Breaking News
Home / Breaking News / ಹೆಲ್ಮೆಟ್ ಕಡ್ಡಾಯಕ್ಕೆ ಮೊದಲು ಜಾಗೃತಿ ಆಮೇಲೆ ದಂಡ…ಹುಷಾರ್…

ಹೆಲ್ಮೆಟ್ ಕಡ್ಡಾಯಕ್ಕೆ ಮೊದಲು ಜಾಗೃತಿ ಆಮೇಲೆ ದಂಡ…ಹುಷಾರ್…

ಬೆಳಗಾವಿ- ಬೆಳಗಾವಿ ಉತ್ತರದಲ್ಲಿ ಅಪಘಾತಗಳ ಹಾಗು ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು ಇದರ ಪ್ರಮಾಣ ತಗ್ಗಿಸಲು ಪೋಲೀಸ್ ಇಲಾಖೆ ಸಂಚಾರಿ ನಿಯಮ ಪಾಲಿಸಿ ಜೀವ ಉಳಿಸಿ ಎಂಬ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಲು ನಿರ್ಧರಿಸಿದೆ ಎಂದು ಐಜಿಪಿ ಅಲೋಕ ಕುಮಾರ್ ತಿಳಿಸಿದ್ದಾರೆ

ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ ಚೊಚ್ಚಲ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ವಲಯದ ಎಲ್ಲ ಜಿಲ್ಲೆಗಳಲ್ಲಿ ಹೆಲ್ಮೆಟ್ ಕಡ್ಡಾಯದ ಕುರಿತು ಮೊದಲು ಜನೇವರಿ 25 ರವರೆಗೆ ಜಾಗೃತಿ ಮಾಡುತ್ತೇವೆ ಗಣರಾಜ್ಯೋತ್ಸವದ ದಿನ ಮಧ್ಯಾಹ್ನದಿಂದ ಉತ್ತರ ವಲಯದ ಎಲ್ಲ ಜಿಲ್ಲೆಗಳಲ್ಲಿ ಹೆಲ್ಮೇಟ್ ಧರಿಸದ ದ್ವಿಚಕ್ರ ವಾಹನ ಸವಾರರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವ ಕಾರ್ಯಾಚರಣೆ ನಡೆಸುತ್ತೇವೆ ಎಂದು ಐಜಿಪಿ ಅಲೋಕಕುಮಾರ್ ಎಚ್ವರಿಕೆ ನೀಡಿದ್ದಾರೆ

ಬೆಳಗಾವಿ ಉತ್ತರ ವಲಯದಲ್ಲಿ ಅಪಘಾತಗಳು ಹೆಚ್ವಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ ಹೆಚ್ವಿನ ಸಂಖ್ಯೆಯಲ್ಲಿ ಜನ ಸಾವೀಗೀಡಾಗುತ್ತಿದ್ದು ಸಾರ್ವಜನಿಕರು ಪೋಲೀಸರಿಂದ ಬಚಾವ್ ಆಗಲು ಫೋಲೀಸರು ಕಾರ್ಯಾಚರಣೆ ನಡೆಸುವ ಸ್ಥಳದಲ್ಲಿ ಮಾತ್ರ ಹೆಲ್ಮೆಟ್ ಹಾಕುವದನ್ಮು ಕೆಟ್ಟ ಚಾಳಿಯನ್ನು ಬಿಟ್ಟು ತಮ್ಮ ಅಮೂಲ್ಯವಾದ ಪ್ರಾಣ ರಕ್ಷಣೆಗೆ ವಾಹನ ಚಲಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಅಲೋಕಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಎಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು ಬೆಳಗಾವಿ ಉತ್ತರ ವಲಯದ ರೌಡಿಗಳು ಮತ್ತು ಮತೀಯ ಗುಂಡಾಗಳ ಮೇಲೆ ನಿಗಾ ಇಡಲಾಗಿದೆ ರಾಜಕೀಯ ಸಂಪರ್ಕ ಹೊಂದಿರುವ ಗುಂಡಾಗಳನ್ನು ಗುರುತಿಸಿ ಅವರ ಮೇಲೆ ರೌಡಿಶೀಟ್ ತೆರೆದು ಮಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅಲೋಕಕುಮಾರ್ ತಿಳಿಸಿದರು

ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ವಲಯದ ಜಿಲ್ಲೆಗಳಲ್ಲಿ ಆಕ್ರಮ ಮರಳು ಸಾಗಾಣಿಕೆ ಮಟಕಾ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಸೂಚಿಸಲಾಗಿದ್ದು ಆಕ್ರಮ ಮರಳು ಸಾಗಾಣಿಕೆ ಮಟಕಾ ದಂಧೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಅವರು ಸ್ಥಳಿಯ ಪೋಲೀಸರಿಗೆ ಮಾಹಿತಿ ನೀಡಬೇಕು ಅವರು ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಅವರೂ ಕ್ರಮ ಕೈಗೊಳ್ಳದಿದ್ದರೆ ತಮಗೆ ಮಾಹಿತಿ ನೀಡಬೇಕು ಸತ್ಯಾಂಶ ಇರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ರೆ ಅಂತಹ ಪ್ರಕರಣಗಳ ತನಿಖೆ ಮಾಡ್ತೀನಿ ಯಾವುದೇ ಮುಲಾಜಿಲ್ಲದೆ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಅಲೋಕಕುಮಾರ್ ಹೇಳಿದರು

ಪೋಲೀಸ್ ಇಲಾಖೆಯನ್ನು ಜನಸ್ನೇಹಿ ಮಾಡಲು ಜನಪರ್ಕ ಸಭೆಗಳನ್ನು ಮಾಡುತ್ತೇವೆ ಪೋಲೀಸ್ ಇಲಾಖೆಯ ಸಿಬ್ಬಂಧಿಗಳಿಗೆ ಹೆಲ್ತ ಕಾರ್ಡ ಕೊಡ್ತೀವಿ ಅವರ ಆರೋಗ್ಯದ ಮೇಲೆ ನಿಗಾ ಇಡ್ತೀವಿ ಖಾಯಿಲೆ ಇರುವ ಸಿಬ್ಬಂಧಿಗಳಿಗೆ ಚಿಕಿತ್ಸೆ ಕೊಡಸ್ತೀವಿ ಎಂದು ಅಲೋಕಕುಮಾರ್ ಹೇಳಿದ್ರು

ಪ್ರತಿ ತಿಂಗಳಿಗೊಮ್ಮೆ ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸಿದ ಕಾನ್ಟೇಬಲ್ ಹೆಡ್ ಕಾನ್ಟೇಬಲ್ ಗಳನ್ನು ಗುರುತಿಸಿ ಅವರನ್ನು ತಿಂಗಳ ಪೋಲೀಸ್ ಎಂದು ಗೌರವಿಸಿ ತಿಂಗಳಪೂರ್ತಿ ಅವರ ಹೆಸರನ್ನು ಠಾಣೆಯ ಫಲಕದ ಮೇಲೆ ಬರೆಸುತ್ತೇವೆ ಎಸ್ಪಿ ಯಿಂದ ಪ್ರಶಂಸೆ ಪತ್ರವನ್ನು ಅವರಿಗೆ ಕೊಡುತ್ತೇವೆ ಎಂದು ಅಲೋಕ ಕುಮಾರ್ ತಿಳಿಸಿದ್ರು

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *