Breaking News
Home / Breaking News / ಮೂಡಲಗಿ ಬಂದ್….. ಬೀದಿಗಿಳಿದ ಜನ, ಟಯರ್ ಗೆ ಬೆಂಕಿ ಸರ್ಕಾರದ ವಿರುದ್ಧ ಆಕ್ರೋಶ

ಮೂಡಲಗಿ ಬಂದ್….. ಬೀದಿಗಿಳಿದ ಜನ, ಟಯರ್ ಗೆ ಬೆಂಕಿ ಸರ್ಕಾರದ ವಿರುದ್ಧ ಆಕ್ರೋಶ

ಬೆಳಗಾವಿ- ಗೋಕಾಕ ತಾಲೂಕಿನ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಿ ಅಧಿಕೃತವಾಗಿ ಘೋಷಣೆ ಮಾಡಿದ್ದರು ಏಕಾಏಕಿ ಸರ್ಕಾರ ಮೂಡಲಗಿ ತಾಲೂಕು ರಚನೆ ಕೈಬಿಟ್ಟಿರುವುದರಿಂದ ಆಕ್ರೋಶಗೊಂಡ ನಾಗರೀಕರು ಇಂದು ಬೀದಿಗಿಳಿದು ಪ್ರತಿಭಟನೆ  ನಡೆಸುತ್ತಿದ್ದು, ಮೂಡಲಗಿ ಪಟ್ಟಣದಲ್ಲಿ ತ್ಚೇಶಮಯ ವಾತಾವರಣ ನಿರ್ಮಾಣಗೊಂಡಿದೆ.
ರಾಜ್ಯ ಸರ್ಕಾರ ಮೂಡಲಗಿ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ರಚಿಸಿದ್ದು, ಗೆಜೆಟ್ ಕೂಡ ಹೊರಡಿಸಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಹೊಸ ತಾಲೂಕುಗಳ ರಚನೆ ಪಟ್ಟಿಯಲ್ಲಿ ಮೂಡಲಗಿಯನ್ನು ಕೈ ಬಿಟ್ಟಿದ್ದರಿಂದ ನಿಯೋಜಿತ ಮೂಡಲಗಿ ತಾಲೂಕಾ  ಚಾಲನಾ ಸಮಿತಿ ಮತ್ತು ವಿವಿಧ ಸಂಘಟನಗಳು ಬೀದಿಗಿಳಿದು ಮೂಡಲಗಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಂದ ಟೈರ್ ಗಳಿಗೆ ಬೆಂಕಿ ಹಚ್ಚಿ ಉಗ್ರ ಹೋರಾಟ ನಡೆದಿದ್ದು, ಪಟ್ಟಣದ ಎಲ್ಲ ಅಂಗಡಿ ಮುಗ್ಗಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷದ ಬಜೆಟ್ ನಲ್ಲಿ ತಾಲುಕಾ ರಚನೆ ಪಟ್ಟಿಯಲ್ಲಿ ಮೂಡಲಗಿ ಹೆಸರು ಇತ್ತು. ಹಾಗಿದ್ದರು ಸರ್ಕಾರದ ಅಂತಿಮ ಅಧಿಸೂಚನೆಯಲ್ಲಿ  ದಿಢೀರಣೆ ಮೂಡಲಗಿಯನ್ನು ಕೈ ಬಿಟ್ಟಿರುವುದಕ್ಕೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಗೋಕಾಕ ತಾಲೂಕಿನಲ್ಲಿ ಅತ್ಯಂತ ದೊಡ್ಡ ಪಟ್ಟಣವಾಗಿರುವ ಮೂಡಲಗಿಯನ್ನು ತಾಲೂಕು ಕೇಂದ್ರವಾಗಿ ರಚಿಸಲು ಸರ್ಕಾರವೇ ನೇಮಕ ಮಾಡಿದ ಹುಂಡೆಕರ್, ವಾಸುದೇವ ಮತ್ತು ಗದ್ದಿಗೌಡರ್ ವರದಿಗಳು ಶಿಪ್ಪಾರಸ್ಸು ಮಾಡಿದ್ದವು.

 

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *