Home / Breaking News / ಇಂದು ಸಂಜೆಯಿಂದ ಬೆಳಗಾವಿಯಲ್ಲಿ ಫಲ ಪುಷ್ಪ ಪ್ರದರ್ಶನ

ಇಂದು ಸಂಜೆಯಿಂದ ಬೆಳಗಾವಿಯಲ್ಲಿ ಫಲ ಪುಷ್ಪ ಪ್ರದರ್ಶನ

 

ಬೆಳಗಾವಿ:ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಪ್ರತಿವರ್ಷದಂತೆ ಇಂದು ಸಂಜೆಯಿಂದ ೫೯ನೇ ಫಲಪುಷ್ಪ ಪ್ರದರ್ಶನ ನಗರದ ಕ್ಲಬ್ ರಸ್ತೆಯ ಹ್ಯೂಮ್ ಪಾರ್ಕ್ ನಲ್ಲಿ ನಡೆಯಲಿದೆ.
ಇಂದು ಸಂಜೆ ೫ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಎನ್. ಜಯರಾಮ್, ಸಿಇಓ ಡಾ. ಗೌತಮ ಬಗಾದಿ, ಮಾಜಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಫಿರೋಜ್ ಸೇಠ್, ಸಂಸದರಾದ ಸುರೇಶ ಅಂಗಡಿ, ಪ್ರಭಾಕರ ಕೋರೆ, ಸರಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಸಂಜಯ ಪಾಟೀಲ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಸೇರಿದಂತೆ ಗಣ್ಯಮಾನ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಇಂದು ಬೆಳಿಗ್ಗೆಯೇ ಸಂಜೆ ನಡೆಯುವ ಕಾರ್ಯಕ್ರಮಕ್ಕೆ ತೋಟಗಾರಿಕೆ ಸಿಬ್ಬಂಧಿಯಿಂದ ಭಾರಿ ತಯ್ಯಾರಿ ನಡೆಯಿತು. ಹತ್ತಾರು ಬಗೆಯ ಹೂಕುಂಡಗಳ ಜೋಡನೆ, ಬೆಳೆದು ಸೊಕ್ಕಿದ ಸುಂದರ ಹೂಗಳ ಜೋಡನೆ, ಪುಷ್ಪ ರೂಪಕಗಳ ತಯಾರಿ, ಬೊನ್ಸಾಯ್ ಮರಗಳ ಜೋಡನೆ ನಡೆಯಿತು. ಸಂಜೆ ವೇಳೆಗೆ ಹ್ಯೂಂ ಪಾರ್ಕ್ ಮದುವಣಗಿತ್ತಿಯಂತೆ ಶ್ರಂಗಾರಗೊಳ್ಳಲಿದ್ದು ಜನಸಾಗರ ಫಲಪುಷ್ಪ ವೀಕ್ಷಿಸಲು ಹರಿದು ಬರಲಿದೆ ಎಂದು ತಯ್ಯಾರಿಯಲ್ಲಿ ತೊಡಗಿದ್ದ ತೋಟಗಾರಿಕೆ ಉಪನಿರ್ದೇಶಕ ಇಬ್ರಾಹಿಂ ದೊಡ್ಡಮನಿ ತಿಳಿಸಿದರು.

Check Also

28 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ರಂಗೇರಿದೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಚುನಾವಣಾ ಪ್ರಚಾರದ ಅವಧಿ ಮುಕ್ತಾಯವಾಗುವ ಹಂತದಲ್ಲಿ ವಿವಿಧ ರಾಜಕೀಯ …

Leave a Reply

Your email address will not be published. Required fields are marked *