Breaking News
Home / Breaking News / ರಾಜ್ಯದಲ್ಲಿ ನ್ಯಾಶನಲ್ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ,ಇಲ್ಲಿರುವದು ಸಿದ್ರಾಮಯ್ಯ ಕಾಂಗ್ರೆಸ್- ದೇವೆಗೌಡ

ರಾಜ್ಯದಲ್ಲಿ ನ್ಯಾಶನಲ್ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ,ಇಲ್ಲಿರುವದು ಸಿದ್ರಾಮಯ್ಯ ಕಾಂಗ್ರೆಸ್- ದೇವೆಗೌಡ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ದೇವೆಗೌಡರು ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು
ಕರ್ನಾಟಕದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಇಲ್ಲ. ಇಲ್ಲಿ ಏನೇ ಇದ್ದರೂ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರದಲ್ಲಿದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸಿದ್ರಾಮಯ್ಯ ಪ್ರಾವೇಟ್ ಕಂಪನಿ ಲಿಮಿಟೆಡ್ ಆಗಿದೆ ಎಂದು ದೇವೇಗೌಡರು ಪರೋಕ್ಷವಾಗಿ ಟೀಕಿಸಿದರು

ಕುಮಾರಸ್ವಾಮಿ ಸದನದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಮಾತನಾಡಿದ್ರು. ಈ ವರೆಗೂ ಸರ್ಕಾರ ಕ್ರಮಕೈಗೊಂಡಿಲ್ಲ. ಆದ್ರೆ ಈಗ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.ಎಂದು ಆರೋಪಿಸಿದ ಅವರು
ಮಹದಾಯಿ -ಕಳಸಾ ಬಂಡೂರಿ ಯೋಜನೆ ವಿಚಾರ. ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ಹೊರ ಹಾಕಿದರು ಮಹದಾಯಿ ವಿಚಾರದಲ್ಲಿ ರಾಜಕಾರಣ ಬೇಡ. ಜನರಿಗೆ ಕುಡಿಯುವ ನೀರು ಸಿಗಬೇಕು. ಮಹದಾಯಿ ಸಮಸ್ಯೆಯನ್ನ ಮೂರು ರಾಜ್ಯಗಳು ಕುಳಿತು ಬಗೆಹರಿಸಲು ಮುಂದಾಗಬೇಕು. ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಮಧ್ಯೆ ಒಮ್ಮತ ಮೂಡದಿದ್ದರೇ ಪ್ರಧಾನಿ ಮಧ್ಯೆವಹಿಸಬೇಕು. ಪ್ರಧಾನಿ ಮೋದಿ ನೇತೃತ್ವವಹಿಸಿ ಮಹದಾಯಿ ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸಬೇಕು. ಎಂದು ದೇವೆಗೌಡರು ಒತ್ತಾಯಿಸಿದರು

ಜೆಡಿಎಸ್ ಲ್ಲಿ ಸಾಕಷ್ಟು ಘಟಾನುಘಟಿ ನಾಯಕರು ಇದ್ದಾರೆ.
ಸಾಮೂಹಿಕ ನಾಯಕತ್ವದಲ್ಲಿ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತದೆ. ಮತ್ತೆ ಜೆಡಿಎಸ್ ಅಧಿಕಾರಕ್ಕೆ ತರಲು ಸ್ಪೂರ್ತಿ ಇದೇ ನನಗೆ.ಎಂದು ದೇವೆಗೌಡರು ವಿಶ್ವಾಸ ವ್ಯೆಕ್ತಪಡಿಸಿದರು
ಶಾಸಕ ಕೋನರೆಡ್ಡಿ ಶಂಕರ ಮಾಡಲಗಿ ಮತ್ತಿತರು ಉಪಸ್ಥಿತರಿದ್ದರು

About BGAdmin

Check Also

ಮನೆಯಲ್ಲಿ ಜಗಳಾಡಿದ್ರು ಪೋಸ್ಟಮಾರ್ಟಮ್ ರೂಮ್ ನಲ್ಲಿ ಒಂದಾದ್ರು….

ಬೆಳಗಾವಿ- ವಿಜಯಪೂರ ಜಿಲ್ಲೆಯಿಂದ ಬೆಳಗಾವಿಗೆ ದುಡಿಯಲು ಆಗಮಿಸಿದ್ದ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಕತಿ ಬಳಿಯ ಅಲತಗಾ ಗ್ರಾಮದಲ್ಲಿ ನಡೆದಿದೆ …

Leave a Reply

Your email address will not be published. Required fields are marked *

Facebook Auto Publish Powered By : XYZScripts.com