Breaking News

LOCAL NEWS

ನಮ್ಮ ಸಿಎಂ ಬೊಮ್ಮಾಯಿ ಪುಣ್ಯದ ಕೆಲಸ ಮಾಡಿದ್ರ ನೋಡ್ರಿ…!!

ಬೊಮ್ಮಾಯಿಯವರ ಸರಕಾರದಿಂದ ಸಾಮಾಜಿಕ ನ್ಯಾಯದ ದಿಗ್ವಿಜಯ ಯಾತ್ರೆ: ನಳಿನ್‍ಕುಮಾರ್ ಕಟೀಲ್ ಕೃತಜ್ಞತೆ ಬೆಂಗಳೂರು: ನಗರಸಭೆ, ಪುರಸಭೆ ಮತ್ತು ಇತರ ಪಟ್ಟಣ ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 11,133 ಪೌರಕಾರ್ಮಿಕರಿಗೆ ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಇಂದು ತನ್ನ ಅನುಮೋದನೆ ನೀಡಿದೆ. ಈ ಮೂಲಕ ಕಾಮನ್ ಮ್ಯಾನ್ ಮುಖ್ಯಮಂತ್ರಿ ಎಂದೇ ಜನಮೆಚ್ಚುಗೆ ಪಡೆದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ …

Read More »

ಕ್ಯಾಬಿನೇಟ್ ಮಿಟೀಂಗ್ ಬೆಳಗಾವಿಯಲ್ಲಿ ನಡೆಯಲಿ,ಶಾಸಕರ ಭವನ ನಿರ್ಮಿಸಲಿ.

ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿರುವ ರಾಜ್ಯಮಟ್ಟದ ಸರ್ಕಾರಿ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ಸುವರ್ಣ ವಿಧಾನಸೌಧದಲ್ಲಿ ಸದಾ ಕ್ರಿಯಾಶೀಲವಾಗಿರಬೇಕು. ಹಾಗಾಗಿ ವಿವಿಧ …

Read More »

ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ.

ರಾಮದುರ್ಗ-ಹೊಸೂರ ಬಳಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸೂರ ಗ್ರಾಮದಲ್ಲಿ ವ್ಯಕ್ತಿಯೊಬ್ವನನ್ನು ಹತ್ಯೆ ಮಾಡಲಾಗಿದೆ‌. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ದುಷ್ಕರ್ಮಿಗಳು,ಕೊಲೆ ಮಾಡಿ ಅಪಘಾತ ಎಂಬ ರೀತಿ ಬಿಂಬಿಸಲು ಯತ್ನಿಸಿದ ಶಂಕೆ ವ್ಯಕ್ತವಾಗಿದೆ.ಮೃತದೇಹದ ಪಕ್ಕವೇ ಬೈಕ್ ಬಿದ್ದಿದೆ.ಬೇರೆಡೆ ಬರ್ಬರ ಹತ್ಯೆಗೈದು ಶವ ಬಿಸಾಕಿ ಹೋದ ಶಂಕೆ ವ್ಯಕ್ತವಾಗಿದೆ. ಹೊಸೂರ ಗ್ರಾಮದ 35 ವರ್ಷದ ಪಾಂಡಪ್ಪ ದುಂಡಪ್ಪ ಜಟಕನ್ನವರ ಮೃತದೇಹ ಪತ್ತೆಯಾಗಿದೆ.ಹೊಸೂರ ಫೂಲ್ ಬಳಿ ಶವ ಬಿಸಾಕಿ …

Read More »

ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವು

ಬೆಳಗಾವಿ-ಎತ್ತುಗಳ ಮೈ ತೊಳೆಯಲು ಹೋದಾಗ ಕಾಲು ಜಾರಿ ಕೆರೆಗೆ ಬಿದ್ದು ರೈತನೊಬ್ಬ ಸಾವನ್ನೊಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದ ಮಲ್ಲಪ್ಪ ಅನವಾಳ (45) ಮೃತ ದುರ್ದೈವಿಯಾಗಿದ್ದಾನೆ.ಇಂದು ಬೆಳಗ್ಗೆ ಎತ್ತುಗಳ ಮೈ ತೊಳೆಯಲು ಕೆರೆಗೆ ಹೋಗಿದ್ದ ಮಲ್ಲಪ್ಪ,ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ. ಸ್ಥಳದಲ್ಲಿದ್ದವರಿಗೂ ಈಜು ಬಾರದ ಕಾರಣಕ್ಕೆ ಈತನ ರಕ್ಷಣೆ ಸಾಧ್ಯವಾಗಿಲ್ಲ.ತಕ್ಷಣವೇ ಗ್ರಾಮಸ್ಥರಿಗೆ ಮಾಹಿತಿ ರವಾನೆಯಾಗಿ, ಕೆರೆಯತ್ತ ಸ್ಥಳೀಯರ …

Read More »

ನೋಡಿದ್ದು ಕೇವಲ ಮೂವತ್ತು ನಿಮಿಷ,ಕೊಟ್ಟಿದ್ದು ನಾಲ್ಕು ಲಕ್ಷ ‌‌….!!!

ಬೆಳಗಾವಿ-ಬೆಳಗಾವಿ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅಂತರ್ ರಾಜ್ಯ ಫುಟ್ ಬಾಲ್ ಟೂರ್ನಾಮೆಂಟ್ ಕುಂದಾನಗರಿಯಲ್ಲಿ ನಡೆಯಿತು.ಗೋವಾ,ಮುಂಬೈ ಹೈದ್ರಾಬಾದ್ ಸೇರಿದಂತೆ ವಿವಿಧ ರಾಜ್ಯಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ಫುಟ್ ಬಾಲ್ ಟೂರ್ನಾಮೆಂಟನ್ನು ನಗರಸೇವಕ ಅಜೀಂ ಪಟವೇಗಾರ ಅವರು ಆಯೋಜಿಸಿದ್ದರು,ಇದಕ್ಕೆ ನಗರ ಸೇವಕರಾದ ಇಮ್ರಾನ್ ಫತೇಖಾನ್,ಬಾಬಾಜಾನ್ ಮತವಾಲೆ,ಮುಜಮ್ಮಿಲ್ ಡೋಣಿ,ರಿಯಾಜ ಕಿಲ್ಲೇದಾರ್,ಉದ್ಯಮಿ ರಪೀಕ್ ಗೋಕಾಕ್,ಅಸ್ಲಂ,ಹಾಗೂ ಮಾಜಿ ನಗರ ಸೇವಕ ಮತೀನ್ …

Read More »

ಪೋತದಾರ ಬಂಧುಗಳ ಮೇಲೆ ಅಟ್ಯಾಕ್ ಅರ್ದ ಕೆಜಿ ಚಿನ್ನ ಮತ್ತು ಹಣ ಲೂಟಿ…..!!!

ಘಟಪ್ರಭಾ :ಚಿನ್ನದ ವ್ಯಾಪಾರಿಗಳಿಬ್ಬರು ಗೋಕಾಕದಿಂದ ಬೈಕ್ ಮೇಲೆ ಶಿಂಧಿಕುರಬೇಟ ಗ್ರಾಮಕ್ಕೆ ಬರುತ್ತಿರುವಾಗ 8 ಜನರು ಡಕಾಯಿತರ ತಂಡ ವ್ಯಾಪಾರಿಗಳನ್ನು ರಾಜ್ಯ ಹೆದ್ದಾರಿ ಮೇಲೆ ಅಡ್ಡಗಟ್ಟಿ ಹಲ್ಲೆ ಮಾಡಿ ಅರ್ಧ ಕೆ.ಜಿ ಬಂಗಾರ ಹಾಗೂ 2.80ಲಕ್ಷ ನಗದು ಹಣ ದರೋಡೆ ಮಾಡಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮಧ್ಯರಾತ್ರಿಯೇ ಪ್ರಕರಣ ದಾಖಲಾಗಿದ್ದು ಹಲ್ಲೆಗೊಳಗಾದ …

Read More »

ಬಿಜೆಪಿಗೆ ರೈತರ, ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಲ್ಲಿ NDRF ಮಾರ್ಗಸೂಚಿ ಬದಲಿಸಲಿ-ಚನ್ನರಾಜ್

ಕಾಲಕ್ಕೆ ತಕ್ಕಂತೆ ಎನ್ ಡಿ ಆರ್ ಎಫ್ ಮಾರ್ಗಸೂಚಿ ಬದಲಾಗಲಿ – ಚನ್ನರಾಜ್ ಹಟ್ಟಿಹೊಳಿ ಬೆಳಗಾವಿ – ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದ್ದು ಯೋಗ್ಯ ರೀತಿಯಲ್ಲಿ ಬೆಳೆ ಹಾನಿಗೆ ಮತ್ತು ಇನ್ನಿತರ ಆಸ್ತಿ ಹಾನಿಗೆ ಪರಿಹಾರ ನೀಡಬೇಕು. ಪರಿಹಾರ ಮೊತ್ತ ಹೆಚ್ಚಿಸುವುದಕ್ಕೆ ಕಾಲಕ್ಕೆ ತಕ್ಕಂತೆ ಎನ್ ಡಿ ಆರ್ ಎಫ್ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಒತ್ತಾಯಿಸಿದ್ದಾರೆ. ಈ ಕುರಿತು ವಿಧಾನ …

Read More »

ಕಬ್ಬಿನ ಪಡದಾಗ ಸಿಕ್ತು ಮೂರು ಕ್ವಿಂಟಲ್ ಹಸಿ ಗಾಂಜಾ .!!

ಬೆಳಗಾವಿ-ಬೆಳಗಾವಿ ಜಿಲ್ಲೆಯ ಡಿಸಿಆರ್ಬಿ,ಮತ್ತು ಸಿಇಎನ್ ಪೋಲೀಸ್ರು ಇವತ್ತು ಭರ್ಜರಿ ಬೇಟೆಯಾಡಿದ್ದಾರೆ.ಕಬ್ಬಿನ ಪಡದಾಗ ಗಾಂಜಾ ಬೆಳೆದಿರುವದನ್ನು ಪತ್ತೆ ಮಾಡಿರುವ ಪೋಲೀಸ್ರು ಕ್ವಿಂಟಲ್ ಗಟ್ಡಲೇ ಗಾಂಜಾ ವಶಪಡಿಸಿಕೊಂಡಿದ್ದಾರೆ. ರಾಯಬಾಗ ತಾಲ್ಲೂಕಿನ ಹಬ್ಬರವಾಡಿ ಗ್ರಾಮದಲ್ಲಿ ಹಾಲಪ್ಪ ಲಗಮಣ್ಣ ಪೂಜಾರಿ ಎಂಬಾತ ಕಬ್ಬಿನ ಪಡದಾಗ ಗಾಂಜಾ ಬೆಳೆದಿದ್ದ,ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಯ ಇನಸ್ಪೆಕ್ಟರ್ ಗಡ್ಡೇಕರ ನೇತ್ರತ್ವದ ತಂಡ ಇಂದು ದಾಳಿ ಮಾಡಿ 338 ಕೆಜಿ ಗಾಂಜಾ ವಶಪಡಿಸಿಕೊಂಡಿದೆ.

Read More »

ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ 400 ಕೋಟಿ ರೂ ಹಾನಿ…

ಮನೆಹಾನಿ ತ್ವರಿತ ಸಮೀಕ್ಷೆ, ಪರಿಹಾರ ವಿತರಣೆ- ಉಸ್ತುವಾರಿ ಸಚಿವ ಕಾರಜೋಳ ಮೆಚ್ಚುಗೆ ಬೆಳಗಾವಿ, -ಬೆಳೆಹಾನಿಯ ಬಗ್ಗೆ ಸಮೀಕ್ಷೆ ನಡೆಸುವಾಗ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕು. ಕೆಲವು ಕಡೆಗಳಲ್ಲಿ ಜಂಟಿ ಸಮೀಕ್ಷೆ ಬಳಿಕವೂ ಬೆಳೆಹಾನಿ ಬಗ್ಗೆ ವರದಿಯಾಗಿರುವುದರಿಂದ ಇವುಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಸೂಚನೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತು ನಗರದ ಪ್ರವಾಸಿಮಂದಿರದಲ್ಲಿ …

Read More »

ಎರಡು ವರ್ಷದ ಪುತ್ರನ ಜೊತೆಗೆ ನದಿಗೆ ಹಾರಿದ ತಾಯಿ

ಬೆಳಗಾವಿ-ತಾಯಿ, ಎರಡು ವರ್ಷದ ಪುತ್ರನ ಜೊತೆಗೆ ನದಿಗೆ ಹಾರಿದ ಘಟನೆ,ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ. ರುದ್ರವ್ವ ಬಸವರಾಜ್ ಬನ್ನೂರು (30) ಶಿವಲಿಂಗಪ್ಪ ಬನ್ನೂರ (2) ನದಿಗೆ ಹಾರಿದ ದುರ್ದೈವಿಗಳಾಗಿದ್ದಾರೆ.ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಪಕ್ಕದ ಮಲಪ್ರಭಾ ನದಿಗೆ ತಾಯಿ-ಮಗು ಹಾರಿದ್ದಾರೆ,ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ನದಿ ಪಕ್ಕ ಧರಿಸಿದ ಚಪ್ಪಳಿ ಬಿಟ್ಟು ಮಲಪ್ರಭಾ ನದಿಗೆ ಹಾರಿದ ತಾಯಿ-ಮಗು ಶೋಧ ಕಾರ್ಯಾಚರಣೆ ನಡೆದಿದೆ. ತಾಯಿ-ಮಗು ನದಿಗೆ ಹಾರಿರುವುದನ್ನು ನೋಡಿದ ಪ್ರತ್ಯಕ್ಷ ದರ್ಶಿಯಿಂದ ಪೊಲೀಸರಿಗೆ ಮಾಹಿತಿ …

Read More »

ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಏಜಂಟನ ಮರ್ಡರ್….

ಬೆಳಗಾವಿ-ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ.ಹೆಂಡತಿ, ಮಕ್ಕಳು ಪಕ್ಕದ ರೂಮ್ ನಲ್ಲಿ ಮಲಗಿದ್ದಾಗಲೇ ಹತ್ಯೆ ಮಾಡಿ ಹಂತಕರು ಪರಾರಿಯಾಗಿದ್ದಾರೆ. ಯಾರಿಗೂ ಗೊತ್ತಾಗದಂತೆ ಕಳೆದ ರಾತ್ರಿ ಮನೆಗೆ ನುಗ್ಗಿ ಹತ್ಯೆ ಮಾಡಿ ಹಂತಕರು ಪರಾರಿಯಾಗಿದ್ದಾರೆ.ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದ ಸುಧೀರ್ ಕಾಂಬಳೆ(57) ಕೊಲೆಯಾದ ವ್ಯಕ್ತಿ ಆಗಿದ್ದಾನೆ. ದುಬೈದಿಂದ ಕೊವಿಡ್ ಹಿನ್ನೆಲೆ ಎರಡು ವರ್ಷದ ಹಿಂದೆ ಬೆಳಗಾವಿಗೆ ಬಂದಿದ್ದ ಸುಧೀರ್ ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಏಜಂಟನಾಗಿದ್ದ,ಹೊಟ್ಟೆ, ಕತ್ತು, …

Read More »

ಒಂದಲ್ಲ,ಎರಡಲ್ಲ,ಬರೊಬ್ಬರಿ ಎಂಟು ಚಿರತೆಗಳು ಸುದ್ದಿಯಲ್ಲಿ…!!

ನೈರುತ್ಯ ಆಫ್ರಿಕಾದ ನಮೀಬಿಯಾ ದೇಶದಿಂದ ಇಂದು ಶನಿವಾರ ವಿಶೇಷ ವಿಮಾನದಲ್ಲಿ ಕರೆತರಲಾದ ಚೀತಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೊರಗೆ ಕಾಡಿಗೆ ಬಿಟ್ಟಿದ್ದಾರೆ. ಕುನೋ ಉದ್ಯಾನವನದಲ್ಲಿ 8 ಚೀತಾಗಳನ್ನು ಹೊರಗೆ ಬಿಟ್ಟ ನಂತರ ಪ್ರಧಾನ ಮಂತ್ರಿಗಳು ತಮ್ಮ ಕ್ಯಾಮರಾದಲ್ಲಿ ಅವುಗಳು ಅಡ್ಡಾಡುವುದನ್ನು ಸೆರೆಹಿಡಿದು ಸಂಭ್ರಮಿಸಿದ್ದಾರೆ. ಈ ಮೂಲಕ ನಮೀಬಿಯಾದ 5 ಹೆಣ್ಣು ಮತ್ತು 3 ಗಂಡು ಚೀತಾಗಳು ಸರಿಸುಮಾರು 7 ದಶಕಗಳ ನಂತರ ಭಾರತಕ್ಕೆ …

Read More »

ಬೆಳಗಾವಿಯಲ್ಲಿ ಮರಾಠಿ ಬಾಯ್ಸ್ ಬಿಡುಗಡೆಗೆ ಬ್ರೇಕ್…!!!

ಬೆಳಗಾವಿ-ಗಡಿ ವಿವಾದ ಕೆದಕಿದ ಮರಾಠಿ ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮರಾಠಿ ಬಾಯ್ಸ್ ಮರಾಠಿ ಚಲನಚಿತ್ರ ಬಿಡುಗಡೆಗೆ ಬೆಳಗಾವಿಯಲ್ಲಿ ಬ್ರೇಕ್ ಬಿದ್ದಿದೆ. ಬೆಳಗಾವಿ ಜಿಲ್ಲೆ ಸೇರಿ ರಾಜ್ಯಾದ್ಯಂತ ಮರಾಠಿ ಚಲನಚಿತ್ರ ‘ಬಾಯ್ಸ್ 03′ ಚಿತ್ರ ಇವತ್ತು ಬಿಡುಗಡೆಯಾಗಲಿದ್ದು,ಈ ಚಿತ್ರ ನಿಷೇಧಕ್ಕೆ ಕರವೇ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಚಿತ್ರ ಬಿಡುಗಡೆಗೆ ಬ್ರೇಕ್ ಬಿದ್ದಿದೆ. ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಕರವೇ ಮನವಿ ಅರ್ಪಿಸಿ ಬೆಳಗಾವಿಯಲ್ಲಿ ಮರಾಠಿ ಬಾಯ್ಸ್ …

Read More »

ಬೆಳಗಾವಿಯಲ್ಲಿ ಮರ ಬಿದ್ದು ಮತ್ತೊಂದು ಅನಾಹುತ…!!

ಬೆಳಗಾವಿ- ಬೆಳಗಾವಿ ಮಹಾನಗರದ ಆರ್ ಟಿ ಓ ಸರ್ಕಲ್ ಬಳಿ ಮರ ಬಿದ್ದು ಯುವಕನ ಬಲಿ ಪಡೆದ ಬೆನ್ನಲಿಯೇ ಬೆಳಗಾವಿ ಮಹಾನಗರದಲ್ಲಿ ಮತ್ತೊಂದು ಮರ ಉರುಳಿ ಇನ್ನೊಂದು ಅನಾಹುತ ಆಗಿದೆ. ನಗರದ ಮಾರ್ಕೆಟ್ ಪೋಲೀಸ್ ಠಾಣೆಯ ಬಳಿ ಬೃಹದಾಕಾರದ ಮರ ಉರುಳಿ ಇನ್ನೋವಾ ವಾಹನ ಸೇರಿದಂತೆ ಇತರ ವಾಹನಗಳು ಜಿಬ್ಬಿಯಾಗಿವೆ. ಎರಡು ರಿಕ್ಷಾ ಹಾಗೂ ಒಂದು ಇನ್ನೋವಾ ವಾಹನ ಮರದ ಬುಡದಲ್ಲಿ ಸಿಲುಕಿವೆ.ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.ಬೆಳಗಾವಿಯ ಅರಣ್ಯ ಇಲಾಖೆಯ …

Read More »

ಹಿಂದಿ ಹೇರಿಕೆ ಬೇಡ ಅಂದ್ರು,ಬೆಳಗಾವಿ ಮಂದಿ…!!

ಬೆಳಗಾವಿ: ಹಿಂದಿ ದಿವಸ್‌ ಆಚರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ ಬಣದ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ‍್ರತಿಭಟನೆ ನಡೆಸಿದರು. ಇಲ್ಲಿನ ರೈಲ್ವೆ ನಿಲ್ದಾಣ ಎದುರು ಬುಧವಾರ ಪ್ರತಿಭಟನೆ ನಡೆಸಿದ ಅವರು, ‘ಔದ್ಯೋಗಿಕ, ಶೈಕ್ಷಣಿಕ ರಂಗಗಳಲ್ಲಿ ಎಲ್ಲ ಭಾಷಿಕರಿಗೂ ಸಮಾನ ಅವಕಾಶಗಳು ಸಿಗಬೇಕು. ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು, ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳನ್ನು ಆಡಳಿತ ಭಾಷೆಗಳಾಗಿ ಮಾಡಬೇಕು. ಹಿಂದಿ ದಿವಸ್‌, ಹಿಂದಿ ಸಪ್ತಾಹ, …

Read More »