Breaking News
Home / Breaking News / ಸಿದ್ಧನಭಾಂವಿ ಕೆರೆ ತುಂಬಿಸುವ ಹಠಕ್ಕೆ ಬಿದ್ದಿರುವ ಲಕ್ಷ್ಮೀ ಹೆಬ್ಬಾಳಕರ

ಸಿದ್ಧನಭಾಂವಿ ಕೆರೆ ತುಂಬಿಸುವ ಹಠಕ್ಕೆ ಬಿದ್ದಿರುವ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಸೆರಗಿನಲ್ಲಿರುವ ಹತ್ತಾರು ಗ್ರಾಮಗಳ ಜೀವನಾಡಿಯಾಗಿರುವ ಸಿದ್ಧನಬಾಂವಿ ಕೆರೆಗೆ ಕಾಯಕಲ್ಪ ನೀಡುವ ಕಾಲ ಈಗ ಕೂಡಿ ಬಂದಿದೆ. ಕೆಪಿಸಿಸಿ ಮಹಿಳಾ ಘಟಕದ ಅದ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರು ಹೇಗಾದರೂ ಮಾಡಿ ಈ ಕೆರೆಯನ್ನು ತುಂಬಿಸುವ ಹಟಕ್ಕೆ ಬಿದ್ದಿದ್ದಾರೆ ಜಲಸಂಪನ್ಮೂಲ ಸಚಿವರನ್ನು ಹಿರೆಬಾಗೆವಾಡಿ ಗ್ರಾಮಕ್ಕೆ ಕರೆÀದೊಯ್ದು ಸಿದ್ಧನಬಾವಿ ಕೆರೆಯ ದರ್ಶಣ ಮಾಡಿಸಿದ್ದಾರೆ ಈ ಕುರಿತು ಒಂದು ರಿಪೋರ್ಟ ಇಲ್ಲಿದೆ ನೋಡಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಹಾಗು ಸುತ್ತಮುತ್ತಲಿನ ಗ್ರಾಮಗಳ ಜೀವನಾಡಿಯಾಗಿರುವ ಸಿದ್ಧನಭಾಂವಿ ಕೆರೆಯನ್ನು ತುಂಬಿಸುವ ಯೋಜನೆಗೆ ಈಗ ಜೀವ ಬಂದಿದೆ ಈ ಕೆರೆಗೆ ಮಲಪ್ರಬಾ ನದಿಯಿಂದ ನೀರು ಹರಿಸಿ ಕೆರಯನ್ನು ತುಂಬಿಸಲು ಲಕ್ಷ್ಮೀ ಹೆಬ್ಬಾಳಕರ ಅವರು ಸಂಕಲ್ಪ ಮಾಡಿದ್ದು ಗುರುವಾರ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ ಸಿದ್ಧನಭಾಂವಿ ಕೆರೆಗೆ ಭೇಟಿ ನೀಡಿ ಕೆರೆಯ ಸಾಮಥ್ರ್ಯವನ್ನು ಹಾಗು ಕೆರೆಯ ಪರಿಸ್ಥಿತಿಯನ್ನು ಪರಶೀಲಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗು ಹಿರೇಬಾಗೇವಾಡಿ ಗ್ರಾಮದ ಜಿಲ್ಲಾ ಪಂಚಾಯತಿ ಸದಸ್ಯರು ತಾಲೂಕಾ ಪಂಚಾಯತಿ ಸದಸ್ಯರು ಹಾಗು ಗ್ರಾಮದ ಹಿರಿಯರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು
ಗ್ರಾಮದ ಹಿರಿಯರು ಕೆರೆಯ ಇತಿಹಾಸವನ್ನು ಸಚಿವರೆದುರು ಬಿಚ್ಚಿಟ್ಟರು ಗ್ರಾಮದ ಹಿರಿಯರು ಬಂಗಾರವನ್ನು ಅಡವಿಟ್ಟು ಕೆರೆ ಕಟ್ಟಿರುವ ಬಗ್ಗೆ ಸಚಿವರ ಗಮನ ಸೆಳೆದರು
ಈ ಸಂಧರ್ಭದಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ ಮಲಪ್ರಭಾ ನದಿಯಿಂದ ನೀರು ಹರಿಸಿ ಸಿದ್ಧನಭಾಂವಿ ಕೆರೆಯನ್ನು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡುವಂತೆ ಲಕ್ಷ್ಮೀ ಹೆಬ್ಬಾಳಕರ ಅವರು ಹಲವಾರು ತಿಂಗಳುಗಳಿಂದ ಒತ್ತಾಯ ಮಾಡುತ್ತಲೇ ಬಂದಿರುವದನ್ನು ಗಮನಿಸಿ ಅವರ ಕಳಕಳಿಗೆ ಸ್ಪಂದಿಸಲು ಇಲಾಖೆ ಬದ್ಧವಾಗಿದ್ದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಶಿಘ್ರದಲ್ಲಿಯೇ ಸಿದ್ಧನಭಾಮವಿ ಕೆರೆ ತುಂಬಿಸುವ ಯೋಜನೆಗೆ ಕಾಯಕಲ್ಪ ನೀಡಲಿದ್ದಾರೆ ಜೊತೆಗೆ ಈ ಕೆರೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಐದು ಕೆರೆಗಳನ್ನು ತುಂಬಿಸುವಂತೆಯೂ ಲಕ್ಷ್ಮೀ ಹೆಬ್ಬಾಳಕರ ಅವರು ಮನವಿ ಮಾಡಿಕೊಂಡಿದ್ದಾರೆ ಅದಕ್ಕೂ ಕೂಡಾ ಮಂಜೂರಾತಿ ನೀಡುತ್ತೇವೆ ಎಂದು ಎಂಬಿ ಪಾಟೀಲ ಭರವಸೆ ನೀಡಿದರು
ಸಿದ್ಧನಭಾಂವಿ ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಿರುವ ಸಚಿವ ಎಂಬಿ ಪಾಟೀಲ ,ಜಿಲ್ಲಾ ಊಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಈ ಭಾಗದ ರೈತರು ಹಾಗು ಜನ ಪ್ರತಿನಿಧಿಗಳು ಸತ್ಕರಿಸಿ ಗೌರವಿಸಿದರು ಸನ್ಮಾನ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ಕುಡಿಯುವ ನೀರಿನ ವಿಷಯದಲ್ಲಿ ರಾಜಕಾರಣ ಮಾಡುವದು ಸರಿಯಲ್ಲ ಸಿದ್ಧನಭಾಂವಿ ಕೆರೆಯನ್ನು ತುಂಬಿಸಲು ಈ ಭಾಗದ ಜನ ಹಲವಾರು ದಶಕಗಳಿಂದ ಹೊರಾಟ ಮಾಡುತ್ತಾ ಬಂದಿದ್ದಾರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಜನರ ಬೇಡಿಕೆಗೆ ಸ್ಪಂದಿಸಿದೆ ರಾಜ್ಯದಲ್ಲಿ ನಮ್ಮ ಸರ್ಕಾರವಿದೆ ಮಲಪ್ರಭಾ ನದಿಯಿಂದ ಕೆರೆಗೆ ನೀರು ಹರಿಸುವವರೆಗೂ ಸುಮ್ಮನೇ ಕುಳಿತುಕೊಳ್ಳುವದಿಲ್ಲ ಕೆರೆ ತುಂಬಿಸಿ ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವದೇ ನನ್ನ ಮುಖ್ಯU ಗುರಿಯಾಗಿದೆ ಎಂದರು
ನೀರು ಹರಿಸುವ ಭಗೀರಥನನ್ನು ಗ್ರಾಮಕ್ಕೆ ಕರೆಯಿಸಿ ಸುತ್ತಮುತ್ತಲಿನ ಗ್ರಾಮದ ರೈತರ ಕಂಗಳಲ್ಲಿ ಭರವಸೆಯ ಬೆಳಕು ಮೂಡಿಸಿದ ಲಕ್ಷ್ಮೀ ಹೆಬ್ಬಾಳಕರ ಅವರ ಜನಪರ ರೈತಪರ ಕಾಳಜಿಯನ್ನು ಈ ಭಾಗದ ಜನ ಕೊಂಡಾಡಿದರು ಅವರಿಗೆ ಜೈಕಾರ ಹಾಕಿದರು
ಜಿಲ್ಲಾ ಪಂಚಾಯತಿ ಸದಸ್ಯ ಶಂಕರಗೌಡಾ ಪಾಟೀಲ ತಾಲೂಕಾ ಪಂಚಾಯತಿ ಅದ್ಯಕ್ಷ ಶಂಕರಗೌಡಾ ಪಾಟೀಲ ಸಿಸಿ ಪಾಟೀಲ ಅಡಿವೇಶ ಇಟಗಿ ಸೇರಿದಂತೆ ಗ್ರಾಮದ ಹಿರಿಯರು ಹಾಗು ತಾಲೂಕಾ ಪಂಚಾಯತಿ ಸದಸ್ಯರು ಹಾಗು ಜಿಲ್ಲಾ ಪಂಚಾಯತಿ ಸದಸ್ಯರು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *