Breaking News
Home / Breaking News / ಶಾಸಕ ಸಂಜಯ್ ಪಾಟೀಲರಿಗೆ ಸತೀಶ ಜಾರಕಿಹೊಳಿ ಟಾಂಗ್…..!!!

ಶಾಸಕ ಸಂಜಯ್ ಪಾಟೀಲರಿಗೆ ಸತೀಶ ಜಾರಕಿಹೊಳಿ ಟಾಂಗ್…..!!!

ಬೆಳಗಾವಿ- ಶಾಸಕ ಸಂಜಯ ಪಾಟೀಲ್ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಬೇಕಾ ಬಿಟ್ಟಿ ಹೇಳಿಕೆ ನೀಡುವದು ಸರಿಯಲ್ಲ ಅವರು ಹಿಂದೂನೆ ಅಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಂಜಯ್ ಪಾಟೀಲರಿಗೆ ಟಾಂಗ್ ನೀಡಿದರು

ಜೈನ ತೀರ್ಥಂಕರು ಹಿಂದೂ ಧರ್ಮದಲ್ಲಿ ಆದ ಅನ್ಯಾಯವನ್ನು ಸಹಿಸಲಾಗದೇ ಹಿಂದೂ ಧರ್ಮದಿಂದ ಹೊರ ಬಂದು ತಮ್ಮದೇ ಆದ ಜೈನ ಧರ್ಮ ಸ್ಥಾಪಿಸಿಕೊಂಡಿದ್ದು ಇತಿಹಾಸ ಸಂಜಯ ಪಾಟೀಲ್ ಮೊದಲು ಇತಿಹಾದ ತಿಳಿದುಕೊಳ್ಳಬೇಕು ಆಮೇಲೆ ಮಾತಾಡಬೇಕು ಎಂದು ಸತೀಶ್ ಜಾರಕಿಹೊಳಿ ತಿರಗೇಟು ನೀಡಿದ್ದಾರೆ
ಟಿಪ್ಪು ಸುಲ್ತಾನ ಈ ದೇಶದ ಪ್ರಜೆ ಅವರ ಕಾರ್ಯ ವ್ಯಾಪ್ತಿಯಲ್ಲಿ ಅನೇಕ ಜನಪರ ನಿರ್ಧಾರಗಳು ಆಗಿವೆ ಅನೇಕ ದೂರದೃಷ್ಠಿಯ ಅಭಿವೃದ್ಧಿ ಕೆಲಸಗಳು ನಡೆದಿವೆ ಇತಿಹಾಸ ತಿಳಿದುಕೊಳ್ಳದೇ ಶಾಸಕ ಸಂಜಯ ಪಾಟೀಲ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಟಿಪ್ಪು ಹಿಂದೂ ವಿರೋಧಿ ಅಂತ ಹೇಳಿರುವ ಶಾಸಕ ಸಂಜಯ್ ಪಾಟೀಲ್ ಹಿಂದೂನೇ ಅಲ್ಲ ಅನ್ನೋದನ್ನು ತಿಳಿದು ಮಾತಾಡಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಶಾಸಕ ಸಂಜಯ ವಿರುದ್ಧ ವಾಗ್ದಾಳಿ ನಡೆಸಿದರು
ಯಮಕನ ಮರಡಿ ಕ್ಷೇತ್ರವನ್ನು ಲಖನ್ ಜಾರಕಿಹೊಳಿ ಅವರಿಗೆ ಬಿಟ್ಟು ಕೊಡ್ತೀರಾ ಎಂದು ಮಾದ್ಯಮ ಮೀತ್ರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು ಲಖನ್ ಯಾರು ? ತತ್ವಜ್ಞಾನಿನೋ..ವಿಚಾರವಾದಿನೋ..ದೊಡ್ಡ ಉದ್ಯಮಿಯೋ ನಾನೇಕೆ ಯಮಕನಮರಡಿ ಕ್ಷೇತ್ರ ಲಖನ್ ಗೆ ಬಿಟ್ಟು ಕೊಡಬೇಕು ಸ್ಪರ್ದೆ ಮಾಡಲು ಅನೇಕ ಕ್ಷೇತ್ರಗಳಿವೆ ಅನೇಕ ಪಕ್ಷಗಳಿವೆ ಅವರು ಬೇಕಾದರೆ ಸ್ಪರ್ದೆ ಮಾಡಲಿ ಎಂದು ಅದನ್ನು ಬಿಟ್ಟು ಯಮಕನಮರಡಿ ಕ್ಷೇತ್ರವನ್ನು ಲಖನ್ ಗೆ ಬಿಟ್ಟು ಕೊಡಲು ಆತ ತತ್ವಜ್ಞಾನಿಯೂ ಅಲ್ಲ ವಿಚಾರವಾದಿಯೂ ಅಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು

  • ಅದಕ್ಕು ಮೊದಲು ಡಿ.೬ ರಂದು ಡಾ.ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಹಿನ್ನಲೆ ಮೌಢ್ಯ ವಿರೋಧಿ ಸಂಕಲ್ಪ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ
    ಬೆಳಗಾವಿ ಸದಾಶಿವ ನಗರದ ಸ್ಮಶಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಪ್ರತಿ ವರ್ಷದಂತೆ ಈ ವರ್ಷವೂ ಸ್ಮಶಾನದಲ್ಲಿ ಮೌಡ್ಯದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸ್ಮಶಾನದಲ್ಲಿ ನಡೆಯಲಿವೆ ಎಂದು ಸತೀಶ ಜಾರಕಿಹೊಳಿ ಹೇಳಿದರು
    ವೈಚಾರಿಕ ಜಾಗೃತಿ ಮೂಡಿಸಲು ಆಂದೋಲನ ನಡೆಸಲಾಗುತ್ತಿದೆ
    ಇಂದಿನಿಂದ ರಾಜ್ಯಾದ್ಯಂತ ಮೌಢ್ಯ ವಿರೋಧಿ ಜಾಗೃತಿ ಜಾಥ ಆರಂಭವಾಗಿದೆ
    ಸ್ಮಶಾನದಲ್ಲಿ ಮೌಢ್ಯ ವಿರೋಧಿ ಚಿಂತನಗೋಷ್ಠಿ
    ನಿಜಗುಣಾನಂದ ಸ್ವಾಮಿ, ಪ್ರಭು ಚನ್ನಬಸವ ಸ್ವಾಮಿ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ, ಶಾಸಕ ವೈ ಎಸ್ ವಿ ದತ್ತಾ, ಪುಟ್ಟಣಯ್ಯ ಭಾಗಿಯಾಗಲಿದ್ದಾರೆ ಡಿ 6 ರಂದು
    ರಾತ್ರೀ ಸ್ಮಶಾನದಲ್ಲಿ ಶಾಸಕ ಸತೀಶ ಜಾರಕಿಹೊಳಿ ಮತ್ತು ಮಾನವ ಬಂಧುತ್ವ ವೇದಿಕೆಯ ಮುಖಂಡರು ವಾಸ್ತವ್ಯ ಮಾಡಲಿದ್ದಾರೆ

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *