Home / Breaking News / ಮಹಾದಾಯಿ ಸಮಸ್ಯೆ ಬೇಗ ಬಗೆಹರಿಯಲಿ – ಗೋವಾ ಸಚಿವ

ಮಹಾದಾಯಿ ಸಮಸ್ಯೆ ಬೇಗ ಬಗೆಹರಿಯಲಿ – ಗೋವಾ ಸಚಿವ

ಬೆಳಗಾವಿ- ಮನಿರ್ಮಿಸುವಂತೆ ನೀರು ಹಂಚಿಕೆ ವಿವಾದದ ಕುರಿತು ಗೋವಾ ಸಂಸದ, ಕೇಂದ್ರ ಸಚಿವ ಶ್ರೀಪಾದ ನಾಯಕ್ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಮರಸ್ಯದ ಮಾತುಗಳನ್ನಾಡಿದ್ದಾರೆ

ಮಹದಾಯಿ ಕುಡಿಯುವ ನೀರಿನ ವಿವಾದ ಬಗೆಹರಿಯಬೇಕು ಗೋವಾ-ಕರ್ನಾಟಕ ನೇರೆ ಹೊರೆ ರಾಜ್ಯದವರು ನಾವು ಅಕ್ಕಪಕ್ಕ ರಾಜ್ಯದವರಾಗಿ ಒಬ್ಬರಿಗೊಬ್ಬರು ಸಹಾಯ ಆಗಬೇಕು ಮಹದಾಯಿ ವಿವಾದ ಇಷ್ಟೊಂದು ಮುಂದೆ ಹೋಗಬಾರದಿತ್ತು ಎಂದು ಸಚಿವರು ಭೇಸರ ವ್ಯೆಕ್ತಪಡಿಸಿದರು

ನಮಗೆ ಎದುರಾಗುವ ಸಂಕಷ್ಟುಗಳನ್ನ ಒಟ್ಟಾಗಿ ಬಗೆ ಹರಿಸಿಕೊಳ್ಳಬೇಕು ಮಹದಾಯಿ ವಿವಾದ ಸೌಹಾರ್ದಯುತವಾಗಿ ಇತ್ಯರ್ಥವಾಗಬೇಕುನ್ಯಾಯಾಧೀಕರದ ಒಳೆಗೆ ಅಥವಾ ಹೊರಗೆ ವಿವಾದ ಇತ್ಯರ್ಥವಾಗಬೇಕು ಕುಡಿಯುವ ನೀರಿನ ವಿಚಾರ ಮಾನವೀಯತೆ ಆಧಾರದ ಮೇಲೆ ಬಗೆಹರಿಯಬೇಕು ಎಂದ ಕೇಂದ್ರ ಸಚಿವ ಶ್ರೀಪಾದ ನಾಯಕ್ ಹೇಳಿದರು

ಸಂಸದ ಸುರೇಶ ಅಂಗಡಿ ಮಾತನಾಡಿ
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರುವಂತೆ ಕೆಲಸ ಮಾಡುಲು ಅಮೀತ್ ಶಾ ಹೇಳಿದ್ದಾರೆ ಎಲ್ಲರೂ ಜವಾಬ್ದಾರಿಯಿಂದ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅಮೀತ ಷಾ ತಾಕೀತು ಮಾಡಿದ್ದಾರೆ

ಕಾಂಗ್ರೆಸನಿಂದ ಜನರಿಗೆ ನ್ಯಾಯ ಸಿಕ್ಕಿಲ್ಲ ಶಾಸಕರಿಗೆ ಮತ್ತು ಸಂಸದರಿಗೂ ಎರಡು ಮತಕ್ಷೇತ್ರದ ಜವಾಬ್ದಾರಿ ನೀಡಿದ್ದಾರೆ ಎಂದು ಅಂಗಡಿ ತಿಳಿಸಿದರು

ಮಹದಾಯಿ ಕುಡಿಯುವ ನೀರಿನ ವಿವಾದ ಕಾಂಗ್ರೆಸ್ ಬ್ರಿಟಿಷರಂತೆ ಒಡೆದಾಳುವ ನೀತಿ ಅನುಸರಿಸುತ್ತಿದೆ ಕಾಂಗ್ರೆಸ್ ಡಿವೈಡ್ ಆಂಡ್ ರೂಲ್ ಮಾಡುತ್ತಿದೆ ಗೋವಾ ಕರ್ನಾಟಕ ಬಡಿದಾಡಿಕೊಳ್ಳಲುದೇಶ ಸಮಗ್ರ ಎಂಬ ಭಾವನೆ ಕಾಂಗ್ರೆಸಗೆ ಇಲ್ಲ ಎಂದು ಸುರೇಶ ಅಂಗಡಿ ಆರೋಪಿಸಿದರು

ಕಾಂಗ್ರೆಸನ ಸೋನಿಯಾ ಗಾಂಧಿ ಕರ್ನಾಟಕಕ್ಕೆ ನೀರು ಕೊಡಬೇಡಿ ಅಂತಾ ಹೇಳಿದ್ದಾರೆ ಯಾವತರಹ ಮಹದಾಯಿ ವಿವಾದ ಬಗೆ ಹರಿಯುತ್ತದೆ ಗೋವಾ ಕರ್ನಾಟಕದಲ್ಲಿ ಅಶಾಂತಿ ನಿರ್ಮಿಸುವಂತೆ ಕಾಂಗ್ರೆಸ್ ಮಾಡಿದೆ ಎಂದು ಸಂಸದ ಸುರೇಶ ಅಂಗಡಿ ಕಿಡಿಕಾರಿದ್ದಾರೆ.

About BGAdmin

Check Also

ತಿಲ್ಲಾರಿ ಡ್ಯಾಂ ನಲ್ಲಿ ಬೆಳಗಾವಿಯ ಕಾಲೇಜು ಹುಡಗಿ ನೀರು ಪಾಲು

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಕಾಲೇಜುವೊಂದರ ಸುಮಾರು ಹದಿನೈದು ಜನ ಕಾಲೇಜು ಹುಡುಗರು,ಮೂವರು ಜನ ಹುಡುಗರು ತಿಲ್ಲಾರಿ ಡ್ಯಾಂ ಗೆ ಪಿಕನಿಕ್ …

Leave a Reply

Your email address will not be published. Required fields are marked *

WP Facebook Auto Publish Powered By : XYZScripts.com