Home / ಕ್ರೈಮ್ ಸುದ್ದಿ / ಅಳಗವಾಡಿ ಪೊಲೀಸ ದೌರ್ಜನ್ಯ ಖಂಡನೆ

ಅಳಗವಾಡಿ ಪೊಲೀಸ ದೌರ್ಜನ್ಯ ಖಂಡನೆ

ಬೆಳಗಾವಿ:
ನವಲಗುಂದ ತಾಲೂಕಿನ ಯಮನೂರ ಮತ್ತು ಅಳಗವಾಡಿ ಗ್ರಾಮದ ಅಮಾಯಕ ಕುಟುಂಬಗಳ ಮೇಲೆ ನಡೆದಿರುವ ಪೊಲೀಸರ ದೌರ್ಜನ್ಯವನ್ನು ಕನ್ನಡ ರಕ್ಷಣ ಸಮಿತಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಸಂತೋಷ ಭೋಜಪ್ಪ ಅರಳಿಕಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ಅವರು ಮಹಾದಾಯಿ ನ್ಯಾಯಾಧೀಕರಣ ತೀರ್ಪು ವಿರೋಧಿಸಿ ಹೋರಾಟ ನಡೆಸುತ್ತಿದ್ದವರ ಮೇಲೆ ಮತ್ತು ಅವರ ಕುಟುಂಬಗಳ ಮೇಲೆ ಪೋಲಿಸರು ಹಲ್ಲೆ ನಡೆಸಿರುವದು ಖಂಡನಾರ್ಹ. ಪೋಲೀಸರು ಮಹಿಳೆಯರು, ಗರ್ಭಿಣಿಯರು, ವೃದ್ದರು ಮತ್ತು ಮಕ್ಕಳು ಅನ್ನದೇ ಹಲ್ಲೆ ನಡೆಸಿದ್ದಾರೆ. ಅಮಾಯಕ ಕಾಲೇಜು ಯುವಕರು ಮತ್ತು ರೈತರ ಮೇಲೆ ಹಲ್ಲೆ ನಡೆಸಿ ಬಂದಿಸಿದ್ದಾರೆ ಬಂಧಿತ ರೈತರನ್ನು ಈ ಕೂಡಲೇ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು.

ಹಲ್ಲೆ ನಡೆದ ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಇವರ ನೇತ್ರತ್ವದಲ್ಲಿ ನ್ಯಾಯಾಂಗ ತನಿಖೆಯನ್ನು ನಡೆಸಲು ರಾಜ್ಯ ಸರ್ಕಾರ ಆದೇಶ ನೀಡಬೇಕು ಹಲ್ಲೆಗೊಳಗಾದ ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ಮತ್ತು ಸರಕಾರದಿಂದ ಪರಿಹಾರವನ್ನು ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಕನ್ನಡ ರಕ್ಷಣ ಸಮಿತಿಯಿಂದ ಉಗ್ರವಾದ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಸಿದ್ದರು.

Check Also

ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ

ಬೆಳಗಾವಿ- ಕಳೆದ ವರ್ಷ    ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ್ಲೆ …

Leave a Reply

Your email address will not be published. Required fields are marked *