Breaking News
Home / LOCAL NEWS / ಬೆಳಗಾವಿ ಬೆಲ್ ಟ್ರ್ಯಾಕ್ ಯೋಜನೆಗೆ ಶೀಘ್ರದಲ್ಲಿಯೇ ಅನುದಾನ….

ಬೆಳಗಾವಿ ಬೆಲ್ ಟ್ರ್ಯಾಕ್ ಯೋಜನೆಗೆ ಶೀಘ್ರದಲ್ಲಿಯೇ ಅನುದಾನ….

ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಬೆಳಗಾವಿಯ ಆರ್.ಟಿ.ಓ ವೃತ್ತದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಚೇರಿಯ ಕಟ್ಟಡ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ಸಚಿವ ಡಿ ಕೆ ಶಿವಕುಮಾರ್ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ನಾಯಕರು ಈ ವೇಳೆ ಉಪಸ್ಥಿತರಿದ್ದರು.

ಕಟ್ಟಡ ಕಾಮಗಾರಿ ಪರಿಶೀಲನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ ಕಾಂಗ್ರೆಸ್ ಪಕ್ಷಕ್ಕೆ 13 ಜಿಲ್ಲೆಗಳಲ್ಲಿ ಸ್ವಂತ ಕಚೇರಿಗಳಿವೆ. ಈಗ ಬೆಳಗಾವಿ ನಗರದಲ್ಲೂ ಪಕ್ಷದ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ನಗರದ ಹೃದಯ ಭಾಗವಾದ ಆರ್.ಟಿ.ಓ ವೃತ್ತದಲ್ಲಿ ಅತ್ಯಂತ ಆಕರ್ಷಕವಾಗಿ ಕಟ್ಟಡವನ್ನು ನಿರ್ಮಿಸಲಾಗುವುದು. ಬೆಂಗಳೂರಿನ ಪಕ್ಷದ ಕಚೇರಿಯನ್ನು ವಿಸ್ತರಿಸಿ ನವೀಕರಣ ಮಾಡುವ ಕೆಲಸವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. ಎಂದರು.

ಬೆಂಗಳೂರು ಪೊಲೀಸರಿಗೆ 25 ಹೊಸ ಹೊಯ್ಸಳ ವಾಹನಗಳನ್ನು ನೀಡಲಾಗಿದೆ. ಅದರಂತೆ ಶೀಘ್ರದಲ್ಲಿ ಬೆಳಗಾವಿಗೂ 25 ಹೊಸ ಹೊಯ್ಸಳ ವಾಹನಗಳನ್ನು ನೀಡಲಾಗುವುದು. ಬೆಳಗಾವಿಯಲ್ಲಿ ಬೆಲ್ ಟ್ರ್ಯಾಕ್ ನಿರ್ಮಾಣಕ್ಕೆ ಇದೇ ವರ್ಷದಲ್ಲಿ ಅನುದಾನ ನೀಡಲಾಗುವುದು. ಬೆಳಗಾವಿ ಪೊಲೀಸ್ ಆಯುಕ್ತರ ನೂತನ ಕಚೇರಿ ನಿರ್ಮಾಣದ ಬಗ್ಗೆ ಕೆಲವು ಗೊಂದಲಗಳಿವೆ. ಈ ಬಗ್ಗೆ ಪೊಲೀಸ್ ಅಧಿಕಾರಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಹಾಗೂ ಬೆಳಗಾವಿ ಪೊಲೀಸ್ ಕಮೀಶ್ನರೇಟ್ ವ್ಯಾಪ್ತಿಯೊಳಗಿನ ಪೊಲೀಸ್ ಸಿಬ್ಬಂದಿಗಳ ಕೊರತೆಯನ್ನು ಕೂಡಲೇ ನೀಗಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಮೋಹನ್ ರೆಡ್ಡಿ, ರಾಜಾ ಸಲೀಂ ಕಾಶೀಮನವರ್ ಈ ವೇಳೆ ಉಪಸ್ಥಿತರಿದ್ದರು.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *