Breaking News
Home / Breaking News / ನನ್ನ ಟಿಕೆಟ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ- ಸತೀಶ ಜಾರಕಿಹೊಳಿ

ನನ್ನ ಟಿಕೆಟ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ- ಸತೀಶ ಜಾರಕಿಹೊಳಿ

ನನ್ನ ಟಿಕೇಟ್ ತಪ್ಪಿಸಲು ಯಾರಿಂದಲ್ಲೂ ಸಾದ್ಯವಿಲ್ಲ. ಎಂದು
ಹುದಲಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೋಳಿ ಹೇಳಿದ್ದಾರೆ
ಹುದಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿಆತನಾಡಿದ ಅವರು
ಅಪರೋಕ್ಷವಾಗಿ ಸಹೋದರ ಲಕನ್ ಜಾರಕಿಹೋಳಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ
ನನ್ನ ಟಿಕೇಟ್ ಬೇಡ ಎನ್ನುವವರಿಗೆ ಟಿಕೇಟ್ ನಿರ್ಧರಿಸುವ ಶಕ್ತಿ‌ ನನಗಿದೆ ಎಂದು ಸತೀಶ ಜಾರಕಿಹೊಳಿ ಬಹಿರಂಗವಾಗಿ ಗುಡುಗಿದ್ದಾರೆ
೬೦ವರ್ಷ ರಾಜಕೀಯದಲ್ಲಿ ಯಾರಿಗೂ ನಾನು ಸುಲಭವಾಗಿ ಸೋಲು ಒಪ್ಪಿಕೊಂಡಿಲ್ಲ.
ಜಾರಕಿಹೋಳಿ ಕುಟುಂಬದಲ್ಲಿ‌ ಮೂರನಾಲ್ಕು ಜನರಿದ್ದಾರೆ. ಅವರೆಲ್ಲಾ ಬೇರೆ ಬೇರೆ.ಆದ್ರೆ ನಾನೇ ಬೇರೆ.
ನಾನು ರಾಯಚೂರಿನಿಂದ,ಖಾನಾಪೂರದಿಂದ ಸ್ಪರ್ಧಿಸುತ್ತೇನೆ ಎಂದು ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಯಾರೂ ಕಿವಿಗೊಡಬೇಕಾಗಿಲ್ಲ ಎಂದು ಸತೀಶ ಜಾರಕಿಹೊಳಿ ಮನಬಿಚ್ಚಿ ತಮ್ಮ ಇಂಗಿತ ವ್ಯೆಕ್ತಪಡಿಸಿದ್ದಾರೆ
ಮೊದಲು ಕಾಂಗ್ರೆಸ್ ಅಂತಿದ್ದರು,ಈಗ ಬಿಜೆಪಿ ಅಂತಾರೆ.ನಾಳೆ ಎಂಇಎಸ್ ಅಂದ್ರು ಆಶ್ಚರ್ಯವಿಲ್ಲ.
ಚುನಾವಣೆ ಸಮೀಸುತ್ತಿದ್ದಂತೆ ಈ ರೀತಿ ಟಿಕೇಟ್ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಪಕ್ಕದ ಗೋಕಾಕ ಕ್ಷೇತ್ರದಲ್ಲಿನ ಪರಿಸ್ಥಿತಿ ನಮ್ಮ ಕ್ಷೇತ್ರದಲ್ಲಿ ಬರುವುದು ಬೇಡ.
ಕ್ರಿಕೇಟ್ ,ಕಬ್ಬಡಿ ಆಡಿಸಿ,ಗುಡಿಕಟ್ಟಿಸಲು ಹಣ ನೀಡುವವರು ಇಲ್ಲಿ ಬಂದು ಏನು ಮಾಡುತ್ತಾರೆ.
ನಾನು ಜನರನ್ನ ಹಾಳು ಮಾಡಲು ಹಣ ಹಂಚುವುದಿಲ್ಲ.
ಸಾಮಾಜಿಕ ಕಾರ್ಯಕ್ಕಾಗಿ‌ ಹಣ ಖರ್ಚು ಮಾಡುತ್ತೇನೆ.
ಸಂಜೆ ಊಟ, ಖರ್ಚಿಗೆ ಹಣಕ್ಕಾಗಿ ಮಾರು ಹೋಗಬೇಡಿ ಎಂದು ತಮ್ಮ ಬೆಂಬಲಿಗರಿಗೆ ಕಿವಿಮಾತು ಹೇಳಿದರು
ಸಾಮಾಜಿಕ ಸಂಘ-ಸಂಸ್ಥೆಗೆ ಪ್ರತಿತಿಂಗಳು ಲಕ್ಷಾಂತರ ರೂ.ಖರ್ಚು ಮಾಡುತ್ತೇನೆ.
ಅದನ್ನ ಬಿಟ್ಟು ಕುರಿ ಹೊಡೆದು ಊಟ ಮಾಡಿಸಿ ಹಣ ಖರ್ಚುಳ ಮಾಡುವುದಿಲ್ಲ.
ನೂರು ರೂಪಾಯಿ ಕೊಟ್ರೆ ಸ್ವಾಭಿಮಾನ ಬೇರೆಯವರಿಗೆ ಧಾರೆ ಎರೆಯಬೇಡಿ.
ಯಮಕನಮರಡಿ ಕ್ಷೇತ್ರದ ಜನರಿಗೆ ಸತೀಶ ಜಾರಕಿಹೋಳಿ ಮನವಿ.
ಈಗಿನಿಂದಲೇ ಚುನಾವಣೆಗೆ ಸಿದ್ದರಾಗಿ,ನಾನು ಪ್ರಚಾರಕ್ಕೆ ಬರುವುದಿಲ್ಲ ನೀವೆ ಮುಂದೆ ನಿಂತು ಚುನಾವಣೆ ಮಾಡಿ.
ಕಳೆದ ಎಂಎಲ್ ಸಿ ಚುನಾವಣೆಯಲ್ಲಿ ಸೋಲಾಗಿದೆ ನಿಜ.
ಅದನ್ನ ಮುಂದಿನ ದಿನದಲ್ಲಿ ಬಡ್ಡಿ ಸಮೇತ ವಸೂಲಿ ಮಾಡೋಣ ಎಂದು ಸತೀಶ ಹೇಳಿದರು

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *