜಿಯ ಅಭಿಮಾನಿಗಳು ಉತ್ಸವವವನ್ನು ಯಶಸ್ವಿಗೊಳಿಸಿದರು. ಕಿತ್ರೂರು ಉತ್ಸವದ ಅಂಗಳದಿಂದ ಸೋಮವಾರ ಬೆಳಗ್ಗೆ ಅದ್ಧೂರಿ ಮೆರವಣಿಗೆ ಮೂಲಕ ನಾಂದಿ ಹಾಡಿದ್ದ ಉತ್ಸವದಲ್ಲಿ ಎರಡು ದಿನ ಇನ್ನಿಲ್ಲದಂತೆ …

Read More »

ಕಿತ್ತೂರು ಉತ್ಸವ ನೋಡಿ ಮರಳುವಾಗ ಅಪಘಾತಕ್ಕೆ ಇಬ್ಬರ ಬಲಿ….

ಬೆಳಗಾವಿ-ಕಿತ್ತೂರು ಉತ್ಸವ ನೋಡಿ ಹಿಂದಿರುಗುವಾಗ ಭೀಕರ ರಸ್ತೆ ಅಪಘಾತ,ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಕಿತ್ತೂರು ಪಟ್ಟಣದ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಈ ಘಟನೆ ನಡೆದಿದ್ದು,ಖಾನಾಪುರ ತಾಲೂಕಿನ ಕೊರವಿಕೊಪ್ಪ ಗ್ರಾಮದ ಬಾಳಪ್ಪ ತಳವಾರ (33), ಕರೆಪ್ಪ ತಳವಾರ (36) ಮೃತರು ಎಂದು ಗುರುತಿಸಲಾಗಿದೆ. ಹೆದ್ದಾರಿ ದಾಟುತ್ತಿದ್ದವರ ಮೇಲೆ ಕಾರು ಹರಿದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮಧ್ಯರಾತ್ರಿ 12 ಕ್ಕೆ ಬೆಳಗಾವಿಯಿಂದ ಧಾರವಾಡ ಕಡೆಗೆ ಕಾರು ಹೊರಟಿದ್ದಾಗ ಅವಘಡ …

Read More »

ಜಾರಕಿಹೊಳಿ ಬ್ರದರ್ಸ್ ಒಂದು ಕಡೆ ಸೇರಿದ್ರು…!!

ಬೆಳಗಾವಿ-ದೀಪಾವಳಿ ಪ್ರಯುಕ್ತ ಲಕ್ಷ್ಮಿ ಪೂಜೆಗಾಗಿ ಜಾರಕಿಹೊಳಿ ಸಹೋದರರು ಒಟ್ಟುಗೂಡಿದ್ರು..ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಹೊಸಪೇಟ ಗಲ್ಲಿಯ ಕಚೇರಿಯಲ್ಲಿ ಜಾರಕಿಹೊಳಿ ಸಹೋದರರು ಪೂಜೆ ನೆರವೇರಿಸಿ ಎಲ್ಲರ ಗಮನ ಸೆಳೆದರು. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಂದ ಲಕ್ಷ್ಮಿ ಪೂಜೆ ನೆರವೇರಿತು‌ಮಾಜಿ ಸಚಿವ ರಮೇಶ್ ‌ಜಾರಕಿಹೊಳಿ, ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭಾಗಿಯಾಗಿದ್ರು.ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ,ಭೀಮಶಿ ಜಾರಕಿಹೊಳಿ ಪುತ್ರರಾದ ಸನತ್, ಸರ್ವೋತ್ತಮ ಜಾರಕಿಹೊಳಿ ಭಾಗಿಯಾಗಿದ್ದು ವಿಶೇಷ. ದೀಪಾವಳಿ …

Read More »

ಯಾರಿವಳು…. ಅವಳಲ್ಲ ಅವನು…..!!

ಬೆಳಗಾವಿ,ಅ-ಚನ್ನಮ್ಮನ ವೇಷಧರಿಸಿ ನೃತ್ಯರೂಪಕ ಪ್ರದರ್ಶನ ನೀಡಿದ ಕಲಾವಿದರೊಬ್ಬರು ಕಿತ್ತೂರು ಉತ್ಸವದಲ್ಲಿ ಎಲ್ಲರ ಗಮನ ಸೆಳೆದರು. ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ವ್ಯಕ್ತಿಗಳ ಈ ರೂಪಕ ವೇಷಧಾರಿ ಬಸವರಾಜ ಬಲಕುಂದಿ ಅವರು ರಾಜ್ಯ, ದೇಶ ಸುತ್ತಿ ಕಿರಿವಯಸ್ಸಿನಲ್ಲಿಯೇ ನಾಡಿನ ಹಿರಿಮೆಗೆ ಗರಿ ಮುಡಿಸುತ್ತಿದ್ದಾರೆ. ಮನೋಜ್ಞ ಹಾವಭಾವ, ಆಕರ್ಷಕ ದಿರಿಸು, ಬಗೆ ಬಗೆ ಆಭರಣ ಧರಿಸಿ ವೇದಿಕೆ ಏರುವ ಇವರು ಯಾವತ್ತೂ ತಾವು ತೊಟ್ಟ ವೇಷಕ್ಕೆ ಜೀವ ತುಂಬದೇ ವೇದಿಕೆ ಕೆಳಗಿಳಿದಿಲ್ಲ! ಮೂಲತ: ಬಳ್ಳಾರಿ …

Read More »