Breaking News
Home / Breaking News / ನನ್ನ ಮೂಲ ಬೇರು ಕನ್ನಡ ಅದನ್ನು ನಾನೇಂದಿಗೂ ಮರೆಯೋದಿಲ್ಲ- ನಂದಿನಿ

ನನ್ನ ಮೂಲ ಬೇರು ಕನ್ನಡ ಅದನ್ನು ನಾನೇಂದಿಗೂ ಮರೆಯೋದಿಲ್ಲ- ನಂದಿನಿ

ನಾವು ನಮ್ಮ ಮೂಲ ಬೇರುಗಳನ್ನು ಮರೆಯುವಂತಿಲ್ಲ : ಯುಪಿಎಸ್‍ಸಿ ಟಾಪರ್ ನಂದಿನಿ ಕೆ.ಎಅರ್. ಅವರ ನೆಲಮೂಲ ಸಂಸ್ಕøತಿಯ ಕಾಳಜಿಯ ಮಾತುಗಳು

ಕನ್ನಡ ನೆಲದ ಸಂಸ್ಕøತಿಯಲ್ಲಿಯೇ ಬೆಳೆದ ಬಂದು ನಾನು ಸಹಜವಾಗಿ ನನಗೆ ಕನ್ನಡದ ಬಗ್ಗೆ ಆಸಕ್ತಿ ಅಭಿಮಾನ ಮೂಡಲು ಕಾರಣವಾಗಿದ್ದು, ನಮ್ಮ ಅಭಿವೃದ್ಧಿಯನ್ನು ನಮ್ಮ ನೆಲ ಮೂಲದಿಂದಲೇ ಕಂಡುಕೊಳ್ಳಲು ಮುಂದಾದಾಗ ಯಶಸ್ವಿ ಕಾಣಲು ಸಾಧ್ಯವಿದೆ ಎ|ಂದು ಯುಪಿಎಸ್‍ಸಿ ಪರೀಕ್ಷೆಯಲ್ಲಿ ದೇಶದಲ್ಲಿಯೇ ಪ್ರಥಮ ರ್ಯಾಂಕ್‍ದೊಂದಿಗೆ ಪೂರೈಸಿದ ಅಚ್ಚ ಕನ್ನಡತಿ ನಂದಿನಿ ಕೆ. ಆರ್. ಅವರ ಸ್ಪಷ್ಟವಾದ ನಿಲುವಿನ ಅಭಿಪ್ರಾಯವಿದು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ನಡೆಯಲಿರುವ ಬಡಪ್ರತಿಭಾವಂತ ಮಕ್ಕಳ ಪುಸ್ಕಾರ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲು ಆಗಮಿಸಿರುವ ಅವರು ಇಂದು ಮುಂಜಾನೆ ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ಕರೆದ ಉಪಹಾರಕೊಟದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ತಮ್ಮ ಸಾಧನೆ, ಶ್ರಮದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡ ಅವರು, ನಾವು ನಮ್ಮ ಬೆಳವಣಿಗೆಯನ್ನು ನಮ್ಮ ಮೂಲ ಬೇರುಗಳೊಂದಿಗೆ ಕಂಡುಕೊಂಡಾಗ ಮಾತ್ರ ಅದಕ್ಕೆ ನಿಲವಾದ ಬೆಲೆಯಿದೆ. ಮತ್ತು ಸಾಧನೆಯ ಉತ್ತುಂಗ ಸ್ಥಿತಿಯನ್ನು ತಲುಪಿದಾಗ ಸಹಿತ ನಮ್ಮ ಬದುಕಿನ ಮೂಲ ಬೇರುಗಳನ್ನು ಮರೆಯಬಾರದು ಎಂದು ಹೇಳಿರುವುದು ಪ್ರಸ್ತುತ ಸಂದರ್ಭದಲ್ಲಿ ನಂದಿನಿ ಅವರ ಕಾಳಜಿಯ ಮಾತು ಹೆಚ್ಚು ಪ್ತಸ್ತುತವಾಗಿದೆ.

ನಮ್ಮ ವಿಚಾರ ಅನುಭವಗಳನ್ನು ಹಂಚಿಕೊಳ್ಳಲು ಯವುದೇ ಭಾಷೆಯಾಗಿದ್ದರೂ ನಮ್ಮ ಮಾತೃಭಾಷೆಯನ್ನು ಕೆಡೆಗಣಿಸುವಂತಿಲ್ಲ. ಮೂದಲಿನಿಂದಲೂ ನಾನು ಕನ್ನಡದ ಸಾಹಿತ್ಯ ಸಾಂಸ್ಕøತಿಕ ವಾತಾವರಣದಲ್ಲಿ ಬೆಳೆದ ಬಂದಿದ್ದು, ತಾಯಿ ತಂದೆಯಿಂದ ಸರ್ವಜ್ಞನ ವಚನಗಳು, ಮಂಕುತಿಮ್ಮನ ಕಗ್ಗ, ವಚನಗಳು ಸೇರಿದಂತೆ ಕನ್ನಡ ಸಾಹಿತ್ಯದ ಪರಿಚಯ ಪಡೆದುಕೊಂಡಿದ್ದೇನೆ. ಇದರಿಂದಾಗಿ ನನಗೆ ಕನ್ನಡ ಸಾಹಿತ್ಯ ಅಧ್ಯಯನಕ್ಕೆ ಪ್ರೇರಣೆಯಾಯಿತು. ಇಂದು ಯುಪಿಎಸ್‍ಸಿ ಪರೀಕ್ಷೆಯಲ್ಲಿ ಒಂದು ವಿಷಯವನ್ನು ಕನ್ನಡ ಸಾಹಿತ್ಯ ತೆಗೆದುಕೊಂಡು ಯಶಸ್ವಿ ಸಾಧಿಸಲು ಸಾಧ್ಯವಾಗಿದೆ. ಭಾಷೆಯ ಬಗ್ಗೆ ಕೀಳರಿಮೆ, ಅಥವಾ ನಿಸ್ಕಾಳಜಿ ಸೂಕ್ತವಲ್ಲ. ಪರಿಣಾಮಕಾರಿ ಅಭಿವ್ಯಕ್ತಿಗೆ ಭಾಷೆ ಅತ್ಯಂತ ಮುಖ್ಯ ಎಂದು ಹೇಳಿದರು.

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *