Breaking News
Home / Breaking News / ರಾಕಸಕೊಪ್ಪ ಜಲಾಶಯ ಭರ್ತಿ ,ನೀರು ಬಿಡುಗಡೆ

ರಾಕಸಕೊಪ್ಪ ಜಲಾಶಯ ಭರ್ತಿ ,ನೀರು ಬಿಡುಗಡೆ

ಬೆಳಗಾವಿ- ಹಲವಾರು ದಶಕಗಳ ಬಳಿಕ ಮಳೆಗಾಲದಲ್ಲಿ ಅಲ್ಪಾವಧಿಯಲ್ಲಿ ಬೆಳಗಾವಿ ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು ಜಲಾಶಯದ ಎರಡು ಗೇಟ್ ಗಳನ್ನು ತೆರದು ನೀರು ಬಿಡುಗಡೆ ಮಾಡಲಾಗಿದೆ

ಕಳೆದ ವರ್ಷ ರಾಕಸಕೊಪ್ಪ ಜಲಾಶಯ ಸೆಪ್ಟಂಬರ್ ತಿಂಗಳಲ್ಲಿ ಭರ್ತಿಯಾಗಿತ್ತು ಕಳೆದ ಒಂದು ವಾರದಿಂದ ಸಹ್ಯಾದ್ರಿಯ ಮಡಿಲಲ್ಲಿ ವರ್ಷಧಾರೆ ನಿರಂತರವಾಗಿರುವದರಿಂದ ಈ ವರ್ಷ ಜುಲೈ ತಿಂಗಳಲ್ಲಿಯೇ ಜಲಾಶಯ ಭರ್ತಿಯಾಗಿರುವದು ಸಂತಸದ ಸಂಗತಿಯಾಗಿದೆ

ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು ಮುಂಜಾಗೃತಾ ಕ್ರಮವಾಗಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ ಜಲಾಶಯದ ಭರ್ತಿಗೆ ನಿನ್ನೆ ಸಂಜೆ ಕೇವಲ ಎರಡು ಅಡಿ ಮಾತ್ರ ಬಾಕಿ ಇತ್ತು ಇಂದು ಬೆಳಿಗ್ಗೆ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದ ಪರಿಣಾಮ ಜಲಾಶಯದ ಗೇಟ್ ಗಳನ್ನು ತೆರೆಯಲಾಗಿದ್ದು ವರ್ಷಧಾರೆ ಬೆಳಗಾವಿ ನಗರ ನಿವಾಸಿಗಳಲ್ಲಿ ಹರ್ಷ ತಂದಿದೆ

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *