Breaking News
Home / ವಿಶೇಷ ವರದಿ / ಶನಿವಾರ ಬೆಳಗಾವಿಯಲ್ಲಿ ಕನ್ನಡ ‘ ತಮಾಶಾ’ ನಾಟಕ ಪ್ರದರ್ಶನ

ಶನಿವಾರ ಬೆಳಗಾವಿಯಲ್ಲಿ ಕನ್ನಡ ‘ ತಮಾಶಾ’ ನಾಟಕ ಪ್ರದರ್ಶನ

ಬೆಳಗಾವಿ-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನೂತನವಾಗಿ ನಿರ್ಮಿಸಿರುವ ‘ತಮಾಶಾ’ ಕನ್ನಡ ಜನಪದ ನಾಟಕದ ಪ್ರದರ್ಶನ ಅ.29 ಶನಿವಾರ ಸಂಜೆ 6 ಗಂಟೆಗೆ ಬೆಳಗಾವಿ ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.
ಮಹಾರಾಷ್ಟ್ರದ ಜನಪ್ರಿಯ ಜನಪದ ಕಲಾಪ್ರಕಾರವಾಗಿರುವ “ತಮಾಶಾ” ನಮ್ಮ ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಒಂದು. 150 ರಿಂದ 200 ವರ್ಷಗಳ ಇತಿಹಾಸವಿರುವ ಈ ಕಲೆ ಕಾಲಕ್ಕನುಗುಣವಾಗಿ ತನ್ನ ಸ್ವರೂಪದಲ್ಲಿ ತಕ್ಕಮಟ್ಟಿನ ಬದಲಾವಣೆ ಮಾಡಿಕೊಳ್ಳುತ್ತ ಬಂದಿದೆ.
ಭಕ್ತಿ ಪರಂಪರೆಯಿಂದ,ಹಾಸ್ಯ,ರಂಜನೀಯ ಅಂಶಗಳ ಮಧ್ಯೆಯೇ ಸಮಕಾಲೀನ ಸಂಗತಿಗಳನ್ನು ವಿವರಿಸುತ್ತದೆ. ಜನಪ್ರಿಯ “ತಮಾಶಾ” ಕಲೆಯನ್ನು ಕನ್ನಡದ ಜನರಿಗೆ ಪರಿಚಯಿಸುವದು ಹಾಗೂ ಸರ್ಕಾರದ ಜನಪರ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯದು.
ಜನಪದ ಸೊಗಡಿನ ಈ ವಿಶಿಷ್ಠ ಕಲಾ ಪ್ರದರ್ಶನ ಮನರಂಜನೆಯೊಂದಿಗೆ ಮಾಹಿತಿಯನ್ನೂ ಕೂಡ ಸಮರ್ಥವಾಗಿ ಸಂವಹನ ಮಾಡಬಲ್ಲದು. ಮುಂಬೈನ ಪ್ರೊ.ಗಣೇಶ ಚಂದನಶಿವೆಯವರ ನಿರ್ದೇಶನ,ಡಾ.ಡಿ.ಎಸ್.ಚೌಗಲೆಯವರ ಕನ್ನಡ ರೂಪಾಂತರದಲ್ಲಿ ತಮಾಶಾ ಸಿದ್ಧಗೊಂಡಿದೆ.
ಇತ್ತೀಚೆಗೆ ಧಾರವಾಡದಲ್ಲಿ ಸಾಹಿತಿಗಳು ,ಕಲಾವಿದರು, ಪತ್ರಕರ್ತರು ಹಾಗೂ ರಂಗಾಸಕ್ತರ ಸಮ್ಮುಖದಲ್ಲಿ ತಮಾಶಾ ರಂಗ ತಾಲೀಮು ಪ್ರಯೋಗ ಏರ್ಪಡಿಸಲಾಗಿತ್ತು. ಅಲ್ಲಿ ವ್ಯಕ್ತವಾದ ಅಭಿಪ್ರಾಯಗಳನುಸಾರ ಮಾರ್ಪಾಡುಗಳನ್ನು ಮಾಡಿಕೊಂಡು ಇದೀಗ ಸಾರ್ವಜನಿಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ‘ತಮಾಶಾ’ ಮೊದಲ ಪ್ರದರ್ಶನವು ಧಾರವಾಡದಲ್ಲಿ ಯಶಸ್ವಿಯಾಗಿ ನಡೆದಿದೆ.

ನೃತ್ಯವೇ ಪ್ರಧಾನವಾಗಿರುವ ‘ತಮಾಶಾ’ ನಾಟಕವು ಪೂರ್ವರಂಗ,ಉತ್ತರ ರಂಗ ,ಬತಾವಣಿ ಹೀಗೆ ವಿವಿಧ ವಿಭಾಗಗಳನ್ನು ಒಳಗೊಂಡಿರುತ್ತದೆ. ಗೊಲ್ಲತಿಯರ ಪ್ರಸಂಗಗಳು ನಾಟಕದ ಒಂದು ಅವಿಭಾಜ್ಯ ಅಂಗವಾಗಿವೆ. ಸಂಸ್ಕøತಿ,ಕಲಾಪರಂಪರೆಯ ಕಂಪನ್ನು ವಿನಿಮಯ ಮಾಡಿಕೊಳ್ಳುವ ಜೊತೆಗೆ ಜನಜಾಗೃತಿಯನ್ನೂ ಹೆಚ್ಚಿಸುವ ಕಾರ್ಯ ಇದಾಗಿದೆ ಸಾರ್ವಜನಿಕರು ಶನಿವಾರ ಸಂಜೆ 6 ಗಂಟೆಗೆ ನಡೆಯಲಿರುವ ತಮಾಶಾ ಪ್ರದರ್ಶನ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರÀ ಕೋರಿದ್ದಾರೆ

Check Also

ಬೆಳಗಾವಿಯ ಬೀದಿಗಿಳಿದ ಇಲೆಕ್ಟ್ರಿಕ್ ರಿಕ್ಷಾ…!

ಬೆಳಗಾವಿ ಬೆಳಗಾವಿ ನಗರ ದಿನದಿಂದ ದಿನಕ್ಕೆ ಸ್ಮಾರ್ಟ್ ಆಗುತ್ತಿದೆ. ನಗರದ ರಸ್ತೆಗಳಲ್ಲಿ ಇಲೆಕ್ಟ್ರಿಕ್ ರಿಕ್ಷಾಗಳು ರಾರಾಜಿಸುತ್ತಿವೆ. ಪರಿಸರ ಸ್ನೇಹಿಯಾಗಿರುವ ಈ …

Leave a Reply

Your email address will not be published. Required fields are marked *