Breaking News
Home / Breaking News / ಬಡ ಬ್ರಾಹ್ಮಣರ ಭೂಮಿ ಕಬಳಿಸಲು ಸತೀಶ ಜಾರಕಿಹೊಳಿ ಹನ್ನಾರ- ಮುನವಳ್ಳಿ ಆರೋಪ

ಬಡ ಬ್ರಾಹ್ಮಣರ ಭೂಮಿ ಕಬಳಿಸಲು ಸತೀಶ ಜಾರಕಿಹೊಳಿ ಹನ್ನಾರ- ಮುನವಳ್ಳಿ ಆರೋಪ

ಬೆಳಗಾವಿ: ಖಾಸಗಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸಿ ಜನರಿಗೆ ಪ್ರಚೋದನೆ ನೀಡುತ್ತಿರುವ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಫಿರೋಜ ಸೇಠ ಅವರ ಶಾಸಕತ್ವ ರದ್ದತಿಗೆ ಕೋರಿ ಹೈಕೋರ್ಟ್‍ಗೆ ತಕರಾರು ಅರ್ಜಿ(ರಿಟ್) ಅರ್ಜಿ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಜಾಗದಲ್ಲಿ ಇವರ್ಯಾರು ಹಕ್ಕು ಹೊಂದಿಲ್ಲ. ಆದರೆ ಜಾಗ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಶಾಸಕ ಸ್ಥಾನಕ್ಕೆ ಅಗೌರವದಿಂದ ನಡೆದುಕೊಳ್ಳುತ್ತಿರುವ ಇವರನ್ನು ಶಾಸಕತ್ವ ರದ್ದು ಮಾಡಬೇಕು ಎಂದು ನ್ಯಾಯಾಲಯಕ್ಕೆ ಕೋರಲಾಗುವುದು ಎಂದು ವಿವರಿಸಿದರು.
ನಗರದ ಹೃದಯ ಭಾಗದಲ್ಲಿರುವ ಜಾಗ ಅಭಿವೃದ್ಧಿ ಪಡಿಸಿ ಸುಮಾರು 5-6 ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು. ಈ ಎಲ್ಲವೂ ಮತಗಳು ಕೈ ತಪ್ಪಬಹುದೆಂಬ ಆತಂಕ ಶಾಸಕರಿಗೆ ಕಾಡುತ್ತಿದೆ. ಇದರಲ್ಲಿ ಮತ್ತೆ ತಲೆ ಹಾಕಿದರೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಇಬ್ಬರೂ ಶಾಸಕರು ಅನಾವಶ್ಯಕವಾಗಿ ಈ ಜಾಗದಲ್ಲಿ ತಲೆ ಹಾಕುತ್ತಿದ್ದಾರೆ. ಜನರಲ್ಲಿ ಭಯ ಹುಟ್ಟಿಸಿ, ಪ್ರಚೋದನಕಾರಿಯಾಗಿ ಹೇಳಿಕೆ ನೀಡುತ್ತಿರುವ ಶಾಸಕರು ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಬಡ ಬ್ರಾಹ್ಮಣರ ಭೂಮಿ ಕಬಳಿಸಲು ಷಡ್ಯಂತ್ರ ನಡೆಸಿದ್ದಾರೆ ಎಂದು ದೂರಿದರು.
ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ಶಾಸಕರ ಗುಲಾಮರಂತೆ ವರ್ತಿಸುತ್ತಿದ್ದಾರೆ. ಇದನ್ನು ಕೈ ಬಿಟ್ಟು ತಮ್ಮ ಕರ್ತವ್ಯ ನಿರ್ವಹಿಸಬೇಕು. ಪೋಲೀಸರೂ ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಶುಕ್ರವಾರ ಮಾರ್ಕೆಟ್ ಪೋಲೀಸ್ ಠಾಣೆಯಿಂದ ನಮಗೆ ನೋಟಿಸ್ ಬಂದಿದೆ. ನ್ಯಾಯಾಲಯದ ಆದೇಶದಂತೆ ರಕ್ಷಣೆ ನೀಡಲು ಪೋಲೀಸ್ ಇಲಾಖೆ ಸಿದ್ಧವಾಗಿದೆ. ಅವಶ್ಯವಿರುವ ಸಿಬ್ಬಂದಿಗಳೆಷ್ಟು ಬೇಕೆಂದು ತಿಳಿಸಲಾಗಿದೆ. ನಿಮ್ಮ ಕಬ್ಜಾ ವಹಿವಾಟಿಗೆ ಯಾರಾದರೂ ತೊಂದರೆ ನೀಡುತ್ತಿದ್ದರೆ ಅಂಥವರ ಹೆಸರು ಹೇಳಿದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನೀಡಿದೆ ಎಂದು ತಿಳಿಸಿದರು.
ಒಟ್ಟಾರೆ ಶಂಕರ ಮುನವಳ್ಳಿ ಮಾಜಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಹಾಗು ಸೇಠ ವಿರುದ್ಧ ಕಿಡಿಕಾರಿದ್ದಾರೆ

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *