Breaking News
Home / Breaking News / ರಾಜ್ಯ ಸರ್ಕಾರ ರೈತರ ಸರ್ಕಾರ ಸಿದ್ರಾಮಯ್ಯ ರೈತರ ಹರಿಕಾರ- ಹೆಬ್ಬಾಳಕರ

ರಾಜ್ಯ ಸರ್ಕಾರ ರೈತರ ಸರ್ಕಾರ ಸಿದ್ರಾಮಯ್ಯ ರೈತರ ಹರಿಕಾರ- ಹೆಬ್ಬಾಳಕರ

ರಾಜ್ಯ ಸರ್ಕಾರ ರೈತರ ಸರ್ಕಾರ ಸಿದ್ರಾಮಯ್ಯ ರೈತರ ಹರಿಕಾರ- ಹೆಬ್ಬಾಳಕರ

ಬೆಳಗಾವಿ: ರಾಜ್ಯದಲ್ಲಿ ತಲೆ ದೂರಿರುವ ಭೀಕರ ಬರಗಾಲದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿ ರೈತರ ಬಗ್ಗೆ ಸರಕಾರಕ್ಕೆ ಇರುವ ಕಾಳಜಿಯನ್ನು ತೋರಿಸಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರು ಸಂತಸ ವ್ಯಕ್ತ ಪಡಿಸಿದ್ದಾರೆ.
ಕೇಂದ್ರ ಸರಕಾರ ಸಾವಿರ ಹಾಗೂ 500 ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ರಾಜ್ಯಕ್ಕೆ ಬರುವ ತೆಡರಿಗೆ ಆದಾಯ ಪ್ರಮಾಣದಲ್ಲಿ ಏರುಪೇರಾಗಿದೆ. ಆರ್ಥಿಕ ಸಂಕಷ್ಟ ಎದುರಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ರೈತರ 50 ಸಾವಿರ ರೂ,ವರೆಗಿನ 8 ಸಾವಿರ ಕೋಟಿಗೂ ಹೆಚ್ಚು ಸಾಲ ಮನ್ನಾ ಮಾಡುವದರ ಮೂಲಕ ರಾಜ್ಯ ಸರಕಾರ ರೈತರ ಸರಕಾರ ಎಂಬುದನ್ನು ಸಾಬೀತು ಮಾಡಿದ್ದಾರೆ.
ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಬಣ್ಣ ಬಣ್ಣದ ಮಾತುಗಳನ್ನಾಡಿ ದೇಶದ ಜನರನ್ನು ಭಾವನಾತ್ಮಕ ಲೋಕಕ್ಕೆ ಕೊಂಡೊಯ್ದು ಕಲ್ಪನೆಯ ಕಥೆ ಕಟ್ಟುತ್ತಿದೆ. ಅಧಿಕಾರಕ್ಕೆ ಬರುವ ಮೊದಲು ಕೊಟ್ಟ ಒಂದೆ ಒಂದು ಭರವಸೆಯನ್ನು ಈಡೇರಿಸಿಲ್ಲ. ಬಿಜೆಪಿ ಸರಕಾರದಿಂದ ದೇಶದ ಅಭಿವೃದ್ದಿ ಸಾಧ್ಯ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ದೇಶದ ಹಲವಾರು ರಾಜ್ಯಗಳಲ್ಲಿ ಭೀಕರ ಬರಗಾಲ ಎದುರಾಗಿದೆ. ಅನ್ನದಾತನ ಬದುಕು ದುಸ್ತರಗೊಂಡಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರಕಾರ ದೇಶದ ರೈತರ ಸಾಲ ಮನ್ನಾ ಮಾಡುವದನ್ನು ಬಿಟ್ಟು ಸಾಲ ಮನ್ನಾ ವಿಷಯದಲ್ಲಿ ಬಿಜೆಪಿ ನಾಯಕರು ರಾಜಕಾರಣ ಮಾಡುತ್ತಿದ್ದಾರೆ, ಕೇಂದ್ರದಲ್ಲಿರುವ ಬಿಜೆಪಿ ಸರಕಾರಕ್ಕೆ ಎಳ್ಳಷ್ಟು ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದ್ದಾರೆ.
ಕೇಂದ್ರದ ಬಿಜೆಪಿ ಸರಕಾರ ದೇಶಧ ಅಭಿವೃದ್ದಿಯನ್ನು ಮರೆತು, ರೈತರನ್ನು ಕಡೆಗಣಿಸಿದೆ. ದೇಶದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವದನ್ನು ಬಿಟ್ಟು ರಾಮ ಮಂದಿರ ನಿರ್ಮಾಣಕ್ಕೆ ಕಲ್ಲು ಸಂಗ್ರಹಿಸಲು ಹೊರಟಿರುವದು ಸೋಜಿಗದ ಸಂಗತಿಯಾಗಿದೆ ಎಂದು ವ್ಯಂಗವಾಡಿದ್ದಾರೆ.
ಈ ಹಿಂದೆ ಇಟ್ಟಂಗಿ ಸಂಗ್ರಹಿಸಿ ರಾಮ ಮಂದಿರವನ್ನು ಕಟ್ದೇ ಕಬ್ಬಿಣ ಸಂಗ್ರಹಿಸಿ ಸರದಾಋ ವಲ್ಲಭಭಾಯಿ ಪಟೇಲರ ಮೂರ್ತಿಯನ್ನು ನಿರ್ಮಿಸದೇ ಈಗ ಗುಜರಾತ ಮತ್ತು ಕರ್ನಾಟಕ ರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರಿಗೆ ರಾಮ ಮಂದಿರದ ಬಗ್ಗೆ ಈಗ ಮತ್ತೆ ಜ್ಞಾನೋದಯವಾಗಿದೆ.ಚುನಾವಣೆ ಬಂದಾಗ ರಾಮ ಮಂದಿರ ಕಟ್ಟುವ ವಿಷುದ ಕುರಿತು ಬಿಜೆಪಿ ಡ್ರಾಮಾ ಮಾಡುತ್ತಿದೆ ಎಂದು ಅರೋಪಿಸಿದ್ದಾರೆ.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *