Breaking News
Home / Breaking News / ಕರ್ಪೂರದಿಂದ ಕಾರಿಗೆ ಬೆಂಕಿ ಹಚ್ಚುವ ಸೈಕೋ ಡಾಕ್ಟರ್ ಕೊನೆಗೂ ಅಂದರ್…

ಕರ್ಪೂರದಿಂದ ಕಾರಿಗೆ ಬೆಂಕಿ ಹಚ್ಚುವ ಸೈಕೋ ಡಾಕ್ಟರ್ ಕೊನೆಗೂ ಅಂದರ್…

 

 

ಬೆಳಗಾವಿ- ಬೆಳಗಾವಿ ನಗರದಲ್ಲಿ ಹಲವಾರು ದಿನಗಳಿಂದನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಮದ್ಯರಾತ್ರಿ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದ ಸೈಕೋ ಡಾಕ್ಟರ್ ಕೊನೆಗೂ ಪೋಲೀಸರ ಬಲೆಗೆ ಬಿದ್ದಿದ್ದಾನೆ

ಬೆಳಗಾವಿಯ ವಿಶ್ವೇಶರಯ್ಯ ನಗರದ ವಿವೇಂತಾ ಅಪಾರ್ಟ್ ಮೆಂಟಿನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾದ ಕಾರಿಗೆ ನಿನ್ನೆ ರಾತ್ರಿ ಬೆಂಕಿ ಹಚ್ಚಲು ಯತ್ನಿಸುವಾಗ ಅಲ್ಲಿಯ ವಾಚ್ ಮನ್ ರೆಡ್ ಹ್ಯಾಂಡಾಗಿ ಸೈಕೋ ಡಾಕ್ಟರ್ ನನ್ನು ಹಿಡಿದು ಪೋಲೀಸರಿಗೆ ಮಾಹಿತಿ ನೀಡಿದ್ದಾನೆ ಪೋಲೀಸರು ಅಲ್ಲಿಗೆ ಧಾವಿಸಿದಾಗ ಡಾಕ್ಟರ್ ಹತ್ತಿರ ಕರ್ಪೂರದ ಡಬ್ಬಿ,ಆಯಿಲ್ ಸ್ಪೀರೀಟ್ ಡಬ್ಬಿ ಚಾಕೂ ಲೈಟರ್ ಸೇರಿದಂತೆ ಇತರ ವಸ್ತುಗಳು ಈ ಡಾಕ್ಟರ್ ಕಾರಿನಲ್ಲಿ ಸಿಕ್ಕಿವೆ

ಗುಲ್ಬರ್ಗ ಮೂಲದ ಡಾ ಅಮೀತ ಗಾಯಕವಾಡ ವಿಕೃತ ಮನಸ್ಸಿನವನಾಗಿದ್ದ ಎಂದು ಹೇಳಲಾಗಿದ್ದು ಈತ ಈಗ ಸದ್ಯಕ್ಕೆ ಭೀಮ್ಸ ಆಸ್ಪತ್ರೆಯಲ್ಲಿ ರಕ್ತ ವಿಭಾಗದ ಮುಖ್ಯ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದಾನೆ

ವಿಕೃತ ಮನಸ್ಸಿನ ಈ ಸೈಕೋ ಡಾಕ್ಟರ್ ಬೆಳಗಾವಿಯ ಜಾಧವ ನಗರದಲ್ಲಿ ಏಳು ಕಾರುಗಳನ್ನು ಸುಟ್ಟಿದ್ದು ಕ್ಯಾಂಪ್ ಪೋಲೀಸ್ ಠಾಣೆಯ ವ್ಯಾಪ್ತಿಯ ಗಣೇಶಪೂರ ಸೇರಿದಂತೆ ಇತರ ಪ್ರದೇಶಗಳಲ್ಲಿ ಮನೆ ಮುಂದೆ ನಿಲ್ಲಿಸಲಾದ ಕಾರುಗಳನ್ನು ಸುಟ್ಟಿದ್ದ ಎಂದು ಡಿಸಿಪಿ ಸೀಮಾ ಲಾಟ್ಕರ್ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ

ಇತ್ತೀಚಿಗೆ ವಿಶ್ವೇಶರಯ್ಯ ನಗರದಲ್ಲಿ ಇರುವ ಶಾಸಕ ಫಿರೋಜ್ ಸೇಠ ಅವರ ಸಹೋದರನ ಮನೆ ಮುಂದೆ ನಿಲ್ಲಿಸಲಾಗಿದ್ದ BMW ಕಾರಿಗೆ ಬೆಂಕಿ ಹಚ್ಚಿದ್ದು ಈ ಸೈಕೋ ಡಾಕ್ಟರ್ ಎಂದು ತಿಳಿದು ಬಂದಿದೆ

ಕೆಲ ವರ್ಷಗಳ ಹಿಂದೆ ಡಾ ಅಮೀತ ಗಾಯಕವಾಡ ಗುಲ್ಬರ್ಗದಲ್ಲಿಯೂ ಸುಮಾರು ಹತ್ತು ಕಾರುಗಳನ್ನು ದ್ವಂಸ ಮಾಡಿದ್ದ ಎಂದು ಹೇಳಲಾಗಿದೆ

ಆಸ್ಪತ್ರೆ ಯಲ್ಲಿಯೂ ಸಹುದ್ಯೋಗಿಗಳ ಜೊತೆ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದ ಈ ಸೈಕೋ ಆಸಾಮಿಯ ಜೊತೆ ಯಾರೊಬ್ಬರೂ ಮಾತಾಡುತ್ತಿರಲಿಲ್ಲ ಇತನ ವಿಚಿತ್ರ ವರ್ತನೆಗೆ ಬೇಸತ್ತು ಎಲ್ಲ ವ್ಯಾಟ್ಸಪ್ ಗ್ರೂಪ್ ನಿಂದ ಇತನನ್ನು ರಿಮೂವ್ ಮಾಡಲಾಗಿತ್ತು ಈತನಿಗೆ ಲಾಂಗ್ ಲೀವ್ ಕೊಡುವ ಚಿಂತನೆಯನ್ನು ಭೀಮ್ಸ ಮುಖ್ಯಸ್ಥರು ಮಾಡಿದ್ದರು ಎನ್ನುವ ಮಾಹಿತಿಯನ್ನು ಡಿಸಿಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ

ಕರ್ಪೂರದಿಂದ ಬೆಂಕಿ ಹಚ್ಚುವ ಚಾಲಾಕಿ

ವೇಸ್ಟ ಬಟ್ಟೆ ಉಂಡೆಯನ್ನು ಆಯಿಲ್ ನಲ್ಲಿ ಒದ್ದೆ ಮಾಡಿ ಅದನ್ನು ಕಾರಿನ ಬೋನೆಟ್ ಅಂಚಿನಲ್ಲಿ ಹಿಂಡಿ ಬೋನೇಟ್ ಸಂದಿಯಲ್ಲಿ ಕರ್ಪೂರ ಸುರಿದು ನಂತರ ಒಂದು ಕರ್ಪೂರಕ್ಕೆ ಲೈಟರ್ ನಿಂದ ಬೆಂಕಿ ಹಚ್ಚಿ ಹೊತ್ತಿದ ಕರ್ಪೂರವನ್ನು ಕಾರಿನ ಬೋನೆಟ್ ಗೆ ತಳ್ಳಿ ಬೆಂಕಿ ಹಚ್ಚುತ್ತಿದ್ದ ಎಂದು ತಿಳಿದು ಬಂದಿದೆ ಆದ್ರೆ ಕಾರುಗಳಿಗೆ ಬೆಂಕಿ ಹಚ್ಚಲು ಕಾರಣ ಏನು ಅನ್ನೋದನ್ನು ಈ ಸೈಕೋ ಡಾಕ್ಟರ್ ಪೋಲೀಸರ ಬಳಿ ಬಾಯಿ ಬಿಡುತ್ತಿಲ್ಲ ಕರ್ಪೂರ ಇಟ್ಕೊಂಡಿದ್ಯಾಕೆ ? ಎಂದು ಪೋಲೀಸರು ಪ್ರಶ್ನೆ ಮಾಡಿದರೆ ಕರ್ಪೂರದ ಬಿಲ್ (ರಸೀದಿ) ನನ್ನ ಹತ್ರ ಇದೆ ಅಂತ ಮಾತ್ರ ಹೇಳುವ ಈ ಸೈಕೋ ಡಾಕ್ಟರ್ ಪೋಲೀರಿಗೆ ಗುಟ್ಟು ಬಿಟ್ಟು ಕೊಡುತ್ತಿಲ್ಲ

ಹಲವಾರು ದಿನಗಳಿಂದ ಬೆಳಗಾವಿ ನಗರದ ಕಾರು ಮಾಲೀಕರ ನಿದ್ದೆಗೆಡಿಸಿದ್ದ ಈ ಸೈಕೋ ಡಾಕ್ಟರ್ ಕೊನೆಗೂ ವಾಚ್ ಮನ್ ಕೈಗೆ ಸಿಕ್ಕಿ ಬಿದ್ದಿರುವ ವಿಷಯ ನಗರ ನಿವಾಸಿಗಳಿಗೆ ಸಮಾಧಾನ ತಂದಿದೆ

About BGAdmin

Check Also

ಸರ್ಕಾರಿ ಶಾಲೆಗಳ ಮಕ್ಕಳಿಗೆ ಶಾಸಕ ಅಭಯ ಪಾಟೀಲ ಪಾಠ…!!

ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಶಾಲಾ …

Leave a Reply

Your email address will not be published. Required fields are marked *

WP Facebook Auto Publish Powered By : XYZScripts.com