Breaking News
Home / ಬೆಳಗಾವಿ ನಗರ / ವಂದೇ ಮಾತರಂ ಭಾ – ರಥ ರಾಜ್ಯ ಅಭಿಯಾನ

ವಂದೇ ಮಾತರಂ ಭಾ – ರಥ ರಾಜ್ಯ ಅಭಿಯಾನ

ಬೆಳಗಾವಿ:8 ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆದೇಶದಂತೆ
ಸ್ವಾತಂತ್ರ್ಯೋತ್ಸವವನ್ನು ಕೇವಲ ಒಂದು ದಿನ ಮಾತ್ರ ಆಚರಣೆ ಮಾಡಿ ಸಂಭ್ರಮಿಸದೆ ದೇಶದ ಸ್ವಾತಂತ್ರ್ಯ ಸಿಗುವಲ್ಲಿ ಮಹಾನ್ ಪುರಷರ ತ್ಯಾಗ ಬಲಿದಾನವನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಮೀಡಿಯಾ. ಎನ್. ಮೀಡಿಯಾ ಪರಿಕಲ್ಪನೆ ಮತ್ತು ನಿರ್ವಹಣೆಯ ಸರಳ ಜೀವನ ಸಹಯೋಗದಲ್ಲಿ ವಂದೇ ಮಾತರಂ ಭಾ – ರಥ ರಾಜ್ಯ ಅಭಿಯಾನಕ್ಕೆ ಬೆಳಗಾವಿಯ ಕಿಲ್ಲಾ ಕೆರೆ ಆವರಣದಿಂದ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಅನಿಲ ಬೆನಕೆ ಸೋಮವಾರ ಚಾಲನೆ ನೀಡಿದರು.
ಪಕ್ಷಾತೀತವಾಗಿ ಕೇಂದ್ರ ಸರಕಾರ ಸ್ವಾತಂತ್ರ್ಯೋತ್ಸವವನ್ನು ಹದಿನೈದು ದಿನಗಳ ಕಾಲ ಆಚರಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದ್ದರಿಂದ ಭಾ – ರಥ ರಾಜ್ಯದ ಮಹಾ ಅಭಿಯಾನದ ರ್ಯಾಲಿಯಲ್ಲಿ ಬಿಜೆಪಿಯ ಪದಾಧಿಕಾರಿಗಳು, ಸಾರ್ವಜನಿಕರು ನಗರದ ಕಿಲ್ಲಾ ಕೆರೆ ಆವರಣದಿಂದ ಬೈಕ್ ರ್ಯಾಲಿ ನಡೆಸಿ ಆರ್‍ಟಿಓ ಸರ್ಕಲ್, ಚನ್ನಮ್ಮ ವೃತ್ತ, ಬಸವೇಶ್ವರ ಸರ್ಕಲ್, ಬೋಗಾರವೇಸ್ ಸೇರಿದಂತೆ ಪ್ರಮುಖ ನಗರಗಳಲ್ಲಿ ರ್ಯಾಲಿ ನಡೆಸಿ ರಾಜಕೀಯ ನಾಯಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಹಿಡಿದು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಈ ಅಭಿಯಾನದಲ್ಲಿ ರಾಷ್ಟ್ರಾಭಿಮಾನದ ಗೌರವ, ಜಾಗೃತಿ, ಜನೋತ್ಸವ, ದೇಶದ ಐಕ್ಯೆತೆಯ ಮಹಾಪದರ್ಶನ, ರಾಜ್ಯದ ಒಂದು ಸಾವಿರ ವೀರಯೋಧರನ್ನು ನಾಡಿಗೆ ಸರ್ಮಿಪಿಸುವುದು, ರಾಜ್ಯದಲ್ಲಿ ಒಂದು ಲಕ್ಷಸಸಿ ನಡುವುದರ ಮೂಖಾಂತರ ರಾಜ್ಯಕ್ಕೆ ಚಾಲನೆ ನೀಡುವುದು, ನೂರಾರು ಜನರಿಂದ ದೇಹದಾನ ಪ್ರಮಾಣ, ಸಾರ್ವಜನಿಕರಿಂದ ರಕ್ತಧಾನ ಶಿಬಿರ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಮಹಾನ್ ಪುರಷರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ರಾಜು ಚಿಕ್ಕನಗೌಡರ, ರಾಜೀವ ಟೋಪಣ್ಣವರ, ಆನಂದ ದೇಸಾಯಿ, ದೀಪಾ ಕುಡುಚಿ, ಮಾಜಿ ಶಾಸಕ ಅಭಯ ಪಾಟೀಲ, ದೀಪಾ ಕುಡುಚಿ, ಲಿನಾ ಟೋಪಣ್ಣವರ, ಜಯಶ್ರೀ ಪಾಟೀಲ ಸೇರಿದಂತೆ ನೂರಾರು ಜನರು

About BGAdmin

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *