Breaking News

LOCAL NEWS

ಪೋಲೀಸ್ ತರಬೇತಿ ಕೇಂದ್ರಕ್ಕೂ ಪ್ರವಾಹದ ಭೀತಿ…!!

ಖಾನಾಪೂರ-ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಖಾನಾಪೂರ ಪೋಲಿಸ್ ತರಬೇತಿ ಕೇಂದ್ರಕ್ಕೂ ಪ್ರವಾಹದ ಭೀತಿ ಎದುರಾಗಿದೆ. ಪೊಲೀಸ್ ತರಬೇತಿ ಕೇಂದ್ರದ ಪಕ್ಕದಲ್ಲಿರುವ ಕುಂಬಾರಹಳ್ಳ ನೀರು ನುಗ್ಗುವ ಭೀತಿ ಎದುರಾಗಿದೆ.ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ತರಬೇತಿ ಕೇಂದ್ರದಿಂದ ತಾಲೂಕು ಆಡಳಿತಕ್ಕೆ ಪತ್ರ ಬರೆಯಲಾಗಿದೆ. ಖಾನಾಪುರ ತಹಶಿಲ್ದಾರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ತರಬೇತಿ ಕೇಂದ್ರದ ಪ್ರಾಂಶುಪಾಲರು ಪತ್ರ ಬರೆದು,ಕೇಂದ್ರ ಜಲಾವೃತವಾಗುವ ಆತಂಕವಿದೆ ಪ್ರವಾಹ ಪರಿಸ್ಥಿತಿ ಎದುರಾದರೆ,ಎರಡು ಸಮುದಾಯ ಭವನಗಳ ವ್ಯವಸ್ಥೆ ಮಾಡಬೇಕು …

Read More »

ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸರ್ಕಾರದ ಅನುದಾನದಲ್ಲಿ 9 ಅಂಬ್ಯುಲೆನ್ಸ್ ಕೊಟ್ರು….!!

ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ 9 ಅಂಬ್ಯುಲೆನ್ಸ್ ವಿತರಣೆ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸಲು ಸುಸಜ್ಜಿತ ಅಂಬ್ಯುಲೆನ್ಸ್: ಸಂಸದ ಅಣ್ಣಾಸಾಹೇಬ್ ಜೊಲ್ಲೆ ಬೆಳಗಾವಿ, -ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ ಅವರು 2019-20 ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಒಟ್ಟಾರೆ 9 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಂಬ್ಯಲೆನ್ಸ್ ಗಳನ್ನು ನೀಡಿದ್ದಾರೆ. ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ …

Read More »

ಸರ್ಕಾರಿ ಕಚೇರಿಗಳಲ್ಲಿ,ಪೋಟೋ ವಿಡಿಯೋ ಶೂಟಿಂಗ್ ಮಾಡಿದ್ರೆ ಹುಷಾರ್….!!

ಬೆಳಗಾವಿ-ಸರ್ಕಾರಿ ಕಚೇರಿಯ ಬಾಗಿಲು ತರೆದ್ರೆ ಸಾಕು,ಮೋಬೈಲ್ ಹಿಡಿದುಕೊಂಡು ಪೋಟೋ ಕ್ಲಿಕ್ ಮಾಡುವ,ಪ್ರಶ್ನೆಗಳ ಸುರಿಮಳೆಗೈದು ಮೋಬೈಲ್ ನಲ್ಲೇ ವಿಡಿಯೋ ಶೂಟಿಂಗ್ ಮಾಡುವವರ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ,ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ಸಂಘ,ರಾಜ್ಯ ಸರ್ಕಾರಕ್ಕೆ ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಸರ್ಕಾರ,ಸರ್ಕಾರಿ ಕಚೇರಿಗಳಲ್ಲಿ ,ಪೋಟೋ ವಿಡಿಯೋ ತೆಗೆಯುವದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇನ್ಮುಂದೆ ಯಾರಾದರೂ ಸರ್ಕಾರಿ ಕಚೇರಿಗಳಿಗೆ ಹೋಗಿ ಪೋಟೋ ವಿಡಿಯೋ ತೆಗೆದಲ್ಲಿ ಕಚೇರಿಯ ಮುಖ್ಯಸ್ಥರು …

Read More »

ವರದಿ ಪಡೆದ, ಕೆಲವೇ ಗಂಟೆಗಳಲ್ಲಿ ಐದು ಲಕ್ಷ ರೂ ಪರಿಹಾರ

ವಿರೀತ ಮಳೆಯಿಂದಾಗಿ ನಿನ್ನೆ ಮದ್ಯರಾತ್ರಿ ಯುವಕನೊಬ್ಬ ಮನೆಯ ಗೋಡೆ ಕುಸಿದು ಮೃತಪಟ್ಟಿದ್ದ,ಇಂದು ಬೆಳಗ್ಗೆ ಖಾನಾಪೂರ ತಹಶಿಲ್ದಾರರಿಂದ ವರದಿ ಪಡೆದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ,ವರದಿ ಪಡೆದ ಕೆಲವೇ ಗಂಟೆಗಳಲ್ಲಿ ಮೃತ ಯುವಕನ ಕುಟುಂಬಸ್ಥರ ಖಾತೆಗೆ ಐದು ಲಕ್ಷ ರೂ ಪರಿಹಾರದ ಹಣ,ಜಮಾ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿ, : ಖಾನಾಪುರ ತಾಲ್ಲೂಕಿನ ಬೀಡಿ ಹೋಬಳಿಯ ಚುಂಚವಾಡ ಗ್ರಾಮದಲ್ಲಿ ಮಳೆಯಿಂದ ಗೋಡೆ ಬಿದ್ದು ಮೃತಪಟ್ಟಿರುವ ಅನಂತರಾಜ ಧರಣೇಂದ್ರ ಪಾಶೆಟ್ಟಿ(16) ಅವರ …

Read More »

ಇಂದು,ನಾಳೆ ಎರಡು ದಿನ, ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ರಜೆ..

ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ರಜೆ.. ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ಶುಕ್ರವಾರ(ಜು.15) ಮತ್ತು ನಾಳೆ ಶನಿವಾರ (ಜು.16) ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ***

Read More »

ಮನೆ ಗೋಡೆ ಕುಸಿದು 13 ವರ್ಷದ ಬಾಲಕನ ಬಲಿ

ಖಾನಾಪೂರ-ಖಾ ಖನಾಪುರ(ಗ್ರಾ): ಕಳೆದೊಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಗೋಡೆ ಕುಸಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಜರುಗಿದೆ. ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚುಂಚವಾಡ ಗ್ರಾಮದ ಅನಂತು ಧರ್ಮೇಂದ್ರ ಪಾಶೆಟ್ಟಿ(15) ಎಂಬ ಯುವಕ ಮೃತಪಟ್ಟಿರುತ್ತಾನೆ. ತಾವು ವಾಸಿಸುವ ಮನೆಯ ಪಕ್ಕದಲ್ಲಿರುವ ಮನೆಯಲ್ಲಿ ದನ ಕರುಗಳನ್ನು ಕಟ್ಟುತ್ತಿದ್ದರು. ಗುರುವಾರ ರಾತ್ರಿ 10ಗಂಟೆ ಸುಮಾರಿಗೆ ಕೊಟ್ಟಿಗೆಯಲ್ಲಿರುವ ದನ ಕರುಗಳಿಗೆ ಮೇವು ಹಾಕಲು ಹೋದಾಗ ಗೋಡೆ ಏಕಾಏಕಿ ಯುವಕನ ಮೇಲೆ …

Read More »

ಖಾನಾಪೂರ ತಾಲ್ಲೂಕಿನ ಕೆಲವು ಹಳ್ಳಿಗಳ ಶಾಲೆಗಳಿಗೆ ರಜೆ…

ಬೆಳಗಾವಿ: ಸತತ ಮಳೆ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕಿನ ಶಿರೋಲಿ, ನಿಲಾವಡೆ, ಮೋಹಿಶೇತ್‌, ನಾಗರಗಾಳಿ, ಲೋಂಡಾ, ಗುಂಜಿ, ಹಲಗಾ, ಜಾಂಬೋಟಿ, ಬೈಲೂರು, ಕಣಕುಂಬಿ, ಬಿಜಗರ್ಣಿ, ಕ್ಲಸ್ಟರ್ ವ್ಯಾಪ್ತಿಗೆ ಸೇರಿದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜು.15ರಂದು ರಜೆ ಘೋಷಿಸಿ ಖಾನಾಪುರ ಬಿಇಒ ಲಕ್ಷಣ ಯಕ್ಕುಂಡಿ ಗುರುವಾರ ಆದೇಶ ಹೊರಡಿಸಿದ್ದಾರೆ.‌

Read More »

16ರಂದು ರವಿವಾರ ಪೇಟೆ ಸಂಪೂರ್ಣ ಬಂದ್

ಆಹಾರ ಧಾನ್ಯಗಳಿಗೆ ಶೇ.5 GST ವಿಧಿಸಿರುವ ಕೇಂದ್ರ ಸರಕಾರದ ನಡೆಗೆ ಆಕ್ರೋಶ ಬೆಳಗಾವಿ: ಆಹಾರ ಧಾನ್ಯ ಹಾಗೂ ಬೇಳೆಕಾಳುಗಳ ಮೇಲೆ ಕೇಂದ್ರ ಸರಕಾರ ಶೇ.5ರಷ್ಟು ಸೇವಾ ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಿರುವುದನ್ನು ಖಂಡಿಸಿ ನಗರದ ರವಿವಾರಪೇಟೆಯ ಎಲ್ಲ ವರ್ತಕರು ಜು.16ರಂದು ಒಂದು ದಿನ ಸಂಪೂರ್ಣ ವ್ಯಾಪಾರ-ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ‌‌ ಈಚೆಗೆ ಕೇಂದ್ರ ಸರಕಾರ ಆಹಾರ ಧಾನ್ಯಗಳು ಹಾಗೂ ಬೇಳೆಕಾಳು ವಹಿವಾಟು ಮೇಲೆ ತೆರಿಗೆ …

Read More »

ಬೆಳಗಾವಿಯ, ಹಿಡಕಲ್ ಡ್ಯಾಂನಲ್ಲಿ ಲ್ಯಾಂಡ್ ಆಗಲಿದೆ, ವಾಟರ್ ಏರೋಡ್ರಮ್ …

ಹಿಡಕಲ್ ಡ್ಯಾಂನಲ್ಲಿ ಲ್ಯಾಂಡ್ ಆಗಲಿದೆ, ವಾಟರ್ ಏರೋಡ್ರಮ್ … ಬೆಳಗಾವಿ -ಬೆಳಗಾವಿಯ ಹಿಡಕಲ್ ಡ್ಯಾಂ ಪ್ರದೇಶದಲ್ಲಿ ಬೃಂದಾವನ ಮಾದರಿಯ ಉದ್ಯಾನವನ ನಿರ್ಮಿಸುವ ಯೋಜನೆ ರೂಪಿಸಿದ ಬೆನ್ನಲ್ಲಿಯೇ, ಈಗ ಮತ್ತೊಂದು ಹೊಸ ಯೋಜನೆ ಹಿಡಕಲ್ ಡ್ಯಾಂ ಗೆ ಬರಲಿದೆ. ಬೆಳಗಾವಿಯ ಹಿಡಕಲ್ ಡ್ಯಾಂ, ರಾಜ್ಯದ ಕಾಳಿ ನದಿ,ಕೆ.ಆರ್.ಎಸ್ ಡ್ಯಾಂ ಸೇರಿದಂತೆ ರಾಜ್ಯದ 9 ಕಡೆ,ಪ್ರಮುಖ ಜಲಾಶಯ ಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವದಕ್ಕಾಗಿ ವಾಟರ್ ಏರೋಡ್ರಮ್ ಸೌಲಭ್ಯ ಕಲ್ಪಿಸುವುದಾಗಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಏರೋಡ್ರಮ …

Read More »

ಬೆಳಗಾವಿ ಡಿಸಿ ನಡೆ, ಖಾನಾಪೂರದ ಪಾರವಾಡ ಕಡೆ,…!!

ಜು.16 ರಂದು “ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನಡೆ ಖಾನಾಪುರ ತಾಲ್ಲೂಕಿನ ಪಾರವಾಡ ಹಳ್ಳಿಯ ಕಡೆ” ಬೆಳಗಾವಿ, ಜುಲೈ 14(ಕರ್ನಾಟಕ ವಾರ್ತೆ): “ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಶನಿವಾರ(ಜುಲೈ.16) ಖಾನಾಪುರ ತಾಲ್ಲೂಕಿನ ಪಾರವಾಡ ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ. ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ದಿಸೆಯಲ್ಲಿ ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಒಂದು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅದೇ …

Read More »

ಕೇವಲ 200 ₹ ದಲ್ಲಿ ಹಿಡಕಲ್ ಡ್ಯಾಂ,ಗೋಕಾಕ ಪಾಲ್ಸ್ , ಗೊಡಚಿನಮಲ್ಕಿ ದರ್ಶನ……!!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಭಯಂಕರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿಗಳು ಉಕ್ಕಿ ಹರಿದು ಜಿಲ್ಲೆಯ ಜಲಪಾತಗಳು ಧುಮುಕುತ್ತಿವೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್, ಹಿಡಕಲ್ ಡ್ಯಾಂ,ಮತ್ತು ಗೊಡಚಿನಮಲ್ಕಿ ಜಲಪಾತಗಳ ದರ್ಶನ ಮಾಡಲು ಬೆಳಗಾವಿ ಸಾರಿಗೆ ಸಂಸ್ಥೆ ಅತ್ಯಂತ ಕಡಿಮೆ ದರದಲ್ಲಿ ಟೂರ್ ಪ್ಯಾಕೇಜ್ ಘೋಷಣೆ ಮಾಡಿದ್ದು, ವಿಶೇಷವಾದ ಬಸ್ ಸೌಲಭ್ಯ ಕಲ್ಪಿಸಿದೆ. ಕೇವಲ 200 ₹ ದರದಲ್ಲಿ ಹಿಡಕಲ್ ಡ್ಯಾಂ, …

Read More »

ಈ ಸಾಧನ ಸಂಶೋಧನೆ ಮಾಡಿದ ಮಹಾತ್ಮನಿಗೆ ಸಲಾಂ…!!

ಎತ್ತುಗಳ ಭಾರ ಇಳಿಸುವ ಸಾಧನ ಸಂಶೋಧನೆಯ ಮೂಲ ಇಲ್ಲಿದೆ!ಮಹಾರಾಷ್ಟ್ರದ ಈ ಸಂಶೋಧಕರಿಗೆ ಪ್ರಶಂಸೆಯ ಅಭಿನಂದನೆಗಳ ಮಹಾಪೂರ! ಕಳೆದ ಕೆಲವು ದಿನಗಳಿಂದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಚಕ್ಕಡಿಗಳಲ್ಲಿ ತುಂಬಲಾಗುವ ಮಿತಿಮೀರಿದ ಭಾರವನ್ನು ಎಳೆಯುವ ಎರಡು ಎತ್ತುಗಳ ಭಾರವನ್ನು ಕಡಿಮೆ ಮಾಡಬಹುದಾದ ಚಕ್ರವೊಂದನ್ನು ನೊಗದ ಮುಂಭಾಗಕ್ಕೆ ಜೋಡಿಸಲಾಗಿದೆ. ಇದರಿಂದ ಎತ್ತುಗಳ ಮೇಲಿನ ಭಾರ ಕಡಿಮೆಯಾಗುತ್ತದೆ.ಈ ಸಾಧನವನ್ನು ಸಂಶೋಧಿಸಿದ್ದು ಮಹಾರಾಷ್ಟ್ರದ ಇಸ್ಲಾಮಪುರದಲ್ಲಿ.ಮಹಾರಾಷ್ಟ್ರದಲ್ಲಿ ಸುಮಾರು 200 ಸಕ್ಕರೆ ಕಾರ್ಖಾನೆಗಳಿವೆ. ಇವುಗಳಿಗೆ ಕಬ್ಬು ಪೂರೈಸುವ ರೈತರು ಚಕ್ಕಡಿಯ …

Read More »

ಮೂರು, ಜನರ ಜೀವ ಉಳಿಸಿ ಸಾರ್ಥಕತೆ ಮೆರೆದ ಮಹಿಳೆ…!!

ಬೆಳಗಾವಿ-ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಎಸ್ ಡಿ ಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಎತ್ತಿನಗುಡ್ಡ ಗ್ರಾಮದ ೪೮ ವರ್ಷದ ಕಮಲವ್ವ ಕೆಲಗೇರಿ ಅವರು ತಮ್ಮ ಅಂಗಾಂಗಳನ್ನು ದಾನ ಮಾಡಿ ಮೂವರ ಜೀವ ಉಳಿಸಿ ಸಮಾಜಕ್ಕೆ ಪ್ರೇರಣಾದಾಯಿಯಾಗಿದ್ದಾರೆ. ಕಿಡ್ನಿಯನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ …

Read More »

ಬೆಳಗಾವಿ ಜಿಲ್ಲೆಯಲ್ಲಿ, ಭಯಂಕರ ಮಳೆ,ಎಲ್ಲಿ ಏನಾಗಿದೆ,ಇಲ್ಲಿದೆ ಡಿಟೇಲ್ಸ್…

ಬೆಳಗಾವಿ ನಗರದ ಕೇಶವ ನಗರ ಹಾಗೂ ಅಣ್ಣಪೂರ್ಣ ನಗರದಲ್ಲಿ ಮನೆಗಳಿಗೆ ನುಗ್ಗಿದ ನೀರು   ಕಣಬರ್ಗಿಯಲ್ಲಿ  ರಸ್ತೆಯ ಮೇಲಿನ ದೃಶ್ಯ   ಮನೆಗಳಿಗೆ ನುಗ್ಗಿದ ನೀರು ಜನ ಹೈರಾಣು… ಬೆಳಗಾವಿ ಮಹಾನಗರದ ವಡಗಾವಿ ಪ್ರದೇಶದಲ್ಲಿರುವ ಅಣ್ಣಪೂರ್ಣೇಶ್ವರಿ ನಗರ,ಹಾಗು ಕೇಶವ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡುತ್ತಿದ್ದಾರೆ. ಸ್ಥಳೀಯ ನಗರ ಸೇವಕರು ನಾಲೆಯನ್ನು ಸ್ವಚ್ಛ ಗೊಳಿಸಿ ಬಡವಾಣೆಗಳಿಗೆ ನುಗ್ಗಿದ ನೀರನ್ನು ತಡರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದು ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. …

Read More »

ಝಿರೋ ಟ್ರಾಫಿಕ್ ನಲ್ಲಿ ಧಾರವಾಡದಿಂದ ಬೆಳಗಾವಿಗೆ ಬರುತ್ತಿದೆ ಕಿಡ್ನಿ….

ಬೆಳಗಾವಿ- 15 ರ ಯುವತಿಯ ಹೃದಯವನ್ನು ಧಾರವಾಡದ ಎಸ್ ಡಿ ಎಂ ಹಾಸ್ಪಿಟಲ್‌ ನಿಂದ ಬೆಳಗಾವಿಯ ಕೆ.ಎಲ್ ಇ ಆಸ್ಪತ್ರೆಗೆ ಗ್ರೀನ್ ಕಾರಿಡಾರ್ ಮೂಲಕ ತಂದು ಮುಸ್ಲೀಂ ಯುವಕನಿಗೆ ಈ ಹೃದಯ ಕಸಿ ಮಾಡಿದ ಬೆನ್ನಲ್ಲಿಯೇ ಈಗ ಮತ್ತೊಂದು ಅಂಗಾಗ ಬೆಳಗಾವಿಗೆ ಬರುತ್ತಿದೆ. ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಿಂದ ಕಿಡ್ನಿಯನ್ನು ಅಂಬ್ಯುಲೆನ್ಸ್ ಮೂಲಕ ಝಿರೋ ಟ್ರಾಫಿಕ್ ಮೂಲಕ ಬೆಳಗಾವಿಗೆ ತರಲಾಗುತ್ತಿದೆ.ಇನ್ನು ಕೆಲವೇ ಕ್ಷಣಗಳಲ್ಲಿ ಈ ಅಂಬ್ಯುಲೆನ್ಸ್ ಬೆಳಗಾವಿಗೆ ತಲುಪಲಿದೆ. …

Read More »