Breaking News
Home / LOCAL NEWS / ಬರ ನಿರ್ವಹಣೆಯಲ್ಲಿ ಸರ್ಕಾರಗಳು ಜಾರಿಕೊಳ್ಳುತ್ತಿರುವುದು ಕ್ರೌರ್ಯದ ಪರಮಾವಧಿ

ಬರ ನಿರ್ವಹಣೆಯಲ್ಲಿ ಸರ್ಕಾರಗಳು ಜಾರಿಕೊಳ್ಳುತ್ತಿರುವುದು ಕ್ರೌರ್ಯದ ಪರಮಾವಧಿ

 

ಬೆಳಗಾವಿ-ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಯ ನಿರ್ವಹಣೆ ಹಾಗೂ ರೈತರ ಸಹಾಯಕ್ಕೆ ಬರಬೇಕಾದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಪರಸ್ಪರ ಜವಾಬ್ದಾರಿಗಳನ್ನು ವರ್ಗಾಯಿಸಿಕೊಂಡು ಮೋಜು ನೋಡುತ್ತಿರುವುದು ಸರಕಾರಗಳ ಕ್ರೌರ್ಯದ ಪರಮಾವಧಿ ಎಂದು ಹಿರಿಯ ಸಾಹಿತಿ, ಚಿಂತಕ ದೇವನೂರ ಮಹಾದೇವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಸಮಸ್ಯೆಗಳಿಗೆ ಬೆಳಗಾವಿ ಅಧಿವೇಶನದಲ್ಲಿ ಸರಿಯಾಗಿ ಸ್ಪಂದಿಸದ ಕಾರಣ ಜನಾಂದೋಲನಗಳ ಮಹಾಮೈತ್ರಿ  ಸಂಘಟನೆಯ ಆಶ್ರಯದಲ್ಲಿ ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಶ್ರೀಮಂತರಿಗೆ, ಕಾಪೋರೇಟ್‍ಗಳೆಗೆ ಲಕ್ಷಾಂತರ ಕೋಟಿ ರೂಪಾಯಿಗಳ ಸಹಾಯ ನೀಡುವ, ಸಾಲ ಮನ್ನ ಮಾಡುವ ಈ ಸರಕಾರಗಳು ಹೊಟ್ಟಿಗೆ ಅನ್ನಕೊಡುವ ರೈತನಿಗೆ ಕಡಿಮೆ ಪ್ರಮಾಣದ ಸಹಾಯ ನೀಡಲು ಮುಂದಾಗದೇ ಇರುವುದು ಶೋಚನೀಯ ಸಂಗತಿ. ಕಾರ್ಪೋರೇಟ್ ಸಂಸ್ಥೆಗಳದು ದುರಾಶೆ. ಈ ಈ ದರಾಸೆಯಿಂದಾಗಿ ಭೂಮಿಯ ಫಲವತ್ತೆ ಅನ್ನುವುದು ಮಾಯವಾಗಿ ಬರಗಾಲದಂತ ದುರಂತಗಳು ಸಂಭವಿಸಲು ಕಾರಣವಾಗಿದೆ. ಇದನ್ನು ತಡೆಯಲು ದುರಾಶೆಯುಳ್ಳವರಿಗೆ  ಭೂಮಿ ನೀಡುವುದರ ಬದಲು ಕೃಷಿ ಕಾರ್ಯಗಳಿಗೆ ಭೂಮಿ ನೀಡಲು ಮುಂದಾಗಬೇಕು ಅವರು ಸೂಚಿಸಿದ್ದಾರೆ.

ಸಾಲಮನ್ನಾ, ಮೇವು, ಕುಡಿಯುವ ನೀರು ಪೂರೈಕೆಯಂತ ಕಾರ್ಯಕ್ರಮಗಳು ಭ್ರಷ್ಟಾಚಾರದ ಸುತ್ತಸತ್ತಿಕೊಳ್ಳುತ್ತಿದ್ದು, ಕಳೆದ 16 ವರ್ಷಗಳಿಂದ ಈ ಪ್ರಕ್ರಿಯೆ ಪುನರಾವರ್ತನೆಯಾಗುತ್ತಿದೆ. ಇದರ ಬದಲು ಗ್ರಾಮೀಣ ಭಾಗದ ಸಮಗ್ರ ಪುನಶ್ಚೇತನದ ಕಾರ್ಯವನ್ನ ಕೈಗೆತ್ತಿಕೊಳ್ಳಬೇಕು. ಇದಕ್ಕಾಗಿ ವಿಶೇಷ ಪ್ಯಾಕೇಜ್ ನೀಡುವ ವ್ಯವಸ್ಥೆ ಆಗಬೇಕು. ಇದಕ್ಕಾಗಿ ರಾಜ್ಯ ಸರಕಾರ ಶೇಕಡಾ 35 ಹಾಗೂ ಕೇಂದ್ರ ಸರಕಾರ ಶೇಕಡಾ 65ರಷ್ಟು ಹಣಕಾಸಿನ ಹೊಣೆ ಹೊತ್ತುಕೊಳ್ಳಬೇಕು. ಇದನ್ನು ಬೆಳಗಾವಿ ಅಧಿವೇಶದ ಸಂದರ್ಭದಲ್ಲಿ ಚರ್ಚೆಗೆ ಎತ್ತಿಕೊಳ್ಳಬೇಕು. ಇದಕ್ಕೆ ಪ್ರತಿಸ್ಪಂದಿಸದಿದ್ದರೆ, ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್. ಪುಟ್ಟಣಯ್ಯನವರು ಸದನದಲ್ಲಿ ಖಾಸಗಿ ನಿರ್ಣಯವನ್ನು ಮಂಡಿಸಲಿದ್ದಾರೆ ಎಂದು ಹೇಳಿದ ಜನಾಂದೋಲನ ಸಂಘಟನೆಯ ಇನ್ನೊಬ್ಬ ನಾಯಕ ಡಾ. ರವಿ ತಿಳಿಸಿದರು.

ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಕಾಪೋರೇಟ್‍ನವರಿಗೆ 1 ಲಕ್ಷ 14 ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿರುವ ಸರಕಾರಗಳು ದೇಶದ ದುಡಿಯುವ ಸಮುದಾಯಗಳ ಬಗ್ಗೆ ನಿರ್ಲಕ್ಷ ತೋರಿಸುತ್ತಿರುವುದು ಎಂದು ಸಾಮಾಜಿಕ ಕಾರ್ಯಕರ್ತ ಎಸ್. ಆರ್. ಹಿರೇಮಠ ಸರಕಾರದ ನೀತಿಯನ್ನು ಖಂಡಿಸಿದ್ದಾರೆ.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *