Breaking News
Home / Breaking News / ಸಮಸ್ಯೆಗಳ ದರ್ಶನ ,ಸಚಿವ ರಮೇಶ ಜಾರಕಿಹೊಳಿ ಅವರಿಂದ ಪರಿಹಾರದ ಚಿಂತನ

ಸಮಸ್ಯೆಗಳ ದರ್ಶನ ,ಸಚಿವ ರಮೇಶ ಜಾರಕಿಹೊಳಿ ಅವರಿಂದ ಪರಿಹಾರದ ಚಿಂತನ

ಬೆಳಗಾವಿ

ಬೆಳಗಾವಿಯ ಪ್ರವಾಸಿಮಂದಿರ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಜನತಾದರ್ಶನ. ನಡೆಯಿತು

ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಸಾರ್ವಜನಿಕರ ಅಹವಾಲು ಸ್ವೀಕಾರ. ಮಾಡುದರು
ಸ್ಮಶಾನ ಭೂಮಿ, ಬಸ್ ಸೌಲಭ್ಯ, ಕುಡಿಯುವ ನೀರು, ಕೊಳವೆ ಬಾವಿ, ರೇಷ್ಮೆ ಗೂಡು ಪ್ರೋತ್ಸಾಹ ಧನ ಹೆಚ್ಚಳ, ಅನುಕಂಪ ಆಧಾರಿತ ನೌಕರಿ, ನಿವೃತ್ತಿ ವೇತನ ಮಂಜೂರಾತಿ, ಭೂವ್ಯಾಜ್ಯಗಳು, ಟಿಸಿ ವಿಳಂಬ ಸೇರಿದಂತೆ ನೂರಾರು ಸಮಸ್ಯೆಗಳ ಬಗ್ಗೆ ಅಹವಾಲು ಆಲಿಸಿದ ಸಚಿವ ರಮೇಶ ಜಾರಕಿಹೊಳಿ. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿ ಬಗೆಹರಿಸಿದರೆ ಇನ್ನು ಕೆಲವು ಸಮಸ್ಯೆಗಳ ಪರಿಹಾರಕ್ಕಾಗಿ ಕಾಲಮಿತಿಯನ್ನು ನಿಗದಿ ಮಾಡಿದರು

ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದ ಸಚಿವರು. ಸಾರ್ವಜನಿಕರ ಅರ್ಜಿ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಎದುರಾಗುವ ತಾಂತ್ರಿಕ ಸಮಸ್ಯೆಗಳು ಹಾಗೂ ಕಾನೂನು ಸಂಬಂಧಿತ ವ್ಯಾಜ್ಯಗಳನ್ನು ಆದ್ಯತೆ ಮೇರೆಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು

ಬೆಳಿಗ್ಗೆಯಿಂದ ನಡೆದಿರುವ ಜನತಾದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ.ವ್ಯಕ್ತವಾಯಿತು

ಸಚಿವರಿಗೆ ಅಹವಾಲು ಸಲ್ಲಿಸಲು ಬೆಳಿಗ್ಗೆಯಿಂದ ಕಾದು ನಿಂತಿರುವ ನೂರಾರು ಜನರು. ಸರದಿಯಂತೆ ಸಚಿವರೆದುರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು

ಅರ್ಜಿ ಸಲ್ಲಿಸಲು ಆಗಮಿಸಿರುವ ಜನರಿಗೆ ಸ್ಥಳದಲ್ಲಿ ಮುಂಚಿತವಾಗಿಯೇ ಟೋಕನ್ ವಿತರಿಸಿರುವ ಜಿಲ್ಲಾಡಳಿತ. ಸರದಿ ಪ್ರಕಾರ ಸಾರ್ವಜನಿಕರಿಂದ  ಅಹವಾಲು ಸಲ್ಲಿಕೆ.ಮಾಡಲಾಯಿತು

ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಆಶಾ ಐಹೊಳೆ, ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಜಿಲ್ಲಾಧಿಕಾರಿ ಎನ್.ಜಯರಾಮ್, ಜಿಪಂ ಸಿಇಓ ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಅಧಿಕಾರಿಗಳು ಉಪಸ್ಥಿತಿತರಿದ್ದರು ಜೊತೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಜನತಾ ದರ್ಶಣದಲ್ಲಿ ಭಾಗಿಯಾಗಿದ್ದರು

ಪೆರೋಲ್ ಅವಧಿ ವಿಸ್ತರಿಸಲೂ ಬಂದ ಮನವಿ

ಸಚಿವರ ಜನತಾ ದರ್ಶಣದಲ್ಲಿ ಪೆರೋಲ್ ಮೇಲೆ ಬಂದಿರುವ ಕೈದಿಯೊಬ್ಬ ಪೆರೋಲ್ ಅವಧಿ ವಿಸ್ತರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದ ಘಟನೆ ನಡೆಯಿತು ರುಕ್ಮೀಣಿ ನಗರದ ನಿವಾಸಿ ಪೆರೋಲ್ ಅವಧಿ ವಿಸ್ರಿಸಲು ಸಚಿವರಿಗೆ ಮನವಿ ಸಲ್ಲಿಸಿದಾಗ ಸಚಿವರಿಗೂ ಮಜಗುರ ವಾಯಿತು

ಬೆಳಗಾವಿಯ ಅಸದಖಾನ್ ಸೊಸಾಯಿಟಿ ಕರ್ಮಕಾಂಡದ ಬಗ್ಗೆಯೂ ಸಾರ್ವಜನಿಕರು ಸಚಿವರಿಗೆ ಮನವಿ ಅರ್ಪಿಸಿದರು ಶಿಕ್ಷಣ ಇಲಾಖೆಯ ಪಿಂಚನಿ ಹಣ ಬಿಡುಗಡೆಯ ಕುರಿತು ಹಲವಾರು ದೂರುಗಳು ಬಂದವು

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *