Breaking News
Home / Breaking News / ಸಂಸದ ಅಂಗಡಿ ಸೇರಿದಂತೆ ನೂರಾರು ಕಾರ್ಯಕರ್ತರಿಂದ ಪ್ರವೀಣ ಟಕ್ಕಳಕಿಗೆ ಅದ್ದೂರಿ ಸ್ವಾಗತ

ಸಂಸದ ಅಂಗಡಿ ಸೇರಿದಂತೆ ನೂರಾರು ಕಾರ್ಯಕರ್ತರಿಂದ ಪ್ರವೀಣ ಟಕ್ಕಳಕಿಗೆ ಅದ್ದೂರಿ ಸ್ವಾಗತ

ಬೆಳಗಾವಿ-ಮಹಾರಾಷ್ಟ್ರದ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ನಂತರ ಜಾಮೀನಿನ ಮೇಲೆ ಹೊರಬಂದಿರುವ ಆರೋಪಿ ಪ್ರವೀಣ ಟಕ್ಕಳಕಿ ಅವರನ್ನು ಭಜರಂಗ ದಳ ವಿವಿಧ ಹಿಂದೂ ಸಂಘಟನೆಗ¼ ನೂರಾರು ಕಾರ್ಯಕರ್ತರು ಸಾಂಬ್ರಾ ನಿಲ್ದಾಣದ ಬಳಿ ಶನಿವಾರ ಅದ್ಧೂರಿಯಾಗಿ ಸ್ವಾಗತಿಸಿದರು.
ಸಂಸದ ಸುರೇಶ ಅಂಗಡಿ ಸಹ ವಿಮಾನ ನಿಲ್ದಾಣಕ್ಕೆ ಬಂದು ಪ್ರವೀಣ ಅವರನ್ನು ಬರಮಾಡಿಕೊಂಡರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಕಾ (ಮಹಾರಾಷ್ಟ್ರ ಕಂಟ್ರೋಲ್ ಆಫ್ ಕ್ರೈಂ ಆ್ಯಕ್ಟ್) ಕಾಯ್ದೆಯಡಿ ದಾಖಲಿಸಿದ್ದ ಮಹಾರಾಷ್ಟ್ರ ಸರಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಇದರಿಂದ ಜಾಮೀನು ಪಡೆದಿರುವ ಪ್ರವೀಣ ಅವರು ಮುಂಬೈನಿಂದ ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು.
ಅವರ ಬರುವಿಕೆಯ ಹಿನ್ನೆಲೆಯಲ್ಲಿ ಭಜರಂಗ ದಳದ ಗೋಕಾಕ ತಾಲೂಕು ಘಟಕದ ನೂರಾರು ಕಾರ್ಯಕರ್ತರು ಒಂದುವರೆ ತಾಸು ಮೊದಲೇ ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದರು. ಪ್ರವೀಣ ಅವರು ನಿಲ್ದಾಣದಿಂದ ಹೊರಬರುತ್ತಿದ್ದಂತೆ ಹೂ ಮಾಲೆ ಹಾಕಿ ಭಾರತದ ಪರ ಜಯಘೋಷ ಕೂಗಿದರು. ಬಳಿಕ ಕಾರಿನ ಮೂಲಕ ಅವರನ್ನು ಗೋಕಾಕಕ್ಕೆ ಕರೆದೊಯ್ದರು.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೇಗಾಂವ್‍ನಲ್ಲಿ 2008 ಸೆಪ್ಟೆಂಬರ್ 29ರಂದು ಸ್ಫೋಟ ಸಂಭವಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಕರ್ನಲ್ ಪುರೋಹಿತ ಅವರಿಗೆ ಸಹಕರಿಸಿದ್ದಾರೆ ಎನ್ನುವ ಆರೋಪದ ಮೇಲೆ 2011ರ ಫೆಬ್ರುವರಿಯಲ್ಲಿ ಪ್ರವೀಣ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಮುಂಬೈನ ತಲೋಜಾ ಕಾರಾಗ್ರಹದಲ್ಲಿ ಅವರನ್ನು ಇರಿಸಲಾಗಿತ್ತು.

ಮಹಾರಾಷ್ಟ್ರದ ಮಕೋಕಾ ಕಾಯ್ದೆಯಿಂದಾಗಿ ಜಾಮೀನು ಪಡೆಯಲು ವಿಳಂಬವಾಯಿತು. ಸದ್ಯ ಸಂಘಟನೆ ಬದಲು ಮನೆಯ ಕಡೆ ಗಮನಹರಿಸುತ್ತೇನೆ” ಎಂದು ಪ್ರವೀಣ ಟಕ್ಕಳಕಿ ಹೇಳಿದರು.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *