Breaking News

LOCAL NEWS

ನಾಳೆ ಬೆಳಗಾವಿಗೆ ಅಮೀತ್ ಶಾ,ಬಿಜೆಪಿಯಲ್ಲಿ ಹೊಸ ಹುರುಪು..!!

ಬೆಳಗಾವಿ- ಕೇಂದ್ರ ಗೃಹ ಸಚಿವ, ಬಿಜೆಪಿಯ ಚಾಣಕ್ಯ,ಅಮೀತ್ ಶಾ ನಾಳೆ ಬೆಳಗಾವಿಗೆ ಆಗಮಿಸಲಿದ್ದು,ಕಿತ್ತೂರು ಕ್ಷೇತ್ರದ ಮುಗುಟಖಾನ್ ಹುಬ್ಬಳ್ಳಿಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕ್ರಾಂತಿಯ ನೆಲದಿಂದ ರಾಜ್ಯದ ಬಿಜೆಪಿ ನಾಯಕರು, 2023 ರ ವಿಧಾನಸಭೆ ಚುನಾವಣೆಯ ವಿಜಯಶಾಲಿಯಾಗುವ ಸಂಕಲ್ಪ ಮಾಡಲಿದ್ದು,ಈ ವಿಜಯ ಸಂಕಲ್ಪ ಯಾತ್ರೆಗೆ ಅಮೀತ್ ಶಾ ಚಾಲನೆ ನೀಡಲಿದ್ದಾರೆ. ನಾಳೆ ಶನಿವಾರ,ಬೆಳಗ್ಗೆ ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮ ಮುಗಿಸಿಕೊಂಡು …

Read More »

ನನ್ನಿಂದಲೇ.. ಡಿ.ಕೆ.ಶಿವಕುಮಾರ್ ರಾಜಕಾರಣ ಅಂತ್ಯ ಆಗೋದು. ನೋಡ್ತಾ ಇರೀ- ರಮೇಶ್ ಜಾರಕಿಹೊಳಿ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಕ್ಷರಶಃ ಇಲೆಕ್ಷನ್ ಶುರುವಾಗಿದೆ.ಈ ಕ್ಷೇತ್ರದಲ್ಲಿ ಸರಣಿ ಸಭೆಗಳನ್ನು,ಸಮಾವೇಶಗಳನ್ನು ಮಾಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇವತ್ತು ಬೆಳಗಾವಿಯ ಹೊರ ವಲಯದಲ್ಲಿರುವ ರೆಜೇಂಟಾ ರಿಸಾರ್ಟ್ ನಲ್ಲಿ ಗ್ರಾಮೀಣ ಕ್ಷೇತ್ರದ ಬಿಜೆಪಿ ನಾಯಕರ ಸಭೆ ನಡೆಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೇ ಆರಂಭವಾಗಿದೆ. ರಾಜ್ಯ ರಾಜಕಾರಣದ ಕಡುವೈರಿಗಳಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟಾಕ್ ಫೈಟ್ ಜೋರಾಗಿದೆ. ತಮ್ಮ ರಾಜಕೀಯ ಬದ್ಧವೈರಿ ಲಕ್ಷ್ಮೀ …

Read More »

ಹೆಬ್ಬಾಳಕರ್ ವಿರುದ್ಧ ಬಿಜೆಪಿ ನಾಯಕರು ದೂರು ಕೊಡ್ತಾರಂತೆ…!!!

ಬೆಳಗಾವಿ ಕಾಂಗ್ರೆಸ್ ಏನು ಎಂಬುದರ ಕುರಿತು ಜನತೆಗೆ ಗೊತ್ತಾಗಿದೆ. ಕಾಂಗ್ರೆಸ್ ಮತದಾರರಿಗೆ ಆಮಿಷ ತೋರುತ್ತಿರುವ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿದರು. ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗಾಗಲೇ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಮೇಲೆ‌ ಕಾಂಗ್ರೆಸ್ ದೂರು ನೀಡಿದೆ. ರಮೇಶ ಅವರು ಆರು ಸಾವಿರ ರೂ. ಎಲ್ಲಿ …

Read More »

ಕ್ರಿಕೆಟ್ ಆಟಗಾರ, ಅಶೀಶ್ ನೆಹ್ರಾ, ಬೆಳಗಾವಿಗೆ ಬಂದಿದ್ರು….!!

ಬೆಳಗಾವಿ-ದೇಶದ ಯಾವುದೇ ರಾಜ್ಯದ ಗಣ್ಯರು ಗೋವಾಕ್ಕೆ ಹೋಗಬೇಕಾದ್ರೆ ಬಹುತೇಕರು ಬೆಳಗಾವಿ ಮಾರ್ಗವಾಗಿಯೇ ಗೋವಾಕ್ಕೆ ಹೋಗ್ತಾರೆ,ಇವತ್ತು ಬೆಳಗ್ಗೆ ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಅಶೀಶ್ ನೆಹ್ರಾ ಕೂಡಾ ಬೆಳಗಾವಿಗೆ ಬಂದಿದ್ದು ಇವತ್ತಿನ ವಿಶೇಷ ಸುದ್ದಿ. ಟೆಸ್ಟ್ ಕ್ರಿಕೆಟ್ ಪ್ಲೇಯರ್ ಭಾರತೀಯ ತಂಡದ ಫಾಸ್ಟ್ ಬಾಲರ್ ಅಶೀಶ್ ನೆಹ್ರಾ ತಮ್ಮ ಗೆಳೆಯರ ಜೊತೆ ಗೋವಾದಿಂದ ಬೆಳಗಾವಿಗೆ ಮರಳುವಾಗ ಇಂದು ಬೆಳಗ್ಗೆ 8-30 ರ ಸುಮಾರಿಗೆ ಖಾನಾಪೂರದ ಜಾಂಬೋಟಿ ಕ್ರಾಸ್ ನಲ್ಲಿರುವ ಚಹಾ ಅಂಗಡಿಯಲ್ಲಿ …

Read More »

ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಪ್ರಬಲ ಪೈಪೋಟಿ….!!

ಬೆಳಗಾವಿ- ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಎಲ್ಲಿಲ್ಲದ ಪೈಪೋಟಿ ನಡೆಯುತ್ತಿದೆ.ದಿವಂಗತ ಆನಂದ ಮಾಮನಿ ಅವರ ಧರ್ಮಪತ್ನಿ ರತ್ನಾ ಮಾಮನಿ ಸೇರಿದಂತೆ ಹಲವಾರು ಜನ ಘಟಾನುಘಟಿಗಳು ಲಾಭಿ ನಡೆಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಆಧಾರಿತ ಲಾಭಿ,ಜೊತೆಗೆ ಜಾತಿ ಆಧಾರಿತ ಲಾಭಿ ಜೋರಾಗಿಯೇ ನಡೆದಿದೆ. ಆನಂದ ಮಾಮನಿ ಅವರ ಧರ್ಮಪತ್ನಿ ರತ್ನಾ ಮಾಮನಿ ಅವರು ಬಿಜೆಪಿ ಟಿಕೆಟ್ ನೀಡುವಂತೆ ರಾಜ್ಯದ ಬಿಜೆಪಿ ನಾಯಕರಲ್ಲಿ ಮನವಿ ಮಾಡಿಕೊಂಡಿರುವ ಬೆನ್ನಲ್ಲಿಯೇ ಈ …

Read More »

ಬೆಳಗಾವಿ ಡಿಸಿ ಗೆ ಸ್ಟೇಟ್ ಲೇವಲ್ ಅವಾರ್ಡ್ ಸಿಕ್ಕಿದ್ದು ಯಾತಕ್ಕೆ ಗೊತ್ತಾ..??

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ “ಜಿಲ್ಲಾ ಚುನಾವಣಾಧಿಕಾರಿ” ಪ್ರಶಸ್ತಿ ಬೆಳಗಾವಿ, ಜ.24(ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗದ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಕೊಡಮಾಡುವ ಅತ್ಯುತ್ತಮ “ಜಿಲ್ಲಾ ಚುನಾವಣಾಧಿಕಾರಿ” ಪ್ರಶಸ್ತಿಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಭಾಜನರಾಗಿದ್ದಾರೆ. ಭಾರತ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಇವರ ಕಚೇರಿಯ ವತಿಯಿಂದ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ನಲ್ಲಿ …

Read More »

ಉತ್ತರ ಕರ್ನಾಟಕ,ಗುಜ್ಜರಿಯ ಗೋಡಾವ್ನ ಅಲ್ಲ ಎಂದು ಅಭಯ ಪಾಟೀಲ ಹೇಳಿದ್ದು ಯಾಕೆ ಗೊತ್ತಾ…???

ಬೆಳಗಾವಿ-ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹಳೆಯ ಡಕೋಟಾ ಬಸ್ ಗಳನ್ನು ಕಳಸುತ್ತಿದ್ದು,ಉತ್ತರ ಕರ್ನಾಟಕ ಗುಜ್ಜರಿಯ ಗೋಡಾವ್ನ ಅಲ್ಲ,ಎಂದು ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಸಾರಿಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಇಂದು ಗಾಳಿಪಟ ಉತ್ಸವದ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಹಳೆಯ ಬಸ್ ಗಳಿಗೆ ಸ್ಟೀಕರ್ ಅಂಟಿಸಿ,ಗುಜ್ಜರಿಗೆ ಹಾಕುವ ಹಂತದಲ್ಲಿರುವ ಬಸ್ ಗಳನ್ನು ಹುಬ್ಬಳ್ಳಿ ಮತ್ತು ಬೆಳಗಾವಿಯ ಡಿಪೋಗಳಿಗೆ ಕಳುಹಿಸಿ,ಉತ್ತರ ಕರ್ನಾಟಕದ ಜನರಿಗೆ ಅವಮಾನ ಮಾಡುವ ಕೆಲಸವನ್ನು ಅಧಿಕಾರಿಗಳು …

Read More »

ಸೋಮವಾರ ಬೆಳಗಾವಿಗೆ ಸಿಎಂ ಬಸವರಾಜ್ ಬೊಮ್ಮಾಯಿ…..!!!

ಬೆಳಗಾವಿ- ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸೋಮವಾರ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಸುಪುತ್ರರಾದ, ಶಶಿಕಾಂತ ಹಾಗೂ ಸುಮೀತ್ ಅವರ ಮದುವೆ ,ಕಾರ್ಯಕ್ರಮ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯುತ್ತಿದ್ದು ಸಿಎಂ ಬೊಮ್ಮಾಯಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೋಮವಾರ ಬೆಳಗಾವಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಇಬ್ಬರು ಸುಪತ್ರರ ಮದುವೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್ …

Read More »

ಇಂದಿನಿಂದ ಬೆಳಗಾವಿ ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಗಾಳಿಪಟ…

.ಬೆಳಗಾವಿ- ಪ್ರತಿವರ್ಷದಂತೆ ಈ ವರ್ಷವೂ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಳಗಾವಿಯಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸಿದ್ದು,ಇಂದಿನಿಂದ ಬೆಳಗಾವಿಯ ಬಾನಂಗಳದಲ್ಲಿ ಬಣ್ಣ ಬಣ್ಣದ ಗಾಳಿಪಟಗಳು ಚಿತ್ತಾರ ಮೂಡಿಸಲಿವೆ. ಇಂದು ಶನಿವಾರ ಬೆಳಗ್ಗೆ 8-30 ಕ್ಕೆ ಗಾಳಿಪಟ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಗಲಿದೆ.ಈ ಉತ್ಸವದಲ್ಲಿ ಅಂತರಾಷ್ಟ್ರೀಯ ಗಾಳಿಪಟ ಕ್ರೀಡಾಳುಗಳು ಬಾಗವಹಿಸುವದರ ಜೊತೆಗೆ ರಾಷ್ಟ್ರದ ಬೇರೆ ಬೇರೆ ರಾಜ್ಯಗಳ ಕ್ರೀಡಾಳುಗಳು ಭಾಗವಹಿಸುತ್ತಾರೆ.ಇಂದಿನಿಂದ ಮೂರು ದಿನಗಳ ಕಾಲ ಈ ಉತ್ಸವ ಬೆಳಗಾವಿಯ ಬಿ.ಎಸ್ …

Read More »

ಹತ್ತು ಕೋಟಿ ಹೆಚ್ಚು ಖರ್ಚು ಮಾಡ್ತೀನಿ,ಕೊನೆಯ ಕ್ಷಣದವರೆಗೂ ಹೋರಾಡ್ತೀನಿ ಅಂದ್ರು ರಮೇಶ್….

ಬೆಳಗಾವಿ- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಸಮರ ಸಾರಿದ್ದು,ಹೆಬ್ಬಾಳಕರ ಎಷ್ಟು ಗಿಪ್ಟ್ ಕೊಡ್ತಾರೆ ಕೊಡಲಿ,ಬಹಳ ಅಂದ್ರೆ ಮೂರ್ನಾಲ್ಕು ಸಾವಿರ ಬೆಲೆಯ ಗೀಪ್ಟ್ ಕೊಡಬಹುದು,ನಾನು ಆರು ಸಾವಿರ ಬೆಲೆಯ ಗೀಫ್ಟ್ ಕೊಡ್ತೀನಿ,ಅವರಿಗಿಂತ ಹತ್ತು ಕೋಟಿ ರೂ ಹೆಚ್ವು ಖರ್ಚು ಮಾಡ್ತೀನಿ ಎಂದು ಬಹಿರಂಗ ಸಮಾವೇಶದಲ್ಲೇ ರಮೇಶ್ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೂಳೆಭಾವಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ …

Read More »

ಬೆಳಗಾವಿ ನಗರಕ್ಕೆ ತುರ್ತಾಗಿ 27 ಕೋಟಿ ಬಿಡುಗಡೆ ಆಗಿದ್ದು ಯಾಕೆ ಗೊತ್ತಾ..??

ಬೆಳಗಾವಿ-ಶಾಸಕ ಅನಿಲ ಬೆನಕೆ ಅವರ ವಿಶೇಷ ಪ್ರಯತ್ನದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳಗಾವಿಯಲ್ಲಿ ಮತ್ತೊಂದು ವಿಶೇಷ ಆಸ್ಪತ್ರೆ ನಿರ್ಮಿಸಲು 27 ಕೋಟಿ ರೂ ಅನುದಾನವನ್ನು ಮಂಜೂರು ಮಾಡಿವೆ. ಬೆಳಗಾವಿ ನಗರದಲ್ಲಿ ಅಭಿವೃದ್ಧಿ ಪರ್ವವನ್ನು ಮುಂದು ವರೆಸಿರುವ ಶಾಸಕ ಅನಿಲ ಬೆನಕೆ ಅವರು 27 ಕೋಟಿ ವಿಷೇಶವಾದ ಅನುದಾನ ಬಿಡುಗಡೆ ಮಾಡಿಸಿ ಮತ್ತೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಲಿದ್ದಾರೆ. ಕರ್ನಾಟಕ ಸರ್ಕಾರದ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ ಬೆಳಗಾವಿಯಲ್ಲಿ ಕ್ರಿಟಿಕಲ್ ಕೇರ್ ಆಸ್ಪತ್ರೆ …

Read More »

ಖಾನಾಪೂರ ಬಿಜೆಪಿಗೆ ಹೊಸ ಶಕ್ತಿ ತುಂಬಿದ ಡಾ.ಸೋನಾಲಿ ಸರ್ನೋಬತ್…!!

ಬೆಳಗಾವಿ-ಬಿಜೆಪಿಯ ಮಹಿಳಾ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾದ ಬಳಿಕ,ಕ್ಷೇತ್ರದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬೆಳೆದಿದೆ.ಖಾನಾಪೂರದಲ್ಲಿ ಸಾರ್ವಜನಿಕರ ಸಂಪರ್ಕಕ್ಕಾಗಿ ಕಚೇರಿ ಆರಂಭಿಸಿ ಈ ಕ್ಷೇತ್ರದಲ್ಲೇ ಠಿಖಾನಿ ಹೂಡಿರುವ ಡಾ.ಸೋನಾಲಿ ಅವರ ಸಾಮಾಜಿಕ ಕಾರ್ಯಗಳು ಕ್ಷೇತ್ರದಲ್ಲಿ ಹೊಸ ಪರ್ವ ಆರಂಭಿಸಿವೆ. ಖಾನಾಪೂರ ಕ್ಷೇತ್ರದ ಹಳ್ಳಿ,ಹಳ್ಳಿಗಳಲ್ಲಿ ಸಂಚರಿಸಿ, ಕಾಡಿನಂಚಿನಲ್ಲಿರುವ ಕಾಡು ನಿವಾಸಿಗಳನ್ನು ಸಂಪರ್ಕಿಸಿ,ಅವರ ಸಮಸ್ಯೆಗಳನ್ನು ಆಲಿಸಿ,ಅದಕ್ಕೆ ಪರಿಹಾರ ದೊರಕಿಸಿಕೊಡುತ್ತಿರುವ ಡಾ. ಸೋನಾಲಿ ಈ ಕ್ಷೇತ್ರದ ಜನರ ಕಷ್ಟ,ಸುಖದಲ್ಲಿ ಭಾಗವಹಿಸಿ ಅಪಾರ …

Read More »

ಮೇಯರ್ ಇಲೆಕ್ಷನ್ ಕೊನೆಯ ಕ್ಷಣದಚರೆಗೂ ಎಲ್ಲವೂ ಸಸ್ಪೆನ್ಸ್….!!!

ಬೆಳಗಾವಿ- ಫೆಬ್ರುವರಿ 6 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಉಪ ಮಹಾಪೌರ ಚುನಾವಣೆ ನಡೆಯಲಿದೆ.ಪಾಲಿಕೆಯಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ, ಆದರೂ ಮಹಾಪೌರ,ಉಪ ಮಹಾಪೌರ ಯಾರಾಗ್ತಾರೆ ಅನ್ನೋದು ಕೊನೆಯ ಕ್ಷಣದವರೆಗೂ ಸಸ್ಪೆನ್ಸ್ ಇರಲಿದೆ. ಮಹಾಪೌರ ಸ್ಥಾನ ಸಾಮಾನ್ಯ ಮಹಿಳೆ,ಉಪ ಮಹಾಪೌರ ಸ್ಥಾನ ಹಿಂದುಳಿದ ವರ್ಗ ಬ ಮಹಿಳಿಗೆ ಹೀಗೆ ಎರಡೂ ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗಿದ್ದು, ಫೆಬ್ರುವರಿ 6 ರಂದು ಚುನಾವಣೆ ನಡೆಯಲಿದ್ದು 5 ರಂದು ಬಿಜೆಪಿ ಕೋರ್ ಕಮೀಟಿ …

Read More »

ಎಂಇಎಸ್ ರಂಗೋಲಿಗೆ, ಲಕ್ಷ್ಮೀ ಅಭಿಮಾನಿಗಳಿಂದ ಪ್ರತ್ಯುತ್ತರ….!!

ಬೆಳಗಾವಿ-ಮಹಾರಾಷ್ಟ್ರ ಏಕೀಕರಣ ಸಮೀತಿಯ ಕಾರ್ಯಕರ್ತರು ತಮ್ಮ ಮನೆಯ ಅಂಗಳದಲ್ಲಿ ಜೈ ಮಹಾರಾಷ್ಟ್ರ ಎಂದು ರಂಗೋಲಿ ಬಿಡಿಸಿ,ಪುಂಡಾಟಿಕೆ ನಡೆಸಿದ ಬೆನ್ನಲ್ಲಿಯೇ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿಗಳು ಎಂಇಎಸ್ ರಂಗೋಲಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.ಮನೆಯ ಅಂಗಳದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ರು ಚನ್ನರಾಜ್ ಹಟ್ಟಿಹೊಳಿ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಮೂಡಿಸಿ ಅಭಿಮಾನ ಮೆರೆದಿದ್ದಾರೆ. ಗ್ರಾಮೀಣ ಕ್ಷೇತ್ರದಾದ್ಯಂತ ಹರ್ಷ ಶುಗರ್ಸ್ ವತಿಯಿಂದ ಗ್ರಾಮೀಣ ಉತ್ಸವ ಆಯೋಜಿಸಲಾಗಿತ್ತು. ಪ್ರತಿ ಊರಲ್ಲಿ ಮನೆಗಳ ಮುಂದೆ, ನಮ್ಮ ಸಂಸ್ಕೃತಿ …

Read More »

ಲಕ್ಷ್ಮೀ ಸನ್ನೀದಾನದಲ್ಲಿ ಹಳದಿ ಕುಂಕುಮದ ಬಿರುಗಾಳಿ…!!!

ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಕ್ಷರಶಃ ಇಲೆಕ್ಷನ್ ಶುರುವಾಗಿದೆ.ಕಾಂಗ್ರೆಸ್ ಬಿಜೆಪಿ ನಡುವೆ ಗೀಫ್ಟ್ ಹಂಚಿಕೆ ಪಾಲಿಟೀಕ್ಸ್ ನಡೆಯುತ್ತಿರುವ ಬೆನ್ನಲ್ಲಿಯೇ ಹಳದಿ ಕುಂಕುಮ ಕಾರ್ಯಕ್ರಮದ ಮೂಲಕ ಮತದಾರರನ್ನು ಓಲೈಸುವ ಪ್ರಯತ್ನಗಳು ಜೋರಾಗಿಯೇ ನಡೆದಿವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲೂ ಹಳದಿ ಕುಂಕುಮ ಕಾರ್ಯಕ್ರಮ ನಡೆಸಿ ಕ್ಷೇತ್ರದ ಮಹಿಳೆಗೆ ಸೀರೆ ಉಡುಗೊರೆಯಾಗಿ ನೀಡಿದ ಬಳಿಕ,ನಂತರ ಟಿಫೀನ್ ಬಾಕ್ಸ್, ಮೀಕ್ಸರ್ ಹಂಚಿಕೆ ಮಾಡುತ್ತಿದ್ದಾರೆ, ಮೀಕ್ಸರ್ ಹಂಚಿಕೆ ಮಾಡುವ ಕಾರ್ಯಕ್ರಮಕ್ಕೆ …

Read More »