Breaking News
Home / ಬೆಳಗಾವಿ ನಗರ / ಕನ್ನಡ ನೆಲ, ಜಲದ ಸಂರಕ್ಷಣೆ…ಯುವಕರ ಹೊಣೆ- ಮಹಾದೇವ

ಕನ್ನಡ ನೆಲ, ಜಲದ ಸಂರಕ್ಷಣೆ…ಯುವಕರ ಹೊಣೆ- ಮಹಾದೇವ

ಬೆಳಗಾವಿ- ಕನ್ನಡ ನೆಲ.ಜಲ.ಹಾಗು ಕನ್ನಡ ಭಾಷೆಗೆ ಧಕ್ಕೆ ಬಂದಾಗ ಅದರ ರಕ್ಷಣೆಗೆ ಯುವಪಡೆ ಧಾವಿಸಬೇಕು ಭಾಷೆಯ ವಿಷಯದಲ್ಲಿ ರಾಜಕಾರಣ ಮಾಡುವವರಿಗೆ ರಕ್ಕ ಪಾಠ ಕಲಿಸಬೇಕೆಂದು ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಕರೆ ನೀಡಿದರು

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕರವೇ ನಗರ ವಿಧ್ಯಾರ್ಥಿ ಘಟಕದ ಪಧಾಧಿಕಾರಿಗಳ ನೇಮಕ ಮಾಡಿದ ಬಳಿಕ ಮಾತನಾಡಿದ ಅವರು ಗಡಿನಾಡ ಬೆಳಗಾವಿಯಲ್ಲಿ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕನ್ನಡದ ಯುವಕರು ಪಶಲ್ಗೊಳ್ಳಬೇಕೆಂದು ಮಹಾದೇವ ತಳವಾರ ಕರೆ ನೀಡಿದರು

ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೀಪಕ ಗುಡಗನಟ್ಟಿ ಮಾತನಾಡಿ ಬೆಳಗಾವಿ ನಗರದಲ್ಲಿ ವಿಧ್ಯಾರ್ಥಿಗಳನ್ನು ಸಂಘಟಿಸಿ ಕನ್ನಡದ ಸೈನ್ಯವನ್ನು ಬಲಪಡಿಸುವ ಸಂಕಲ್ಪ ಮಾಡಲಾಗಿದೆ ಅದಕ್ಕಾಗಿ ಕನ್ನಡದ ಸೇನಾಪತಿ ಗಳನ್ನು ನೇಮಕ ಮಾಡಲಾಗಿದ್ದು ಅವರು ನಗರದ ಪ್ರತಿಯೊಂದು ಕಾಲೇಜಿನಲ್ಲಿ ವಿಧ್ಯಾರ್ಥಿಗಳನ್ನು ಸಂಘಟಿಸಬೇಕೆಂದು ಹೇಳಿದರು

ನಗರ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಅಲ್ಕೇಶ ಶಿವಗೌಡ ಪಾಟೀಲ,,ಉಪಾಧ್ಯಕ್ಷರಾಗಿ ಚೇತನ ಚಂದರಗಿ ಹಾಗು ಸೌಬೇಜ ಜೈನ ಅವರನ್ನು ನೇಮಕ ಮಾಡಲಾಯಿತು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *