Breaking News
Home / Breaking News (page 5)

Breaking News

ಆಶ್ರಯ ಮನೆ ಮಂಜೂರು ಮಾಡಿಸುವದಾಗಿ ವಂಚಿಸಿದ ದೇಸಾಯಿಗೆ ಗೂಸಾ

ಬೆಳಗಾವಿ- ಬೆಳಗಾವಿ ನಗರದಲ್ಲಿ ಮಹಾನಗರ ಪಾಲಿಕೆಯಿಂದ ಆಶ್ರಯ ಮನೆಗಳನ್ನು ಮಂಜೂರು ಮಾಡಿಸುವದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಮನಬಂದಂತೆ ಥಳಿಸಿದ ಘಟನೆ ಇಂದು ಬೆಳ್ಳಂ ಬೆಳಿಗ್ಗೆ ನಡೆದಿದೆ ಬೆಳಗಾವಿಯಲ್ಲಿ ಹಲವಾರು ವರ್ಷಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ,ಪಾದಯಾತ್ರೆ,ಪಾಲಿಕೆಗೆ ಹತ್ತು ಹಲವು ಬಾರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದ ಮಹ್ಮದ ರಪೀಕ ದೇಸಾಯಿ ನೂರಾರು ಜನ ಮಹಿಳೆಯರಿಂದ ಆಶ್ರಯ ಮನೆ ಕೊಡಿಸುವದಾಗಿ ಲಕ್ಷಾಂತರ ರೂಪಾಯಿ …

Read More »

ಕೆಎಲ್ಇ ಸಂಸ್ಥೆಯ ಆರೋಗ್ಯ ಸೇವೆಗೆ ಜಾಗತಿಕ ಮೆಚ್ಚುಗೆ

  ಬೆಳಗಾವಿ- ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ ಮಾಡುವ ಮೂಲಕ ಜಾಗತಿಕ ಮಟ್ಟದ ಪ್ರಶಂಸೆಗೆ ಪಾತ್ರವಾಗಿರುವ ಬೆಳಗಾವಿಯ ಕೆಎಲ್ಇ ಸಂಸ್ಥೆ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೊಸ ಸಂಶೋಧನೆ ಮಾಡಿದೆ ತಾಯಿ ಮತ್ತು ಶಿಶು ಮರಣಕ್ಕೆ ಕಾರಣ ಏನು? ಅದನ್ನು ಹೇಗೆ ತಡೆಗಟ್ಟಬಹುದು ಎಂದು ಪುಸ್ತಕವೊಂದನ್ನು ಸಿದ್ಧ ಪಡಿಸಲಾಗಿದ್ದು ಕೇಂದ್ರ ಸಚಿವ ಹರ್ಷವರ್ದನ್ ಇಂದು ಈ ಪುಸ್ತಕವನ್ನು ಬಿಡುಗಡೆ ಮಾಡಿದರು ಹತ್ತು ಹಲವು ದೇಶಗಳ ಪ್ರತಿನಿಧಿಗಳು …

Read More »

ರಾಣಿ ಚನ್ನಮ್ಮ ಯುನಿವರ್ಸಿಟಿ ಬಳಿ ಸುಟ್ಟು ಭಸ್ಮವಾದ ಲಾರಿ

  ಬೆಳಗಾವಿ- ನಗರದ ಭೂತರಾಮಟ್ಟಿಯ ರಾಣಿ ಚನ್ನಮ್ಮ ಯುನಿವರ್ಸಿಟಿ ಬಳಿ ಜೆಸಿಬಿ ಸಾಗಿಸುತ್ತಿದ್ದ ಲಾರಿಯೊಂದು ಸುಟ್ಟು ಭಸ್ಮವಾದ ಘಟನೆ ನಡೆದಿದೆ ಕೊಲ್ಹಾಪೂರದಿಂದ ಬೆಂಗಳೂರು ಕಡೆ ಸಂಚರಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಕ್ಷಣಾರ್ದದಲ್ಲೇ ಧಗ ಧಗ ಉರಿದು ಲಾರಿಯ ಡಿಸೈಲ್ ಟ್ಯಾಂಕ್ ಸ್ಪೋಟಗೊಂಡು ಲಾರಿ ಸಂಪೂರ್ಣವಾಗಿ ಭಸ್ಮವಾಗಿದೆ ಲಾರಿಯಲ್ಲಿದ್ದ ಜೆಸಿಬಿ ಕೂಡ ಧ್ವಂಸ ಗೊಂಡಿದೆ ಲಾರಿಗೆ ಬೆಂಕಿ ಹೊತ್ತಿ ಉರಿಯುತ್ತಿರುವ ದನ್ನು ನೋಡಿದ ಸುತ್ತಮುತ್ತಲಿನ ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನ …

Read More »

ಫಿರೋಜ್ ಸೇಠ ಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ವಿರುದ್ಧ ಭಂಡಾಯ – ಮುಸ್ಲಿಂ ಮುಖಂಡರ ಎಚ್ಚರಿಕೆ

ಬೆಳಗಾವಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಈ ಬಾರಿ ಹಾಲಿ ಕಾಂಗ್ರೆಸ್ ಶಾಸಕ ಫಿರೋಜ ಸೇಠ ಬದಲಿಗೆ ಬೇರೆಯವರಗೆ ಟಿಕೆಟ್ ನೀಡಬೇಕು ಎಂದು ಬೆಳಗಾವಿ ಮುಸ್ಲೀಮ್ ಫೋರಮ್  ಮುಖಂಡರು ಒತ್ತಾಯಿಸಿದರು. ನಗರದಲ್ಲಿ  ರವಿವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಮ್ ಮುಖಂಡ  ಹಾಗೂ ಜಿಲ್ಲಾ ವಕ ಮಂಡಳಿ  ಚೇರಮನ್ ಸಿ ಕೆ ಎಸ್ ನಜೀರ  ಎರಡು ಬಾರಿ ಫಿರೋಜ ಸೇಠ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೆವು. ಆದರೆ ಅವರಿಂದ ನಾವು ನಿರೀಕ್ಷೆ ಮಾಡಿದಂತೆ ಅಭಿವೃದ್ಧಿ ಕೆಲಸಗಳು …

Read More »

ಬಿಜೆಪಿ ಡಾಕ್ಟರ್ ಉದ್ಯೋಗ ಮೇಳದಲ್ಲಿ ಭರಪೂರ ಜನ

ಬೆಳಗಾವಿ- ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಡಾ ರವಿ ಪಾಟೀಲ ಅವರು ಬೆಳಗಾವಿಯಲ್ಲಿ ಆಯೋಜಿಸಿದ ಉದ್ಯೋಗ ಮೇಳದಲ್ಲಿ ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳು ಉದ್ಯೋಗ ಹುಡುಕಿಕೊಂಡು ಬಂದಿದ್ದಾರೆ ಬೆಳಗಾವಿಯ ಚವ್ಹಾಟಗಲ್ಲಿಯಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಮೂವತ್ತಕ್ಕೂ ಹೆಚ್ಚು ಖ್ಯಾತನಾಮ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಬೆಳಿಗ್ಗೆ ಸಂಸದ ಸುರೇಶ ಅಂಗಡಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು ಡಾ ರವಿ ಪಾಟೀಲ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದಾರೆ ಯುವಕರಿಗೆ ಶಿಕ್ಷಣದ ಜೊತೆಗೆ ಉದ್ಯೋಗ …

Read More »

27 ರಂದು ಮುಖ್ಯಮಂತ್ರಿ ಸಿದ್ರಾಮಯ್ಯ ಬೆಳಗಾವಿಗೆ

ಬೆಳಗಾವಿ ಚುನಾವಣೆ ಹೊಸ್ತಿಲಲ್ಲಿ ಸರ್ಕಾರ ಮತ್ತೆ ಸಂಗೊಳ್ಳಿ ರಾಯಣ್ಣ ನಾಮಸ್ಮರಣೆ ಮಾಡುತ್ತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 27 ಸಂಗೊಳ್ಳಿ ರಾಯಣ್ಣ ಜನ್ಮಸ್ಥಳ ಸಂಗೊಳ್ಳಿಗೆ ಸಿಎಂ ಭೇಟಿ ನೀಡಲಿದ್ದಾರೆ ರಾಯಣ್ಣ ಸ್ಮಾರಕ ಸೈನಿಕ ಶಾಲೆ ಕಾಮಾಗಾರಿ ಚಾಲನೆ ನೀಡಿದ ಬಳಿಕ ರಾಕ್ ಗಾರ್ಡನ್, ಕೆರೆ ಅಭಿವೃದ್ಧಿ, ಕಲ್ಯಾಣ ಮಂಟಪ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಖಾನಪುರ ತಾಲೂಕಿನ ನಂದಗಢದಲ್ಲಿ ಕುರುಕ್ಷೇತ್ರ ಮಾದರಿಯಲ್ಲಿ ಮ್ಯೂಸಿಯಂ, ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ಸಿಎಂ ಚಾಲನೆ …

Read More »

RSS ಬ್ಯಾನ್ ಮಾಡಲು ಸಿದ್ರಾಮಯ್ಯ ಯಾವೂರು ದಾಸಯ್ಯ ಈಶ್ವರಪ್ಪ ಪ್ರಶ್ನೆ

ಬೆಳಗಾವಿ- ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಈಶ್ವರಪ್ಪ ಸಿಎಂ ಸಿದ್ರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದು ಹಿಂದುಳಿದ ಮತಗಳಿಂದಲ್ಲ. ಕೆಜೆಪಿ – ಬಿಜೆಪಿ ಇಬ್ಬಾಗದಿಂದ ಮುಖ್ಯಮಂತ್ರಿಯಾಗಿದ್ದು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಪುನರುಚ್ಚರಿಸಿದರು. ಶನಿವಾರ ಬಿಜೆಪಿ ಹಿಂದುಳಿದ ವರ್ಗಗಗಳ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಹಿಂದಿನ ವಿಧಾನಸಭಾ ಚುನಾವಣೆ ಬಿಜೆಪಿ ಹಾಗೂ ಕೆಜೆಪಿಯಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.ಅವರು ಹೇಳುತ್ತಾರೆ. ನಾನು ಹಿಂದುಳಿದ ವರ್ಗಗಳಿಂದ ಮುಖ್ಯಮಂತ್ರಿಯಾಗಿದ್ದೇನೆ ಎಂದು ನಂತರ …

Read More »

ದುಡಿಯುವ ಕೈಗಳಿಗೆ ಕೆಲಸ ಕೊಡಿಸಲು ಮುಂದಾದ ಡಾಕ್ಟರ್

ಬೆಳಗಾವಿ- ವೃತ್ತಿಯಲ್ಲಿ ವೈದ್ಯರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬೆಳಗಾವಿಯ ಡಾ ರವಿ ಪಾಟೀಲ ದುಡಿಯುವ ಕೈಗಳಿಗೆ ಕೆಲಸ ಕೊಡಿಸಲು ಮುಂದಾಗಿದ್ದಾರೆ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಅವರು ಕಳೆದ ಒಂದು ವರ್ಷದಿಂದ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಗಮನ ಸೆಳೆಯುತ್ತಿದ್ದು ಈಗ ಬೆಳಗಾವಿಯಲ್ಲಿ ಬೃಹತ್ತ ಉದ್ಯೋಗ ಮೇಳ ಆಯೋಜನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ :ಜಿಲ್ಲೆಯ ಯುವಕರಲ್ಲಿ ಸಾಕಷ್ಟು ವಿದ್ಯೆ ಹಾಗೂ ಕಲೆ ಇದೆ. …

Read More »

ಬಡವರ ಮನೆಗಳ ರಕ್ಷಣೆಗೆ ಒತ್ತಾಯಿಸಿ ಇಂದು ಅಭಯ ಪಾಟೀಲ ಪ್ರತಿಭಟನೆ

  ಬೆಳಗಾವಿ- ಬೆಳಗಾವಿ ನಗರದಲ್ಲಿ ನೂರು ರೂಪಾಯಿ ಬಾಂಡ್ ಪೇಪರ್ ಖರೀಧಿಯ ಮೇಲೆ ನಿರ್ಮಿಸಲಾಗಿರುವ ಅಧಿಕೃತ ಮನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವದು ಎಂದು ಪ್ರದೇಶಿಕ ಆಯುಕ್ತರು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಬಡವರ ಮನೆಗಳ ರಕ್ಷಣೆಗೆ ಒತ್ತಾಯಿಸಿ ಇಂದು ಬೆಳಗಾವಿಯಲ್ಲಿ ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಪ್ರತಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ರ್ಯಾಲಿ ಇಂದು ಬೆಳಿಗ್ಗೆ 10-30 ಘಂಟೆಗೆ ನಗರದ ಛತ್ರಪತಿ ಶಿವಾಜಿ ಉದ್ಯಾನ ದಿಂದ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ …

Read More »

ಕೆ ಎಲ್ ಇ ಕನ್ನಡ ಹುಡುಗರ ಕನ್ನಡ ಪ್ರೇಮ ಹೆಂಗೈತಿ ನೋಡ್ಲಾ ಮಗಾ…!!!

ಬೆಳಗಾವಿ- ಕೆಎಲ್ಇ ಇಂಜನಿಯರಿಂಗ್ ಕಾಲೇಜಿನ ಕನ್ನಡ ಬಳಗ ಸದ್ದಿಲ್ಲದೇ ಕನ್ನಡದ ಕಾಯಕ ಮಾಡುತ್ತಿದೆ ಈ ಕನ್ನಡದ ಹುಡುಗರು ಕನ್ನಡದ ಸಂಬ್ರಮದಲ್ಲಿ ಪಾಲ್ಗೊಂಡು ಕನ್ನಡ ನೆಲ ಜಲ ಭಾಷೆಯ ರಕ್ಷಣೆಯಲ್ಲಿ ಕೈ ಜೋಡಿಸುತ್ತಲೇ ಬಂದಿದ್ದಾರೆ ಇಂದಿನ ಯುವ ಪೀಳಿಗೆಗೆ ಕನ್ನಡದ ಇತಿಹಾಸ ಕನ್ನಡ ಸಂಸ್ಕೃತಿ ಇಲ್ಲಿಯ ಇತಿಹಾಸದ ಗತವೈಭವ ಗೊತ್ತಾಗಬೇಕು ಅದೇ ಅವರಿಗೆ ಸ್ಪೂರ್ತಿ ನೀಡಬೇಕು ಎನ್ನುವ ಉದ್ದೇಶದಿಂದ ಈ. ಹುಡುಗರು ನಾಳೆ ಶುಕ್ರವಾರ ಕೆಎಲ್ಇ ಇಂಜನಿಯರಿಂಗ್ ಕಾಲೇಜಿನಲ್ಲಿ ಕ್ರಾಂತಿ ವೀರ …

Read More »
Facebook Auto Publish Powered By : XYZScripts.com