Breaking News
Home / Breaking News / ಕೋಲ್ಡ ಸ್ಟೋರೇಜ್ ಹೆಸರಿನಲ್ಲಿ ಆಕ್ರಮ ದಂಧೆ – ಸಂಸದ ಅಂಗಡಿ ಆರೋಪ

ಕೋಲ್ಡ ಸ್ಟೋರೇಜ್ ಹೆಸರಿನಲ್ಲಿ ಆಕ್ರಮ ದಂಧೆ – ಸಂಸದ ಅಂಗಡಿ ಆರೋಪ

ಬೆಳಗಾವಿ: ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಅವರ ಒತ್ತಡಕ್ಕೆ ಮಣಿದು ಆಟೋನಗರದಲ್ಲಿನ ಅನಧಿಕೃತ ಕಸಾಯಿಖಾನೆಗಳಿಗೆ ರಕ್ಷಣೆ ನೀಡಿರುವ ಪೊಲೀಸರು ಕಮೀಷನ್ ದಂಧೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಸುರೇಶ ಅಂಗಡಿ ಟೀಕಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅನಧಿಕೃತ ಕಸಾಯಿಖಾನೆಗಳು ಅಕ್ರಮವಾಗಿ ನುಸುಳಿದ ಬಾಂಗ್ಲಾದೇಶಿಯರಿಗೆ ಸುರಕ್ಷಿತ ತಾಣಗಳಾಗಿವೆ. ಕೋಲ್ಡ್ ಸ್ಟೋರೆಜ್ ಹೆಸರಿನಲ್ಲಿ ಅನಧಿಕೃತವಾಗಿ ಕಸಾಯಿಖಾನೆಗಳನ್ನು ನಡೆಸಲಾಗುತ್ತಿದೆ. ಈ ಕುರಿತು ದೂರು ನೀಡಲು ಹೋದರೆ, ಪೊಲೀಸರು ನಿರಾಕರಿಸುತ್ತಾರೆ. ಅನಧಿಕೃತ ಕಸಾಯಿಖಾನೆಗಳ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್, ಅವರ ಸಹೋದರ ರಾಜು ಸೇಠ್ ಮತ್ತು ಪುತ್ರ ಫೈಜಾನ್ ಅವರ ಒತ್ತಡಕ್ಕೆ ಮಣಿದು, ಅವರ ಅಣತಿಯಂತೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಅಕ್ರಮವಾಗಿ ಕಸಾಯಿಖಾನೆಗಳಲ್ಲಿ ಗೋಹತ್ಯೆ ಮಾಡಲಾಗುತ್ತಿದೆ. ದೇಶದ್ರೋಹಿ ಕೆಲಸ ನಡೆಯುತ್ತಿದೆ. ಅನಧಿಕೃತ ಕಸಾಯಿಖಾನೆಗಳನ್ನು ಪರಿಶೀಲಿಸಲು ಪೊಲೀಸರು ನಿರಾಕರಿಸುತ್ತಾರೆ. ಕೋಲ್ಡ್ ಸ್ಟೋರೇಜ್ ಹೆಸರಿನಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಕಸಾಯಿಖಾನೆಗಳಲ್ಲಿರುವ ಕಾರ್ಮಿಕರು ಬಹುತೇಕರು ಬಾಂಗ್ಲಾದೇಶಿಗರೇ ಆಗಿದ್ದಾರೆ. ಒಂದೇ ಘಟಕದಲ್ಲೇ ಸುಮಾರು ೪೦ ರಿಂದ ೭೦ ಬಾಂಗ್ಲಾದೇಶಿಗರು ಇದ್ದಾರೆ. ನಗರದಲ್ಲಿ ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ಪೊಲೀಸರಿಗೆ ಗೊತ್ತೆ ಇಲ್ಲ. ಪೊಲೀಸರು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ.  ಕಸಾಯಿಖಾನೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡರೂ ಪೊಲೀಸರು ಯಾರೊಬ್ಬರನ್ನು ಬಂಧಿಸಿಲ್ಲ. ಕಸಾಯಿಖಾನೆಗಳ ಮಾಲೀಕರು ಯಾರು ಎಂಬುದನ್ನು ಬಹಿರಂಗ ಪಡಿಸುತ್ತಿಲ್ಲ. ಪೊಲೀಸ್ ವ್ಯವಸ್ಥೆಯೇ ಬೆಳಗಾವಿಯಲ್ಲಿ ಸತ್ತುಹೋಗಿದೆ. ಅನಧಿಕೃತ ಕಸಾಯಿಖಾನೆಗಳಿಂದ ನಿತ್ಯ ಸುಮಾರು ೧ ಸಾವಿರ ಟನ್ ಗೋಮಾಂಸವನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ. ಅನಧಿಕೃತ ಕಸಾಯಿಖಾನೆಗಳಿಗೆ ಯಾವುದೇ ಬೋರ್ಡ್‌ಗಳಿಲ್ಲ. ಸ್ಥಳೀಯ ಶಾಸಕರ ಕೈಗೊಂಬೆಯಾಗಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ

ರಾಜು ಸೇಠ್‌ರಿಂದ ೭೫ ಲಕ್ಷ ರೂ ಆಮೀಷ

ಅನಧಿಕೃತ ಕಸಾಯಿಖಾನೆಗಳ ವಿರುದ್ದ ಹೋರಾಟ ಮಾಡಿದ ನನಗೆ ಶಾಸಕ ಫಿರೋಜ್ ಸೇಠ್ ಅವರ ಸಹೋದರ ರಾಜು ಸೇಠ್ ಅವರು ೭೫ ಲಕ್ಷ ರೂಪಾಯಿ ಹಣದ ಆಮೀಷ ಒಡ್ಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ, ನ್ಯಾಯವಾದಿ ಹರ್ಷವರ್ಧನ ಪಾಟೀಲ ಆರೋಪಿಸಿದರು. ನನಗೆ ಜೀವ ಬೆದರಿಕೆಯೂ ಇದೆ. ಅನಧಿಕೃತ ಕಸಾಯಿಖಾನೆಗಳ ವಿರುದ್ಧ ನಾನು ಹೋರಾಟ ಮಾಡುತ್ತ ಬಂದಿದ್ದೇನೆ. ಆದರೆ, ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ಕಸಾಯಿಖಾನೆಗಳ ಮಾಲೀಕರು ಯಾರು ಎಂಬುದನ್ನು ಮರೆಮಾಚಿದ್ದಾರೆ. ಅಲ್ಲದೇ, ಯಾರೊಬ್ಬರನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *