Breaking News
Home / ಬೆಳಗಾವಿ ನಗರ / ಬೆಳಗಾವಿಯಲ್ಲಿ ಚಲೇ… ಜಾವ್… ಕ್ರಾಂತಿ ಚಳುವಳಿಯ ಸ್ಮರಣೆ

ಬೆಳಗಾವಿಯಲ್ಲಿ ಚಲೇ… ಜಾವ್… ಕ್ರಾಂತಿ ಚಳುವಳಿಯ ಸ್ಮರಣೆ


ಬೆಳಗಾವಿ: 1942 ಅಗಸ್ಟ್ 9 ರಂದು ಮುಂಬೈನ ಆಜಾದ ಮೈದಾನದಲ್ಲಿ ಆರಂಭವಾಗಿದ್ದ ಚಲೇ ಜಾವ್ ಚಳುವಳಿಯ ಕ್ರಾಂತಿಕಾರಿ ಸನ್ನಿವೇಶಗಳನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮ ಬೆಳಗಾವಿ ನಗರದ ಹುತಾತ್ಮ ವೃತ್ತದಲ್ಲಿ ನಡೆಯಿತು.
ಮುಖ್ಯ ಅರಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ಐಹೊಳೆ, ಮಹಾಪೌರ ಸರಿತಾ ಪಾಟೀಲ, ಉಪಮಹಾಪೌರ ಸಂಜಯ ಶಿಂದೆ, ಜಿ.ಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ, ಸ್ವತಂತ್ರ್ಯ ಹೋರಾಟಗಾರರಾದ ಪರಶುರಾಮ ನಂದಿಹಳ್ಳಿ, ವಿಠ್ಠಲರಾವ ಯಾಳಗಿ, ಅಶೋಕ ಯಾಳಗಿ, ಹಿರಿಯ ಪತ್ರಕರ್ತ ಸುಭಾಷ ಕುಲಕರ್ಣಿ, ಮದನ ಬಾಮನೆ ಸೇರಿದಂತೆ ಹಲವಾರು ಜನ ಸ್ವಾತಂತ್ರ್ಯ ಯೋಧರು ಭಾಗವಹಿಸಿ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷೆ ಆಶಾ ಐಹೊಳೆ 1942 ರಲ್ಲಿ ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಕೊನೆಯ ಹೋರಾಟ ನಡೆಯಿತು ಈ ಹೋರಾಟ ಕ್ರಾಂತಿ ಸ್ವರೂಪ ಪಡೆದುಕೊಂಡಿದ್ದರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಯಾವುದೆ ಒಂದು ಹೋರಾಟ ಕ್ರಾಂತಿಯ ಸ್ವರೂಪ ಪಡೆಯಬೇಕಾದರೆ ಹೋರಾಟದ ಬಗ್ಗೆ ಜನರಿಗೆ ತಿಳುವಳಿಕೆ ಇರಬೇಕು. ಅಂದಾಗ ಮಾತ್ರ ಚಳುವಳಿ ಕ್ರಾಂತಿ ಸ್ವರೂಪ ಪಡೆಯುತ್ತಿದೆ ಎಂದು ಐಹೊಳೆ ಹೇಳಿದರು.
ಮಹಾಪೌರ ಸರಿತಾ ಪಾಟೀಲ, ಪರಶುರಾಮ ನಂದಿಹಳ್ಳಿ, ಸುಭಾಷ ಕುಲಕರ್ಣಿ ಮಾತನಾಡಿ ಕ್ವಿಟ್ ಇಂಡಿಯಾ ಚಳುವಳಿಯ ಸನ್ನಿವೇಶ ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದರು. ಕ್ರಾಂತಿ ದಿನದ ಅಂಗವಾಗಿ ಹುತಾತ್ಮ ವೃತ್ತದಲ್ಲಿ ಧ್ವಜಾರೋಹಣ ಮಾಡಿ ಹೋರಾಟಗಾರರಿಗೆ ರಾಷ್ಟ್ರ ನಮನ ಸಲ್ಲಿಸಲಾಯಿತು.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *