Breaking News
Home / Uncategorized / ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಸಾಧ್ಯತೆ ಕಡಿಮೆ – ದೇವೇಗೌಡ

ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಸಾಧ್ಯತೆ ಕಡಿಮೆ – ದೇವೇಗೌಡ

ಬೆಳಗಾವಿ- ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಞುವ ಸಾಧ್ಯತೆಗಳು ಕಡೆಮೆ ಎನ್ನುವ ಸೂಚನೆಯನ್ನು ಜೆಡಿಎಸ್ ಸುಪ್ರಿಮೋ ಮಾಜಿ ಪ್ರಧಾನಿ ದೇವೆಗೌಡ ನೀಡಿದ್ದಾರೆ

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಜೆಡಿಎಸ್ ಪ್ರಾದೇಶಿಕ ಪಕ್ಷ,ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ಪಕ್ಷದ ಕಲ್ಪನೆಗೆಳು ಬೇರೆ ಇರುತ್ತವೆ ಹೀಗಾಗಿ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ ಬೆಳಗಾವಿಯಿಂದಲೇ ಜೆಡಿಎಸ್ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯ ಪ್ರಚಾರ ಆರಂಭಿಸುತ್ತೇವೆ ಎಂದು ದೇವೇಗೌಡರು ತಿಳಿಸಿದರು

ಸಮ್ಮಿಶ್ರ ಸರ್ಕಾರಗಳು ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿಗಳು ಬಜೆಟ್ ಮಂಡಿಸುವ ಸಂಪ್ರದಾಯದಂತೆ ಕುಮಾರಸ್ವಾಮಿ ಬಜೆಟ್ ಮಂಡಿಸಿದ್ದಾರೆ ಬಜೆಟ್ ನಲ್ಲಿ ಅನ್ಯಾಯವಾಗಿದೆ ಎನ್ನುವ ಆರೋಪವನ್ನು ನಾನು ಒಪ್ಪುವದಿಲ್ಲ ಹಿಂದಿನ ಸಿಎಂ ಸಿದ್ರಾಮಯ್ಯ ಮಂಡಿಸಿದ ಬಜೆಟ್ ನ್ನೇ ಕುಮಾರಸ್ವಾಮಿ ಓದಿದ್ದಾರೆ ಬಜೆಟ್ ನಲ್ಲಿ ಒಟ್ಟು 44 ಸಾವಿರ ಕೋಟಿ ರೂ ರೈತರ ಸಾಲ ಮನ್ನಾ ಮಾಡಲಾಗಿದೆ ಇದರ ಲಾಭ ಎಲ್ಲ ಪ್ರದೇಶದ ರೈತರಿಗೆ ಸಿಗುತ್ತದೆ ಎಂದು ದೇವೇಗೌಡರು ಹೇಳಿದರು

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿ,ಹಾಗು ಸೀಟು ಹಂಚಿಕೆ ಕುರಿತು ಪ್ರಾಥಮಿಕ ಹಂತದ ಮಾತುಕತೆ ಅಷ್ಟೇ ನಡೆದಿದೆ ಹೊಂದಾಣಿಕೆ ಆದರೆ ಜೆಡಿಎಸ್ ಪಕ್ಷಕ್ಕೆ ಹತ್ತು ಸೀಟು ಕೊಡಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ವೀರಪ್ಪ ಮೋಯ್ಲಿ ಹೇಳಿದ್ದಾರೆ ಅದು ಅವರ ವ್ಯೆಯಕ್ತಿಕ ಅಭಿಪ್ರಾಯ ಈ ಕುರಿತು ಅಂತಿಮ ಮಾತುಕತೆ ಆಗಿಲ್ಲ ಎಂದು ದೇವೇಗೌಡರು ಹೇಳಿದರು

ಕರಾವಳಿ ಪ್ರದೇಶದ ಜನ ಕುಮಾರಸ್ವಾಮಿ ನಮ್ಮ ಮುಖ್ಯಮಂತ್ರಿ ಅಲ್ಲ ಎಂದು ಫಲಕ ತೋರಿಸಿದ ಹಿನ್ನಲೆಯಲ್ಲಿ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿರಬಹುದು ಕುಮಾರಸ್ವಾಮಿ ಯಾವುದೇ ಪ್ರದೇಶಕ್ಕೆ ಅನ್ಯಾಯ ಮಾಡಿಲ್ಲ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗಿರುವ ಅವರು ಮಹಿಳೆಯರ ಬಗ್ಗೆ ವೃದ್ಧರ ಬಗ್ಗೆ,ಅಂಗವಿಕಲರ ಬಗ್ಗೆ ಅನೇಕ ಯೋಜನೆಗಳನ್ನು ಜಾರಿಗೆ ತರುವದಾಗಿ ಹೇಳಿದ್ರು ಪೂರ್ಣ ಪ್ರಮಾಣದ ಬೆಂಬಲ ಸಿಗಲಿಲ್ಲ ಎಂಬ ನೋವು ಕುಮಾರಸ್ವಾಮಿ ಅವರಿಗಿದೆ ಆದರೂ ಕೊಟ್ಟ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುವದಾಗಿ ಕುಮಾರಸ್ವಾಮಿ ಹೇಳಿದ್ದಾರೆ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಆರೋಪವನ್ನು ನಾನು ಒಪ್ಪುವದಿಲ್ಲ ಆರೋಪ ಮಾಡುವವರು ಬಜೆಟ್ ಸರಿಯಾಗಿ ಓದಿಲ್ಲ ಅಂತಾ ಅನಿಸುತ್ತದೆ ಎಂದು ದೇವೇಗೌಡರು ಹೇಳಿದರು

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಹಲವಾರು ನಾಯಕರ ತಪ್ಪು ನಿರ್ಧಾರಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಆದರೂ ಕಾರ್ಯಕರ್ತರು ನಿಷ್ಠೆಯಿಂದ ದುಡಿದಿದ್ದಾರೆ ಯಾವ ಯಾವ ಜಿಲ್ಲೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆಯೋ ಆಯಾ ಜಿಲ್ಲೆಗಳ ಜಿಲ್ಲಾ ಸಮೀತಿಗಳನ್ನು ವಿಸರ್ಜನೆ ಮಾಡುತ್ತೇವೆ ಬೆಳಗಾವಿ ಜಿಲ್ಲಾ ಸಮೀತಿಯನ್ನು ವಿಸರ್ಜನೆ ಮಾಡುತ್ತೇವೆ ಪಕ್ಷವನ್ನು ಪುನರ್ ಸಂಘಟಿಸುತ್ತೇವೆ ಎಂದು ದೇವೇಗೌಡರು ತಿಳಿಸಿದರು

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *