Breaking News
Home / Breaking News / ತಿಂಗಳಲ್ಲಿ ಹತ್ತು ದಿನ ಸಿಎಂ ಕುಮಾರಸ್ವಾಮಿ ಸುವರ್ಣ ಸೌಧದಲ್ಲಿ ಕಾರ್ಯ ನಿರ್ವಹಿಸಲಿ

ತಿಂಗಳಲ್ಲಿ ಹತ್ತು ದಿನ ಸಿಎಂ ಕುಮಾರಸ್ವಾಮಿ ಸುವರ್ಣ ಸೌಧದಲ್ಲಿ ಕಾರ್ಯ ನಿರ್ವಹಿಸಲಿ

ಬೆಳಗಾವಿ- ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ಹಿಂದೆ ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸಿ ಈ ಭಾಗದ ಅಭಿವೃದ್ಧಿಗೆ ಬಂಪರ್ ಕೊಡುಗೆಗಳನ್ನು ನೀಡಿದ್ದರು

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬೆಳಗಾವಿ ಅಧಿವೇಶನದ ಮೂಲಕ ಹೊಸ ನಾಂದಿ ಹಾಡಿದ್ದ ಕುಮಾರಸ್ವಾಮಿ ಅವರು ಈಗ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದು ಬೆಳಗಾವಿಯ ಸುವರ್ಣ ಸೌಧಕ್ಕೆ ಹೊಸ ಕಾಯಕಲ್ಪ ನೀಡಬಹುದು ಎನ್ನುವ ನೀರೀಕ್ಷೆ ಗಡಿನಾಡು ಕನ್ನಡಿಗರದ್ದಾಗಿದೆ

ವರ್ಷದಲ್ಲಿ ಕೇವಲ ಹತ್ತು ದಿನದ ಅಧಿವೇಶನ ಕಾಣುವ ಬೆಳಗಾವಿಯ ಸುವರ್ಣ ವಿಧಾನಸೌಧ ಉಳಿದ ದಿನಗಳಲ್ಲಿ ಭೂತ ಬಂಗಲೆಯಾಗಿರುವದು ದುರ್ದೈವ ಈಗ ಸುದೈವದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಅವರು ಈ ಹಿಂದೆ ಬೆಳಗಾವಿಯಲ್ಲಿ ನಡೆದ ಜೆಡಿಎಸ್ ಚುನಾವಣಾ ಪ್ರಚಾರದ ಸಭೆಯಲ್ಲಿ ನಾನು ಮುಖ್ಯಮಂತ್ರಿಯಾದರೆ ತಿಂಗಳಲ್ಲಿ ಹತ್ತು ದಿನ ಬೆಳಗಾವಿಯ ಸುವರ್ಣ ಸೌಧದಲ್ಲಿ ಕಾರ್ಯನಿರ್ವಹಿಸಿ ಈ ಭಾಗದ ಸಮಸ್ಯೆಗಳನ್ನು ಆಲಿಸುವದಾಗಿ ಭರವಸೆ ನೀಡಿದ್ದರು

ಸಿಎಂ ಕುಮಾರಸ್ವಾಮಿ ಇದನ್ನು ಮಾಡಬೇಕಿದೆ

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ನಡುವೆ ಅಭಿವೃದ್ಧಿಯ ವಿಷಯದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದೆ ಹಿಂದಿನ ಸರ್ಕಾರಗಳು ನಂಜುಡಪ್ಪ ವರದಿಯ ಅನುಷ್ಠಾನದ ಹೆಸರಿನಲ್ಲಿ ಕಾಲಹರಣ ಮಾಡಿದ್ರು ತಾರತಮ್ಯ ನಿವಾರಣೆಗೆ ಈ ಸರ್ಕಾರಗಳು ಅನುದಾನ ಕೊಟ್ಟಿದ್ದೆಷ್ಟು ಎನ್ನುವದು ಈ ಸರ್ಕಾರಗಳ ಹತ್ತಿರವೇ ಸ್ಪಷ್ಠ ಮಾಹಿತಿ ಇಲ್ಲ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ನಡುವಿಣ ತಾರತಮ್ಯ ನಿವಾರಣೆಗೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗಳಿಗೆ ಪ್ರತಿ ವರ್ಷ 500 ಕೋಟಿ ಅನುದಾನವನ್ನು ಐದು ವರ್ಷಗಳವರೆಗೆ ನೀಡಬೇಕು ಈ ಅನುದಾನ ಬಳಕೆಗೆ ಆಯಾ ಜಿಲ್ಲೆಗಳ ಎಲ್ಲ ಶಾಸಕರ ಸಮೀತಿ ರಚನೆ ಮಾಡಿ ಸಮೀತಿ ಶಿಫಾರಸ್ಸು ಮಾಡಿದ ಕಾಮಗಾರಿಗಳನ್ನು ಕೈಗೊಂಡು ತಾರತಮ್ಯ ನಿವಾರಿಸಬೇಕು

ಬೆಳಗಾವಿಯ ಸುವರ್ಣ ಸೌಧಕ್ಕೆ ಹಂತ ಹಂತವಾಗಿ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು

ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬದಿಯ ಕಾಕತಿ ಹಲಗಾ ಬಸ್ತವಾಡ,ಬೆನಕನಹಳ್ಳಿ ಮಚ್ಛೆ, ಪೀರನವಾಡಿ ಹುಂಚ್ಯಾನಟ್ಟಿ ಬಿಕೆ ಕಂಗ್ರಾಳಿ ಕೆ ಎಚ್ ಕಂಗ್ರಾಳಿ ಗ್ರಾಮಗಳನ್ನು ಸೇರಿಸಿ ಬೆಂಗಳೂರಿನಂತೆ ಬೆಳಗಾವಿ ಮಹಾನಗರ ಪಾಲಿಕೆಯನ್ನು ಬೃಹತ್ತ ಬೆಳಗಾವಿ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು

ಗಡಿಭಾಗದ ಬೆಳಗಾವಿಯಲ್ಲಿ ಕನ್ನಡ ಮರಾಠಿ ಭಾಷಿಕರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಅವರ ನಡುವೆ ಹುಳಿ ಹಿಂಡಿ ರಾಜಕೀಯ ಲಾಭ ಪಡೆಯುತ್ತಿರುವ ಮುಗ್ಧ ಮರಾಠಿಗರನ್ನು ಕರ್ನಾಟಕ ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿರುವ ಎಂ ಈ ಎಸ್ ನಾಯಕರಿಗೆ ಲಗಾಮು ಹಾಕಲು ಮರಾಠಿ ಭಾಷಿಕರ ವಿಶೇಷ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಪಂದಿಸುವ ಕಾರ್ಯವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡುವದು ಅತ್ಯಗತ್ಯವಾಗಿದೆ

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಂಡರೂ ಧಾರವಾಡ – ಹುಬ್ಬಳ್ಳಿ ಭೈಪಾಸ್ ರಸ್ತೆ ಅಗಲೀಕರಣಗೊಳ್ಳದೇ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು ಈ ರಸ್ತೆಯ ಅಗಲೀಕರಣ ಮಾಡಲು ಎಲ್ಲ ತೊಡಕುಗಳನ್ನು ನಿವಾರಿಸಬೇಕು

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಅತೀವ ಕಳಕಳಿ ಹೊಂದಿದ್ದು ತಿಂಗಳಲ್ಲಿ ಹತ್ತು ದಿನ ಬೆಳಗಾವಿಯ ಸುವರ್ಣ ಸೌಧದಲ್ಲಿ ಕುಳಿತು ಆಡಳಿತ ನಡೆಸಿದರೆ ತಾರತಮ್ಯ ನಿವಾರಣೆ ಮಾಡಲು ಸಾಧ್ಯವಾಗಬಹುದು

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *