Breaking News

LOCAL NEWS

ಎಂಇಎಸ್ ಪುಂಡನ ವಿರುದ್ಧ ಬೆಳಗಾವಿಯಲ್ಲಿ ಎಫ್ಐಆರ್ ದಾಖಲು.

ಬೆಳಗಾವಿ-ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಬೆಳಗಾವಿಯಲ್ಲಿ ಎಫ್ಐಆರ್ ದಾಖಲಾಗಿದೆ.ಕರ್ನಾಟಕ ಗಡಿ ಭಾಗ ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ವಿವಾದಿತ ನಕ್ಷೆ ತಯಾರಿಸಿ ,ಈ ನಕ್ಷೆಯಲ್ಲಿ ಬೆಳಗಾವಿ,ಬೀದರ್ ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಿಸಿದ ನಕ್ಷೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಈಗ ದೂರು ದಾಖಲು ಆಗಿದೆ. ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಶುಭಂ ವಿರುದ್ಧ ಎಫ್ಐಆರ್ ದಾಖಲಾಗಿದ್ದು ,ಕರವೇ ಕಾರ್ಯಕರ್ತ ವಿನಾಯಕ ಭೋವಿ ನೀಡಿದ ದೂರಿನ …

Read More »

ಇಸ್ಪೀಟ್ ಆಡಿ…ಸಾಲ ಮಾಡಿ…ಆತ್ಮಹತ್ಯೆ ಮಾಡಿಕೊಂಡ ಯುವಕ…

ಬೆಳಗಾವಿ- ಪಕ್ಕದ ರಾಜ್ಯ ಗೋವಾದ ಕ್ಯಾಸೀನೋ,ಜೊತೆಗೆ ಪಕ್ಕದ ಮಹಾರಾಷ್ಟ್ರದ ಶಿನ್ನೋಳಿಯ ಜೂಜಾಟದ ಅಡ್ಡೆ,ಬೆಳಗಾವಿ ಯುವಕರನ್ನು ಬಲಿ ಪಡೆಯುತ್ತಿದ್ದೆ.ಕ್ಯಾಸೀನೋ ಮತ್ತು ಜೂಜಾಟದ ಚಟಕ್ಕೆ ಬೆಳಗಾವಿಯ ಯುವಕರೇ ಇದಕ್ಕೆ ಬಲಿಯಾಗುತ್ತಿದ್ದು ಯುವಕನೊಬ್ಬ ಇಸ್ಪೀಟ್ ಆಡಿ,ಸಾಲ ಮಾಡಿ ಇವತ್ತು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯ ಬಸವನ ಕುಡಚಿ ಬಡಾವಣೆಯಲ್ಲಿ ನಡೆದಿದೆ‌. ಕಲ್ಮೇಶ್ವರ ಪಾಂಡುರಂಗ ಬೆಡಕಾ 25 ಶಿವಾಜಿ ಗಲ್ಲಿಬಸವನ ಕುಡಚಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದು ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲ್ಲೇಶ್ವರ ಪಾಂಡುರಂಗ …

Read More »

ತರಾತುರಿಯಲ್ಲಿ ಹೊಸಬರ ಆಗಮನ, ಹಳಬರ ನಿರ್ಗಮನ….!!!

*ಬೆಳಗಾವಿ ಜಿಲ್ಲಾಧಿಕಾರಿ ವರ್ಗಾವಣೆ : ತರಾತುರಿಯಲ್ಲಿ ಹೊಸಬರ ಆಗಮನ, ಹಳಬರ ನಿರ್ಗಮನ* ಬೆಳಗಾವಿ,05: ಬೆಳಗಾವಿ ಇತಿಹಾಸದಲ್ಲಿಯೇ ಜಿಲ್ಲಾಧಿಕಾರಿಗಳ ವರ್ಗಾವಣೆ ಇಷ್ಟೊಂದು ತೀವ್ರವಾಗಿ ನಡೆಯಲಾರದ್ದು ಇಂದು ನಡೆದಿದೆ. ಮಧ್ಯಾಹ್ನದ ನಂತರ ಇಡೀ ರಾಜ್ಯ ಮಟ್ಟದಲ್ಲಿ ನಡೆದ ಬೆಳವಣಿಗೆ ಸಂಜೆ 5.30 ರ ಸುಮಾರಿಗೆ ಹೊಸ ಜಿಲ್ಲಾಧಿಕಾರಿ ಪದಗ್ರಹಣ ಮಾಡುವುದರ ಮೂಲಕ ಆಶ್ಚರ್ಯ ಮೂಡಿಸಿ, ಎಲ್ಲರೂ ಹುಬ್ಬೆರಿಸುವಂತಾಗಿದೆ. ಹೌದು, ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ನಿತೇಶ ಪಾಟೀಲ ಅವರು ಬೆಳಗಾವಿಯ ನೂತನ ಜಿಲ್ಲಾಧಿಕಾರಿಯಾಗಿ ಇಂದು ಅಧಿಕಾರ …

Read More »

ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರ ಸ್ವೀಕಾರ

ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರ ಸ್ವೀಕಾರ ಬೆಳಗಾವಿ, ಮೇ 5(ಕರ್ನಾಟಕ ವಾರ್ತೆ): ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗುರುವಾರ(ಮೇ 5) ಸಂಜೆ ಅಧಿಕಾರವನ್ನು ವಹಿಸಿಕೊಂಡರು. ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರವನ್ನು ಹಸ್ತಾಂತರಿಸಿ ಶುಭ ಕೋರಿದರು. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನವರಾದ ನಿತೇಶ್ ಪಾಟೀಲ ಅವರು ಇದಕ್ಕೂ ಮುಂಚೆ ಧಾರವಾಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಉಪ …

Read More »

ಡಿಸಿ ಹಿರೇಮಠ ವರ್ಗಾವಣೆ ,ನಿತೀಶ್ ಪಾಟೀಲ ಬೆಳಗಾವಿ ಡಿಸಿ

ಡಿಸಿ ಹಿರೇಮಠ ವರ್ಗಾವಣೆ ,ನಿತೀಶ್ ಪಾಟೀಲ ಬೆಳಗಾವಿ ಡಿಸಿ ಬೆಳಗಾವಿ- ಕೋವೀಡ್ ಸಂಧರ್ಭದಲ್ಲಿ ಜೀವದ ಹಂಗು ತೊರೆದು ಹಗಲು ರಾತ್ರಿ ಜನಸೇವೆ ಮಾಡಿ,ನೆರೆಯಲ್ಲಿ ಸಂತ್ರಸ್ತರಿಗೆ ಆಸರೆಯಾಗಿ,ಅಪಾರ ಜನಮೆಚ್ಚುಗೆ ಗಳಿಸಿದ್ದ ಬೆಳಗಾವಿ ಡಿಸಿ ಹಿರೇಮಠ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಿರೇಮಠ ಅವರನ್ನು ಬೆಂಗಳೂರು ಲ್ಯಾಂಡ್ ಆರ್ಮಿ ಎಂ.ಡಿ ಯನ್ನಾಗಿ ವರ್ಗಾಯಿಸಿದ್ದು ನಿತೀಶ್ ಪಾಟೀಲ ಅವರನ್ನು ಬೆಳಗಾವಿ ಜಿಕ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿದೆ ನಿತೀಶ್ ಪಾಟೀಲ ಅವರು ಹುಬ್ಬಳ್ಳಿಯಿಂದ ಬೆಳಗಾವಿಗೆ …

Read More »

ಧ್ವನಿ ವರ್ದಕಗಳಲ್ಲಿ ಆಜಾನ್ ಬಂದ್, ಮಾಡದಿದ್ರೆ ಅದಕ್ಕೆ ಪ್ರತಿಯಾಗಿ ಒಂದು ಸಾವಿರ ದೇವಸ್ಥಾನಗಳಲ್ಲಿ ಭಜನೆ

ಬೆಳಗಾವಿ: ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿನ ಧ್ವನಿವರ್ಧಕ ತೆರವು ಮಾಡಬೇಕು. ಇಲ್ಲವಾದರೆ ಮೇ 9 ರಂದು ರಾಜ್ಯದ 1 ಸಾವಿರ ದೇವಸ್ಥಾನಗಳಲ್ಲಿ ಭಜನೆ, ಸುಪ್ರಭಾತ ಪಠಣ ಮಾಡಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಜಾನ್ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದೇವೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೂ ಮನವಿ ನೀಡಿದ್ದೇವೆ. ಆದರೆ ಶಬ್ದ ಮಾತ್ರ ಇನ್ನೂ ನಿಂತಿಲ್ಲ. …

Read More »

ಐತಿಹಾಸಿಕ ಬೆಳಗಾವಿ ಜಿಲ್ಲೆಗೆ 6 ಕ್ರೀಡಾ ಅಕಾಡೆಮಿಗಳು ಮಂಜೂರು ಮಾಡಿದ ಪ್ರಧಾನಿ ಮೋದಿ…

ಬೆಳಗಾವಿ ಜಿಲ್ಲೆಗೆ 6 ಕ್ರೀಡಾ ಅಕಾಡೆಮಿಗಳು ಮಂಜೂರು ಬೆಳಗಾವಿ ಜಿಲ್ಲೆ ಈಗ ರಾಚ್ಟ್ರದ ಗಮನ ಸೆಳೆದಿದೆ,ಐತಿಹಾಸಿಕ ಈ ಜಿಲ್ಲೆಗೆ ಆರು ಸ್ಪೋರ್ಟ್ಸ್ ಅಕ್ಯಾಡಮಿಗಳು ಮಂಜೂರಾಗಿದ್ದು, ಇನ್ಮುಂದೆ ಇಲ್ಲೂ ಜಾಗತಿಕ ಮಟ್ಟದ ಕ್ರೀಡಾ ತರಬೇತಿ ಸಿಗಿದೆ ಬೆಳಗಾವಿ: ಐತಿಹಾಸಿಕ ಜಿಲ್ಲೆ ಬೆಳಗಾವಿಗೆ ಕೇಂದ್ರ ಸರ್ಕಾರ ಆರು ಕ್ರೀಡಾ ಅಕಾಡೆಮಿಗಳನ್ನು ಮಂಜೂರು ಮಾಡಿದ್ದು, ಈ ಭಾಗದ ಕ್ರೀಡಾಸಕ್ತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ . ಕೇಂದ್ರ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ …

Read More »

ಅಭಯ ಪಾಟೀಲರಿಗೆ ಸಿಎಂ ಅವರಿಂದ ಬೆಂಗಳೂರು ಬುಲಾವ್….!!!

ಅಭಯ ಪಾಟೀಲರಿಗೆ ಸಿಎಂ ಅವರಿಂದ ಬೆಂಗಳೂರು ಬುಲಾವ್….!!! ಬೆಳಗಾವಿ- ರಾಜ್ಯದಲ್ಲಿ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ನಡೆಯುತ್ತದೆ ಎಂದು ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲಿಯೇ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ ಮುಖ್ಯಮಂತ್ರಿಗಳಿಂದ ಬುಲಾವ್ ಬಂದಿದೆ. ಶಾಸಕ ಅಭಯ ಪಾಟೀಲರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಸಂಜೆ ಫೋನ್ ಮಾಡಿ ತಕ್ಷಣ ಬೆಂಗಳೂರಿಗೆ ಹೊರಡುವಂತೆ ಸೂಚಿಸಿದ ಹೆನ್ನಲೆಯಲ್ಲಿ ಅಭಯ ಪಾಟೀಲ ನಿನ್ನೆ ರಾತ್ರಿಯೇ …

Read More »

ಸ್ವೀಮೀಂಗ್ ಫೂಲ್ ನಲ್ಲಿ ಡಾಯ್ ಮಾಡಲು ಹೋಗಿ ಯುವಕನ ಸಾವು…

ಬೆಳಗಾವಿ: ಈಜುಕೊಳಕ್ಕೆ ಜಿಗಿಯುವಾಗ ತಲೆಗೆ ಬಲವಾದ ಪೆಟ್ಟು ಬಿದ್ದು ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ. ಜಾಧವ ನಗರದಲ್ಲಿ ಸೋಮವಾರ ಈ ಘಟನೆ ಸಂಭವಿಸಿದೆ.ಇಲ್ಲಿನ ಲಕ್ಷ್ಮಿಟೆಕ್ ನ ಮಿಲಿಟರಿ ಕ್ವಾರ್ಟರ್ಸ್ ನಲ್ಲಿ ವಾಸವಾಗಿದ್ದ ಗುರುದೇವಸಿಂಗ್ ಗುರುಪ್ರೀತಸಿಂಗ್ ಮೃತಪಟ್ಟ ಯುವಕ. ಈತ ಪಿಯು ವ್ಯಾಸಂಗ ಮಾಡುತ್ತಿದ್ದ. ಹೆಚ್ಚು ಆಳವಿರುವ ಕಡೆ ಜಿಗಿಯಬೇಕಿದ್ದ ಈತ ಕಡಿಮೆ ಆಳವಿರುವಲ್ಲಿ ಜಿಗಿದಿದ್ದರಿಂದ ಅವಘಡ ಸಂಭವಿಸಿದೆ. ನಿತ್ಯವೂ ಈತ ಇಲ್ಲಿಯೇ ಪ್ರ್ಯಾಕ್ಟೀಸ್ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.ಎಪಿಎಂಸಿ ಪೊಲೀಸ್ …

Read More »

ಶ್ರೀಮತಿಯ ಜೊತೆ ಆಶ್ರಮದಲ್ಲಿ ಸಮಯ ಕಳೆದ್ರು ಡಿಸಿ ಸಾಹೇಬ್ರು…

ಸನ್ಮಾನದ ಶಾಲುಗಳನ್ನು ವೃದ್ಧಾಶ್ರಮಕ್ಕೆ ನೀಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೆಳಗಾವಿ, ಮೇ 2(ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ವಿವಿಧ ಸಂದರ್ಭಗಳಲ್ಲಿ ತಮಗೆ ಸನ್ಮಾನದ ರೂಪದಲ್ಲಿ ಬಂದಿದ್ದ ನೂರಾರು ಶಾಲುಗಳನ್ನು ವೃದ್ಧಾಶ್ರಮಕ್ಕೆ ನೀಡುವುದರ ಜತೆಗೆ ಆಶ್ರಮದ ಹಿರಿಯ ಜೀವಗಳ ಜತೆಗೆ ಊಟ ಮಾಡಿ ಕೆಲಹೊತ್ತು ಸಂಭ್ರಮದಿಂದ ಕಳೆದರು. ನಗರದ ಬಮನವಾಡಿಯಲ್ಲಿ ಸಮಾಜ ಸೇವಕ ಹಾಗೂ ಮಾಜಿ ಮಹಾಪೌರ ವಿಜಯ್ ಮೋರೆ ಅವರು ನಡೆಸುತ್ತಿರುವ ಶಾಂತಾಯಿ ವೃದ್ಧಾಶ್ರಕ್ಕೆ ಸೋಮವಾರ (ಮೇ 2) ಭೇಟಿ …

Read More »

ಜಿಲ್ಲಾ ಮಾಡ್ರಿ ಎಂದು, ಮಿನಿಸ್ಟರ್ ಭೇಟಿಯಾದ ಹೊಂಗಲ್ ಮಂದಿ…!!

ಮತ್ತೆ ಮೊಳಕೆಯೊಡೆದ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಬೆಳಗಾವಿ-ಬೈಲಹೊಂಗಲ ಜಿಲ್ಲೆಗೆ ಆಗ್ರಹಿಸಿ ಸಚಿವ ಉಮೇಶ ಕತ್ತಿ ಭೇಟಿಯಾದ ಬೈಲಹೊಂಗಲ ಸರ್ವಪಕ್ಷ ನಿಯೋಗ ಬೆಳಗಾವಿ: ಈ ಹಿಂದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಬೇಡಿಕೆ ಇಟ್ಟಿದ್ದ ಅರಣ್ಯ ಮತ್ತು ಆಹಾರ ನಾಗರಿಕ ಸರಬರಾಜು ಖಾತೆ ಸಚಿವ ಉಮೇಶ ಕತ್ತಿ ಈಗ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರತೊಡಗಿದ್ದಾರೆ. ಈ ಭಾಗದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ, ಜಿಲ್ಲಾ ವಿಭಜನೆ …

Read More »

ಬೆಳಗಾವಿಯಲ್ಲಿ ಮತ್ತೆ ಎಂಈಎಸ್ ಪುಂಡಾಟಿಕೆ,ಸೋಶಿಯಲ್ ಮಿಡಿಯಾದಲ್ಲಿ ಕ್ಯಾತೆ….!!

ಬೆಳಗಾವಿ-ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆ ಬೆನ್ನಲ್ಲೆ ಇತ್ತ ಬೆಳಗಾವಿಯಲ್ಲಿ ಎಂಇಎಸ್ ಕಿರಿಕ್ ಮತ್ತೆ ಶುರುವಾಗಿದೆ, ಮಹಾರಾಷ್ಟ್ರದಲ್ಲಿ ಅಜೀತ್ ಪವಾರ ಹೇಳಿಕೆ ನೀಡಿದಂತೆಯೇ ಬೆಳಗಾವಿಯ ಎಂಈಎಸ್ ನಾಯಕರು ಹೇಳಿಕೆ ನೀಡುವ ಮೂಲಕ ಗಡಿಯಲ್ಲಿ ಅಶಾಂತಿಯ ವಾತಾವರಣ ನಿರ್ಮಿಸುವ ಪ್ರಯತ್ನದಲ್ಲಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ ಶುರುವಾಗಿದ್ದು ದೇಶದ್ರೋಹ ಕೇಸ್ ಕೈ ಬಿಟ್ಟ ಬೆನ್ನಲ್ಲೇ ಪುಂಡಾಟಿಕೆ ಆರಂಭವಾಗಿದೆ.ನಾಡದ್ರೋಹಿ ಎಂಇಎಸ್ ಮುಖಂಡನಿಂದ ಭಾಷಾ ಸಾಮರಸ್ಯ ಕದಡುವ ಹುನ್ನಾರ ನಡೆಸಿದ್ದು ವಿವಾದಾತ್ಮಕ …

Read More »

ಬೆಳಗಾವಿ ರೇಲ್ವೆ ನಿಲ್ಧಾಣಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರು ನಾಮಕರಣ ಮಾಡಿ…

ಬೆಳಗಾವಿ ರೇಲ್ವೆ ನಿಲ್ಧಾಣಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರು ನಾಮಕರಣ ಮಾಡಿ… ಬೆಳಗಾವಿ- ಇಂದು ಬೆಳಗಾವಿ ಮಹಾನಗರದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ ನಿಮಿತ್ಯ ಬೈಕ್ ಜಾಗೃತಿ ರ್ಯಾಲಿ ನಡೆಯಿತು,ನೂರಾರು ಜನ ಸಮಾಜದ ಯುವಕರು ಭಾಗವಹಿಸಿದ್ದರು. ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ಬೈಕ್ ರ್ಯಾಲಿಗೆ ಕಾರಂಜಿಮಠ,ಹಾಗೂ ಹುಕ್ಕೇರಿ ಹಿರೇಮಠದ ಶ್ರೀಗಳು ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ ,ಬೆಳಗಾವಿಯಲ್ಲಿ ಅದ್ದೂರಿಯಾಗಿ …

Read More »

ಬೆಳಗಾವಿಯಲ್ಲಿ ಹತ್ತರ ಕ್ವಾಯಿನ್ ಗೆ ಕಿಮ್ಮತ್ತಿಲ್ಲ,ಇದನ್ನು ಯಾರೂ ತಗೋಳುದಿಲ್ಲಾ…!!!

ಬೆಳಗಾವಿ- ಜನ ಕೆಲವೊಮ್ಮೆ ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ,ಅವರ ನಡತೆ ನೋಡಿದ್ರೆ ನಗಬೇಕೋ,ಅಳಬೇಕೋ ಅನಿಸುತ್ತದೆ.ಬೆಳಗಾವಿಯಲ್ಲಿ ಹತ್ತರ ಕ್ವಾಯಿನ್ ಹಿಡಿದುಕೊಂಡು ಗಲ್ಲಿ,ಗಲ್ಲಿ,ಅಲೆದಾಡಿದೆ,ಅಂಗಡಿಯಿಂದ ಮೊತ್ತೊಂದು ಅಂಗಡಿಗೆ ಅಲೆದಾಡಿದ್ರೂ,ಇಲ್ಲಾ ಇದು ನಡೆಯೋದಿಲ್ಲಾ,ಹತ್ತರ ನೋಟು ಕೊಡಿ ಅಂತಾರೆ,ಬೆಳಗಾವಿಯ ವ್ಯಾಪಾರಿಗಳು ಯಾಕಂದ್ರೆ ಹತ್ತರ ಕ್ವಾಯಿನ್ ಗಳನ್ನು ಗಿರಾಕಿಗಳು ತಗೋಳುದಿಲ್ಲಾ ಅಂತಾ,ಅಂಗಡಿಕಾರರು ತಗೋಳುದಿಲ್ಲ,ಹೀಗಾಗಿ ಸರ್ಕಾರದ ಅಧಿಕೃತ ನಾಣ್ಯಕ್ಕೆ ಈಗ ಬೆಳಗಾವಿಯಲ್ಲಿ ಬೆಲೆ ಇಲ್ಲದಂತಾಗಿದೆ.ಈಗಿನ ಕಾಲದಲ್ಲಿ ದುಡ್ಡಿಗೆ ಎಲ್ಲಿಲ್ಲದ ಬೆಲೆ. ಆದರೆ, ರಿಜರ್ವ್ ಬ್ಯಾಂಕ್‌ ಆಫ್‌ ಇಂಡಿಯಾದಿಂದಲೇ ಮಾನ್ಯತೆ ಇದ್ದರೂ, ಬೆಳಗಾವಿ ಮಾರುಕಟ್ಟೆಯಲ್ಲಿ …

Read More »

ಬೆಳಗಾವಿ ವಿಟಿಯು ,ಯುನಿವರ್ಸಿಟಿಯನ್ನು ಐಐಟಿ ಮಾದರಿಯಲ್ಲಿ ಸುಧಾರಣೆ ಮಾಡುವೆ.

*ಸಮಗ್ರ ಸುಧಾರಣೆ ಮೂಲಕ ಐಐಟಿ ದರ್ಜೆಗೆ ವಿಟಿಯು ಸುಧಾರಣೆ: ಅಶ್ವತ್ಥನಾರಾಯಣ* ಬೆಳಗಾವಿ: ಜಾಗತಿಕ ಮಟ್ಟದ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿ, ಜ್ಞಾನಾಧಾರಿತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ನೀತಿ ಮತ್ತು ಆಡಳಿತ ಎರಡನ್ನೂ ಸಮಗ್ರವಾಗಿ ಬದಲಾಯಿಸಬೇಕಾದ ಅಗತ್ಯವಿದೆ. ಈ ಮೂಲಕ ವಿ.ವಿ.ಯನ್ನು ಐಐಟಿ ಮಟ್ಟಕ್ಕೆ ಉನ್ನತೀಕರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ವಿಟಿಯು ಕುಲಪತಿ ಪ್ರೊ.ಕರಿಬಸಪ್ಪನವರು ವಿ.ಟಿ.ಯು.ವನ್ನು ಐಐಟಿ ಸ್ಥಾನಮಾನಕ್ಕೆ ಏರಿಸುವ ಸಂಬಂಧ …

Read More »