Breaking News

LOCAL NEWS

ಬೆದರಿಕೆ ಪತ್ರ : ಬೆಳಗಾವಿ ಪೊಲೀಸ್ ಅಲರ್ಟ್…!!

101 ವರ್ಷಗಳ ಹಳೆಯ ನಿಪ್ಪಾಣಿಯ ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ : ಬೆಳಗಾವಿ ಪೊಲೀಸ್ ಅಲರ್ಟ್ ಬೆಳಗಾವಿ : ನಿಪ್ಪಾಣಿ ಪಟ್ಟಣದ ರಾಮ ಮಂದಿರ ಸ್ಫೋಟಿಸುತ್ತೇವೆ, ಸುಧಾರಿಸಿಕೊಳ್ಳಿ ಎಂದು ಕಿಡಿಗೇಡಿಗಳು ಬೆದರಿಕೆ ಪತ್ರ ಬರೆದಿದ್ದಾರೆ. ಕಳೆದ ತಿಂಗಳು ಫೆಬ್ರವರಿ 7 ಹಾಗೂ 28 ರಂದು ಎರಡು ಪತ್ರಗಳು ಬಂದಿದ್ದು, ಮುಂದಿನ 20, 21 ತಾರೀಖಿನ ಒಳಗಡೆ ರಾಮ ಮಂದಿರವನ್ನು ದೊಡ್ಡ ಪ್ರಮಾಣದಿಂದ ಸ್ಪೋಟಿಸುತ್ತೇವೆ ಎಂದು ಅನಾಮಧೇಯ ವ್ಯಕ್ತಿಗಳು ಪತ್ರ …

Read More »

ಬೆಳಗಾವಿಯಲ್ಲಿ ಸ್ವಾಗತ, ಮಾಡಿಕೊಳ್ಳಲು ಎಲ್ಲರೂ ಬಂದಿದ್ರು…!

ಕರ್ನಾಟಕ ಸುವರ್ಣ ಸಂಭ್ರಮ: ಜ್ಯೋತಿ ರಥಯಾತ್ರೆಗೆ ಬೆಳಗಾವಿ ನಗರದಲ್ಲಿ ಅದ್ಧೂರಿ ಸ್ವಾಗತ ಬೆಳಗಾವಿ, +: ಕರ್ನಾಟಕ ಸಂಭ್ರಮ – 50ರ ಅಂಗವಾಗಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಜ್ಯೋತಿ ರಥಯಾತ್ರೆಯನ್ನು ಗುರುವಾರ(ಮಾ.7) ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಅದ್ಧೂರಿಯಾಗಿ ಬತಮಾಡಿಕೊಳ್ಳಲಾಯಿತು. ರಾಜ್ಯದಾದ್ಯಂತ ಸಂಚರಿಸುತ್ತಿರುವ ರಥಯಾತ್ರೆಯು ಫೆ‌,17 ರಂದು ಅಥಣಿ ಮೂಲಕ ಬೆಳಗಾವಿ ಜಿಲ್ಲೆಯನ್ನು ಪ್ರವೇಶಿಸಿದ್ದು, ಹುಕ್ಕೇರಿ ಮೂಲಕ ಹಾಯ್ದು ಬೆಳಗಾವಿ ನಗರವನ್ನು ಪ್ರವೇಶಿಸಿತು. ಬೆಳಗಾವಿ(ಉತ್ತರ) ವಿಧಾನಸಭಾ ಕ್ಷೇತ್ರದ ಶಾಸಕ ಆಸಿಫ್(ರಾಜು) ಸೇಠ್, ಮಹಾಪೌರರಾದ …

Read More »

ಬೆಳಗಾವಿಯಲ್ಲಿ ಕಗ್ಗಂಟಿದೆ ನಮಗೇ ತಿಳಿಯುತ್ತಿಲ್ಲ ಅಂದ್ರು ಸತೀಶ್ ಜಾರಕಿಹೊಳಿ…!!

ಬೆಳಗಾವಿ -ಬೆಳಗಾವಿ, ಚಿಕ್ಕೋಡಿ ಲೋಕಸಭಾ ಟಿಕೆಟ್ ವಿಳಂಬ ವಿಚಾರವಾಗಿ ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿಕೆ ನೀಡಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಗ್ಗಂಟಿದೆ, ನಮಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಬೆಳಗಾವಿ ಲೋಕಸಭಾ ಕ್ಷೇತ್ರದ ಕುರಿತು ಹೈಕಮಾಂಡ್ ನವರು ರೆಡಿ ಇದ್ದಾರೆ ಜಿಲ್ಲೆಯಲ್ಲಿ ನಾಯಕರಲ್ಲಿ ಇತ್ಯರ್ಥ ಆಗ್ತಿಲ್ಲ,ನಮ್ಮ ಜಿಲ್ಲೆಯದ್ದು ಎರಡನೇ ಲಿಸ್ಟ್ ನಲ್ಲಿ ಬರುತ್ತೆ ಈಗ ಬರಲ್ಲ,ಸೋಮವಾರ ಒಳಗೆ ಮತ್ತೆ ಹೈಕಮಾಂಡ್ ಗೆ …

Read More »

ಬಿಜೆಪಿ ಅಧ್ಯಕ್ಷರು ಮಂಗಲಾ ಅಂಗಡಿ ಮನೆಗೆ ಹೋಗಿದ್ರು ಏನ್ ಚರ್ಚೆ ಮಾಡಿದ್ರು ಗೊತ್ತಾ…!!!

ಬೆಳಗಾವಿ- ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರು ? ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿರುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಅವರ ಮನೆಗೆ ಭೇಟಿ ನೀಡಿ ಒಂದು ಗಂಟೆ ಚರ್ಚೆ ಮಾಡಿದ ವಿಚಾರ ಈಗ ಬಿಜೆಪಿ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಟಿಕೆಟ್ ಖಾತ್ರಿಯಾಗಿದೆ ಎಂದು ಹೇಳಲಾಗುತ್ತಿದೆ. ಜಗದೀಶ್ ಶೆಟ್ಟರ್ ಅವರು ಘರ್ …

Read More »

ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಕ

ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ವಾಣಿಜ್ಯ ಶಾಸ್ತ್ರ ವಿಭಾಗದ ಡೀನ್, ಹಿರಿಯ ಪ್ರಾಧ್ಯಾಪಕ ಪ್ರೊ.ಸಿ.ಎಂ.ತ್ಯಾಗರಾಜ್ ಅವರನ್ನು ಅವರನ್ನು ರಾಜ್ಯಪಾಲ ತಾವರಚಂದ ಗೆಹಲೋಟ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಮುಂದಿನ ನಾಲ್ಕು ವರ್ಷಗಳ ಅವಧಿಗೆ ಈ ನೇಮಕಾತಿ ಮಾಡಲಾಗಿದೆ. ಮೂಲತಃ ಚಿಕ್ಕಮಗಳೂರಿವರಾದ ತ್ಯಾಗರಾಜ್ ಅವರು ಶಿವಮೊಗ್ಗ, ಬೆಂಗಳೂರು, ಬೆಳಗಾವಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Read More »

ಬೆಳಗಾವಿಗೆ ಬರುವ ಒಂದು ದಿನ ಮೊದಲು ನಡ್ಡಾ ರಾಜೀನಾಮೆ…

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ರಾಜ್ಯಸಭಾ ಅಧ್ಯಕ್ಷರು ಅಂಗೀಕರಿಸಿದ್ದಾರೆ. ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೆಪಿ ನಡ್ಡಾ ಅವರ ಅವಧಿಯು ಏಪ್ರಿಲ್‌ನಲ್ಲಿ ಕೊನೆಗೊಳ್ಳಲಿದೆ. ಆದರೆ ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ನಡ್ಡಾ ಅವರು ಗುಜರಾತ್‌ನಿಂದ ಸಂಸತ್ತಿನ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅವರು ಹಿಮಾಚಲ ಪ್ರದೇಶದಿಂದ ಆಯ್ಕೆಯಾಗಿದ್ದ ರಾಜ್ಯಸಭಾ ಸ್ಥಾನಕ್ಕೆ …

Read More »

ಬೆಳಗಾವಿ MP ಇಲೆಕ್ಷನ್,ಬಿಜೆಪಿ ಆಕಾಂಕ್ಷಿಗಳ ರೇಸ್ ನಲ್ಲಿ ಮಾಜಿ ಜಿಲ್ಲಾಧಿಕಾರಿ.!!

ಬೆಳಗಾವಿ ಜಿಲ್ಲಾಧಿಕಾರಿ ಗಳಾಗಿ ಪ್ರಾದೇಶಿಕ ಆಯುಕ್ತರಾಗಿ, ಸೇವೆ ಮಾಡಿರುವ ಎಂ.ಜಿ ಹಿರೇಮಠ ಅವರು ಪ್ರಸಕ್ತ ಲೋಕಸಭೆ ಚುನಾವಣೆಯ ಬೆಳಗಾವಿ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ.ಕೋವೀಡ್ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕೋವೀಡ್ ಲಸಿಕೆ ಹಾಕಿಸಿ,ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಹಬ್ಬಾಸ್ ಗಿರಿ ಪಡೆದಿದ್ದ ಎಂ.ಜಿ ಹಿರೇಮಠ ಅವರು ಬೆಳಗಾವಿ ಜಿಲ್ಲೆಯಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದರು.ಜನರ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶ ಮಾಡಿರುವ ಅವರು ಈಗಾಗಲೇ ಅವರು ಬಿಜೆಪಿಯ ರಾಷ್ಟ್ರೀಯ …

Read More »

ರಮೇಶ ಜಿಗಜಿಣಗಿ ಆರೋಗ್ಯ ಸ್ಥಿತಿ ಗಂಭೀರ , ಬೆಳಗಾವಿ ಆಸ್ಪತ್ರೆಗೆ ದಾಖಲು

ಬೆಳಗಾವಿ :ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು, ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಮೆದುಳಿನ ರಕ್ತ ಸ್ರಾವ ಸಂಭವಿಸಿದೆ ಎಂದು ವರದಿಯಾಗಿದೆ. ಜಿಗಜಿಣಗಿ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿಗಂಭೀರವಾಗಿದೆ ಎಂದು ವರದಿಯಾಗಿದೆ. 71 ವರ್ಷದ ರಮೇಶ ಜಿಗಜಿಣಗಿ ಕರ್ನಾಟಕದ ರಾಜ್ಯದ ಶಾಸಕ, ಸಂಸದ, ರಾಜ್ಯ ಮತ್ತು ಕೇಂದ್ರದ ಸಚಿವರಾಗಿದ್ದರು. ಈ ಮೊದಲು ಬೆಳಗಾವಿ …

Read More »

ಬೆಳಗಾವಿಯ ಕಣಬರ್ಗಿ ಹೊಸ ಲೇಔಟ್ ಗೆ 50 ಕೋಟಿ ₹

ಬುಡಾ: 384.46 ಕೋಟಿ ರೂಪಾಯಿ ಬಜೆಟ್ ಗೆ ಅನುಮೋದನೆ ಕಣಬರ್ಗಿ ವಸತಿ ವಿನ್ಯಾಸಕ್ಕೆ 50 ಕೋಟಿ ಮೀಸಲು ಬೆಳಗಾವಿ, ): ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದ 2024-25 ನೇ ಸಾಲಿನಲ್ಲಿ 384.46 ಕೋಟಿ ರೂಪಾಯಿ ಆಯವ್ಯಯಕ್ಕೆ ಅನುಮೋದನೆ ನೀಡಲಾಗಿದೆ. ಶುಕ್ರವಾರ(ಮಾ.1) ನಡೆದ ಪ್ರಾಧಿಕಾರದ ಸಾಮಾನ್ಯ ಸಭೆ‌ ಹಾಗೂ‌‌ ಆಯವ್ಯಯ ಸಭೆಯಲ್ಲಿ ಬಜೆಟ್ ಗೆ‌ ಅನುಮೋದನೆ‌ ಪಡೆಯಲಾಯಿತು. ಸದರಿ ಬಜೆಟ್ ನಲ್ಲಿ ಕಣಬರ್ಗಿ ಯೋಜನೆ (ಯೋಜನಾ ಸಂಖ್ಯೆ 61) ಕೈಗೋಳ್ಳಲು ಪ್ರಸ್ತುತ ಆರ್ಥಿಕ …

Read More »

ಬೆಳಗಿನ ಜಾವ, ಬೆಳಗಾವಿ ನಗರಕ್ಕೆ ನುಗ್ಗಿದ ಕಾಡಾನೆ…!

ಬೆಳಗಾವಿ- ಇಂದು ಬೆಳ್ಳಂ ಬೆಳಗ್ಗೆ ಕಾಡಾನೆಯೊಂದು ಬೆಳಗಾವಿ ಮಹಾನಗರದ ಬಡಾವಣೆಗೆ ನುಗ್ಗಿದ ಘಟನೆ ಬೆಳಗಾವಿಯ ಬಾಕ್ಸೈಟ್ ರಸ್ತೆಯ ಬಸವ ಕಾಲನಿಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಕಾಡಾನೆ, ಬೆಳಗಾವಿಯ ಬಸವ ಕಾಲೋನಿಯಲ್ಲಿ ಕಾಣಿಸಿಕೊಂಡಾಗ,ಅಲ್ಲಿಯ ಕೆಲವರಿಗೆ ಖುಷಿ,ಇನ್ನು ಕೆಲವರಿಗೆ ಹೆದರಿಕೆ, ಆನೆ ಬಂದಿದೆ ಆನೆ,ಎನ್ನುವ ಸುದ್ದಿ ಹರಡಿ ಅಲ್ಲಿ ನೂರಾರು ಜನ ಸೇರಿದ್ರು.ಸೆಲ್ಫಿ,ಮೋಬೈಲ್ ಶೂಟೀಂಗ್ ಮಾಡಿ ಅಲ್ಲಿಯ ಜನ ಎಂಜಾಯ್ ಮಾಡಿದ್ರು. ಕಾಡಾನೆ ಬಡಾವಣೆಗೆ ಬಂತಲ್ಲ ಎಂದು ಅಲ್ಲಿಯ ಕೆಲವು ಜನ …

Read More »

ಹೈದರಾಬಾದ್ ನಿಂದ ಬೆಳಗಾವಿಗೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿ : ಹಲವರು ಗಂಭೀರ

ಬೆಳಗಾವಿ :ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ಖಾಸಗಿ ಬಸ್ ಪಲ್ಟಿಯಾಗಿ, 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಹೈದರಾಬಾದ್‌ನಿಂದ ಬೆಳಗಾವಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಪಲ್ಟಿಯಾಗಿದೆ. ಗಾಯಾಳುಗಳನ್ನು ಗಂಗಾವತಿ ಮತ್ತು ಕೊಪ್ಪಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ಬೆಳಗ್ಗೆ 7:00 ರ ಸುಮಾರಿಗೆ ಈ ಘಟನೆ ನಡೆದಿದೆ. ಬಸ್ಸಿನಲ್ಲಿ ಸುಮಾರು 50ಕ್ಕೂ …

Read More »

ಬಲಾಡ್ಯ ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಕೊಟ್ಟಿದ್ದು ಶೂನ್ಯ, ಬಿಗ್ ಝಿರೋ…!!

        ಬೆಳಗಾವಿ ದೊಡ್ಡ ಜಿಲ್ಲೆಗೆ,ಕೈ ಕೊಟ್ಟ ಕಾಂಗ್ರೆಸ್ ಸರ್ಕಾರ…!! ಬೆಳಗಾವಿ- ಅಂತೂ ಇಂತೂ 44 ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಿ ನಿನ್ನೆ ರಾತ್ರಿ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿ ಪಟ್ಟಿ ಬಿಡುಗಡೆ ಮಾಡಿದ್ದು 44 ಜನರ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಗೆ ಸಿಕ್ಕಿದ್ದು ಶೂನ್ಯ…. ಮುಖ್ಯಂತ್ರಿ ಸಿದ್ರಾಮಯ್ಯ ಸಹಿ ಮಾಡಿರುವ 44 ಜನರ. ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಯಾರಿಗೂ ಯಾವುದೇ ಸ್ಥಾನ …

Read More »

ನಿಗಮ ಮಂಡಳಿಗಳ ಪಟ್ಟಿಗೆ ಸಿಎಂ ಅಸ್ತು‌….ಬೆಳಗಾವಿ ಬುಡಾ,ಕಾಡಾ ಯಾರಿಗೆ..??

ಬೆಳಗಾವಿ- ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪಾಲಿಗೆ ಇಂದು ಸಿಹಿ ಸುದ್ದಿ ಹೊರಬಿದ್ದಿದೆ.ನಿಗಮ ಮಂಡಳಿಗಳ ಪಟ್ಟಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿ ಹಾಕಿದ್ದಾರೆ ಎನ್ನುವ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಲಭ್ಯವಾಗಿದೆ. 45 ನಿಗಮ ಮಂಡಳಿಗಳ ಪಟ್ಟಿಗೆ ಸಿಎಂ ಸಹಿ ಹಾಕಿದ್ದಾರೆ ಎಂದು ಗೊತ್ತಾಗಿದ್ದು ನೇಮಕಗೊಂಡಿರುವ ಅಧ್ಯಕ್ಷರುಗಳಿಗೆ ನೇರವಾಗಿ ಆದೇಶ ಪತ್ರ ನಾಳೆ ಸ್ಪೀಡ್ ಪೋಸ್ಟ ಮಾಡಲು ನಿರ್ಧರಿಸಲಾಗಿದೆ.ಪಟ್ಟಿ ರಿಲೀಸ್ ಆಗುವ ಸಾಧ್ಯತೆಗಳು ಇಲ್ಲ ಎಂದು ಗೊತ್ತಾಗಿದೆ. 45 ನಿಗಮ …

Read More »

ಚಿಕ್ಕೋಡಿಯಲ್ಲಿ ಇಂಗ್ಲೀಷ್ ಶಾಲೆ ಉದ್ಘಾಟಿಸಿದ ಸೆಂಟ್ರೆಲ್ ಮಿನಿಸ್ಟರ್….

ಚಿಕ್ಕೋಡಿ ೨೮, ಫೆ. ೨೦೨೪ : ಕಳೆದೊಂದು ದಶಕದಲ್ಲಿ ಭಾರತವು ಐದನೇ ಆರ್ಥಿಕಶಕ್ತಿ ವಲಯವಾಗಿ ಬೆಳೆದುನಿಂತಿದೆ. ಔದ್ಯಮಿಕವಾಗಿ, ಆರೋಗ,್ಯ ಶೈಕ್ಷಣಿಕವಾಗಿ ಡಿಜಿಟಲ್ ಭಾರತವು ಪ್ರಕಾಶಿಸುತ್ತಿದೆ. ಇದೆಲ್ಲವೂ ಮೋದಿಜಿಯವರ ಸಮರ್ಥ ನಾಯಕತ್ವದಿಂದ ಸಾಧ್ಯವಾದುದು ಎಂದು ಕೇಂದ್ರ ವಿದೇಶಾಂಗ ಸಚಿವರಾದ ಪದ್ಮ ಶ್ರೀ ಡಾ.ಎಸ್.ಜೈಶಂಕರ ಅವರು ಹೇಳಿದರು. ಅವರು ಚಿಕ್ಕೋಡಿಯಲ್ಲಿ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಹತ್ತು ವರ್ಷಹಿಂದೆ ಭಾರತ ಆರ್ಥಿಕವಾಗಿ ಹನ್ನೊಂದನೆಯ ಸ್ಥಾನವನ್ನು …

Read More »

ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ….,ಪಾಲಿಕೆ ಆಯುಕ್ತರಿಂದ ಅಡಿಪಾಯ..!!

ಬೆಳಗಾವಿ-ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ್ರು ಬೆಳಗಾವಿಯಲ್ಲಿ ಕರವೇ ರಾಜ್ಯಕಾರ್ಯಕಾರಿಣಿ ಸಭೆ ನಡೆಸಿ,ಕನ್ನಡ ನಾಮಫಲಕ ಕಡ್ಡಾಯದ ಕುರಿತು ಗಡುವು ನೀಡಿ ಬೆಂಗಳೂರಿಗೆ ತೆರಳುತ್ತಿದ್ದಂತೆಯೇ ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಕಾರ್ಯಾಚರಣೆ ಶುರುವಾಗಿದೆ. ಇಂದು ಬೆಳ್ಳಂ ಬೆಳಗ್ಗೆ ಪಾಲಿಕೆ ಅಧಿಕಾರಿಗಳ ತಂಡ ಬೆಳಗಾವಿಯ ಗಲ್ಲಿ,ಗಲ್ಲಿಗಳಲ್ಲಿ ಸುತ್ತಾಡಿ,ಅನ್ಯಭಾಷಿಕ ಫಲಕಗಳನ್ನು ತೆರವುಗೊಳಿಸಲು ಸೂಚಿಸಿದೆ.ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಪಿ‌ ಎನ್ ಲೋಕೇಶ್ ಅವರ ಕನ್ನಡದ ಇಚ್ಛಾಶಕ್ತಿಯ ಪರಿಣಾಮ ಬೆಳಗಾವಿಯಲ್ಲಿ ಕನ್ನಡದ ಅನುಷ್ಠಾನಕ್ಕೆ ಚಾಲನೆ …

Read More »