Breaking News
Home / Breaking News / ಪೋಸ್ಡ ಕಾರ್ಡ್ ವಿರುದ್ದ ಕರವೇ ಯುವ ಘಟಕ ಆಕ್ರೋಶ….

ಪೋಸ್ಡ ಕಾರ್ಡ್ ವಿರುದ್ದ ಕರವೇ ಯುವ ಘಟಕ ಆಕ್ರೋಶ….

ಬೆಳಗಾವಿ- ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕೆ, ವೀರ ರಾಣಿ ಕಿತ್ತೂರ ಚನ್ನಮ್ಮಾಜಿ,ಹಾಗು ಒನಕೆ ಓಬವ್ಬ ಕುರಿತು ಫೇಸ್ ಬುಕ್ ಪೇಜ್ ನಲ್ಲಿ ಅಶ್ಲೀಲ ವಾಗಿ ಕಾಮೆಂಟ್ ಮಾಡಿದ ಪೋಸ್ಟ ಕಾರ್ಡ ಪೇಸ್ ಬುಕ್ ಪೇಜ್ ಅಡ್ಮಿನ್ ನನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳ ಬೇಕೆಂದು ಬೆಳಗಾವಿ ಕೆರವೇ ಯುವ ಘಟಕ ಒತ್ತಾಯಿಸಿದೆ

ದೀಪಕ ಗುಡಗನಟ್ಟಿ ನೇತ್ರತ್ವದಲ್ಲಿ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು ರಾಜ್ಯಸರ್ಕಾರ ನಾಡು ನುಡಿ ನಾಡಿನ ಇತಿಹಾಸದ ಕುರಿತು ಹಗುರವಾಗಿ ಮಾತನಾಡುವವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುತ್ತದೆ ಎನ್ನುವ ಸಂದೇಶವನ್ನು ನೀಡಬೇಕು ಸಾಮಾಜಿಕ ಜಾಲತಾಣಗಳಲ್ಲಿ ರಾಣಿ ಕಿತ್ತೂರ ಚನ್ನಮ್ಮಾಜಿ ಮತ್ತು ಒನಕೆ ಓಬವ್ವನ ಕುರಿತು ಅಶ್ಲೀಲವಾಗಿ ಕಾಮೆಂಟ್ ಮಾಡಿದ ಪೋಸ್ಟ ಕಾರ್ಡ ಫೇಸ್ ಬುಕ್ ಪೇಜ್ ನಿರ್ವಹಣೆ ಮಾಡುವವರ ವಿರುದ್ಧ ಸರ್ಕಾರ ಇನ್ನುವರೆಗೆ ಕ್ರಮ ಜರುಗಿಸದೇ ಕನ್ನಡಿಗರ ಭಾವನೆಗಳಿಗೆ ಗೌರವ ನೀಡಿಲ್ಲ ಈ ರೀತಿಯ ಘಟನೆಗಳು ನಡೆದಾಗ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದೇ ಬೇ ಜವಾಬ್ದಾರಿಯಿಂದ ನಡೆದುಕೊಂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಆರೋಪಿಸಿದೆ

ಮಾದ್ಯಮಗಳ ಜೊತೆ ಮಾತನಾಡಿದ ದೀಪಕ ಗುಡಗನಟ್ಟಿಇಂತಹ ಘಟನೆಗಳನ್ನು ಕನ್ನಡಿಗರು ಸಹಿಸುವದಿಲ್ಲ ರಾಜ್ಯದ ಗೃಹ ಮಂತ್ರಿಗಳು ಪೋಸ್ಟಕಾರ್ಡ ಫೇಸ್ ಬುಕ್ ಪೇಜ್ ನಿರ್ವಹಣೆ ಮಾಡುವವರನ್ನು ಕೂಡಲೇ ಬಂಧಿಸದಿದ್ದರೆ ಕನ್ನಡಿಗರು ಸರ್ಕಾರದ ವಿರುದ್ಧ ದಂಗೆ ಏಳಬೇಕಾದೀತು ಎಂದು ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಹತ್ತು ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಿ ಗಡಿ ಭಾಗದ ಕನ್ನಡಿಗರಿಗೆ ಯಾವ ಕೊಡುಗೆಯನ್ನು ಕೊಡಲಿಲ್ಲ ಕನ್ನಡ ಸಂಘಟನೆಗಳ ನಾಯಕರ ಜೊತೆ ಸಭೆ ನಡೆಸಿ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿದ್ದ ಮುಖ್ಯಮಂತ್ರಿ ಸಿದ್ಧ ರಾಮಯ್ಯ ಕನ್ನಡಪರ ಹೋರಾಟಗಾರರು ನೀಡಿದ ಸಲಹೆಗಳಿಗೆ ಮಾನ್ಯತೆ ನೀಡದೇ ಗಡಿ ಭಾಗದ ಕನ್ನಡಿಗರನ್ನು ಅವಮಾನಿಸುವ ಜೊತೆಗೆ ಮುಖ್ಯಮಂತ್ರಿ ಸಿದ್ರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಮುನ್ಸೂಚನೆ ನೀಡಿ ಗಡಿ ಭಾಗದ ಕನ್ನಡಿಗರ ಭಾವನೆಗಳ ಜೊತೆ ಮುಖ್ಯಮಂತ್ರಿ ಸಿದ್ರಾಮಯ್ಯ ಚಲ್ಲಾಟವಾಡಿದ್ದಾರೆ ಎಂದು ಕರವೇ ಯುವ ಘಟಕ ಮುಖ್ಯಮಂತ್ರಿ ಗಳ ಹಠಮಾರಿ ಧೋರಣೆಯ ವಿರುದ್ಧ ಕಿಡಿಕಾರಿದೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ನಿರ್ಧಾರವನ್ನು ವಾಪಸ್ ಪಡೆಯಬೇಕು ಗಡಿ ವಿವಾದ ಮುಗಿಯುವ ವರೆಗೂ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡುವವರೆಗೂ ಕರವೇ ಯುವ ಘಟಕ ಸರ್ಕಾರದ ವಿರುದ್ಧ ಹೋರಾಟ ಮುಂದುವರೆಸುತ್ತದೆ ಎಂದು ಯುವ ಘಟಕದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ

ಇಂದು ನಡೆದ ಬೃಹತ್ತ ಪ್ರತಿಭಟನೆಯಲ್ಲಿ ನೂರಾರು ಜನ ಕನ್ನಡದ ಸೇನಾನಿಗಳು ಭಾಗವಹಿಸಿದ್ದರು

About BGAdmin

Check Also

ಎಂ ಡಿ ಲಕ್ಷ್ಮೀ ನಾರಾಯಣ ಆರ್ ಎಸ್ ಎಸ್ ಮೆಸ್ಸೇಂಜರ್- ಮುನವಳ್ಳಿ ಆರೋಪ

ಬೆಳಗಾವಿ- ಆರ್ ಎಸ್ ಎಸ್ ಮತ್ತು ಬಿಜೆಪಿ ಪಕ್ಷದಲ್ಲಿದ್ದ ಎಂಡಿ ಲಕ್ಷ್ಮೀ ನಾರಾಯಣ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಯಡಿಯೂರಪ್ಪ …

Leave a Reply

Your email address will not be published. Required fields are marked *

Facebook Auto Publish Powered By : XYZScripts.com